ಇನ್ನಾದರೂ ಯುವ ಸಮೂಹ ಎಚ್ಚೆತ್ತುಕೊಳ್ಳಿ
ಈಗಿನವರದ್ದು ಏನಿದ್ದರೂ 5G ಜಮಾನ. ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಪೇಜ್ ಸೃಷ್ಟಿಸಿ ಬೆದರಿಕೆ, ದ್ವೇಷ ಬಿತ್ತುವ ಪೋಸ್ಟ್ ಹಾಕಿ ಪೌರುಷ ತೋರಿಸುತ್ತಾರೆ. ಬಹುತೇಕ ಯುವ ಸಮೂಹ ಇಂತಹ ಪರಾಕ್ರಮದಲ್ಲೇ ನಿರತರಾಗಿರುತ್ತಾರೆ. ಇವರು ಹಾಕುವ ಒಂದು ಪೋಸ್ಟ್ ಸ್ವಾಸ್ಥ್ಯ ಸಮಾಜವನ್ನು ಕೆಡಿಸಿಬಿಡುತ್ತದೆ. ಧರ್ಮ ದಂಗಲ್ ಗೂ ಕಾರಣವಾಗಿ ಬಿಡುತ್ತದೆ. ಕೆಲವರು ವಿದೇಶಗಳಲ್ಲೂ ಕೂತು ನಮ್ಮದು ಸೇಫ್ ಜಾಗ ಅಂತ ತಿಳಿದುಕೊಂಡು ದ್ವೇಷ ಬಿತ್ತುವ ಪೋಸ್ಟ್ ಹಂಚುತ್ತಾರೆ . ನಿಮ್ಮ ಈ ಅತಿರೇಕದ ವರ್ತನೆ ಒಂದಲ್ಲ ಒಂದು ದಿನ ಹೊರಗೆ ಬಂದೇ ಬಿಡುತ್ತದೆ. ವಿದೇಶದಲ್ಲಿ ಕೂತರೂ ಪೊಲೀಸರು LOC ಹೊರಡಿಸಿ ನಿಮ್ಮನ್ನು ಬಂಧಿಸುವ ಸಾಧ್ಯತೆ ಇರುತ್ತದೆ. ಇದೀಗ ವಿದೇಶದಿಂದ ತಾಯ್ನಾಡಿಗೆ ಆಗಮಿಸಲು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೆಲವರನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ. ಯಾಕೆ ಗೊತ್ತಾ? ಸಾಮಾಜಿಕ ಜಾಲತಾಣಗಳಲ್ಲಿ ಇವರು ಅವಹೇಳನಕಾರಿ ಪೋಸ್ಟ್ ಹಾಕಿ ಸಮಾಜದ ಸ್ವಾಸ್ಥ್ಯಕ್ಕೆ ಭಂಗ ಉಂಟು ಮಾಡಿರುವ ಕಾರಣಕ್ಕಾಗಿ. ಇನ್ನಾದರೂ ಯುವ ಸಮೂಹ ಪಾಠ ಕಲಿಯಬೇಕಿದೆ. ನೀವೆಷ್ಟೆ ಜಾಣರು ಅಂದುಕೊಂಡರೂ ನಿಮಗಿಂತ ಹತ್ತು ಪಾಲು ಜಾಣರು ಪೊಲೀಸರು ಆಗಿರುತ್ತಾರೆ.
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ನೆಮ್ಮದಿಗೆ ಅಪಾಯವುಂಟು ಮಾಡುವ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸಿದ ಆರೋಪದಲ್ಲಿ ಮಂಗಳೂರು ನಗರ ಕಮಿಷನರೇಟ್ ವ್ತಾಪ್ತಿಯಿಂದ ವಿಶೇಷ ತಂಡಗಳನ್ನು ರಚನೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ ಹೆಜಮಾಡಿಯ ಮೊಹಮ್ಮದ್ ಅಸ್ಲಾಂ, (ಪ್ರಾಯ:23 ವರ್ಷ) ಎಂಬಾತನು ಸೌದಿ ಅರೇಬಿಯಾದಿಂದ team_jokerzzz._ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 88/2025 ಕಲಂ.192, 353 (2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದ ಆರೋಪಿ ಮೊಹಮ್ಮದ್ ಅಸ್ಲಾಂ ಎಂಬಾತನ ವಿರುದ್ದ LOC ಹೊರಡಿಸಿ, ದಸ್ತಗಿರಿ ಮಾಡಲಾಗಿದೆ.
ಕಾಟಿಪಳ್ಳ ಇಡ್ಯಾ ನಿವಾಸಿ ಚೇತನ್ (ಪ್ರಾಯ: 20) ಹಳೆಯಂಗಡಿ ಚೇಳ್ಯಾರು ನಿವಾಸಿ ನಿತಿನ್ ಅಡಪ (ಪ್ರಾಯ:23 ವರ್ಷ)
ಎಂಬುವರು ಮುಸ್ಲಿಂ ಹೆಸರಿನ ಸಿಮ್ ಕಾರ್ಡ್ ನ್ನು ಬಳಸಿಕೊಂಡು team_karna_surathkal ಎಂಬ Instagram ಫೇಜ್ ನ್ನು ತೆರೆದಿದ್ದು, ಸದ್ರಿ ಪೇಜ್ ನಲ್ಲಿ ಚೆನ್ನಪ್ಪ @ ಮುತ್ತು ಸುರತ್ಕಲ್ ಎಂಬಾತನು ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 58/2025 ಕಲಂ. 196(1), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಚೇತನ್ ಮತ್ತು ನಿತಿನ್ ಅಡಪ ಎಂಬವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ.
ಅರ್ಕುಳ ಕೊಪ್ಪಳ ನಿವಾಸಿ ರಿಯಾಝ್ ಇ್ರಬಾಹಿಂ, (ಪ್ರಾಯ:30 ವರ್ಷ) ಎಂಬಾತನು ಸೌದಿ ಅರೇಬಿಯಾದಿಂದ Beary_royal_nawab ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ, ಆಧಾರದಲ್ಲಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 44/2025 ಕಲಂ. 353 (2) ಭಾರತೀಯ ನ್ಯಾಯ ಸಂಹಿತೆ ಮತ್ತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 42/2025 ಕಲಂ.353 (1) (c), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ರಿಯಾಝ್ ಇ್ರಬಾಹಿಂ ಎಂಬಾತನ ವಿರುದ್ದ LOC ಹೊರಡಿಸಿ, ದಸ್ತಗಿರಿ ಮಾಡಲಾಗಿದೆ.
ಕಸಬಾ ಬೆಂಗ್ರೆ ನಿವಾಸಿ ಜಮಾಲ್ ಝಾಕೀರ್ (ಪ್ರಾಯ:21 ವರ್ಷ) ಎಂಬಾತನು Troll_bengare_ro_makka ಎಂಬ Instagram ಪೇಜ್ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 44/2025 ಕಲಂ.353 (1) (c), 353(2) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ. ಸದ್ರಿ ಪ್ರಕರಣದಲ್ಲಿ ಜಮಾಲ್ ಝಾಕೀರ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.
ಹಳೆಯಂಗಡಿ ನಿವಾಸಿ ಗುರು ಪ್ರಸಾದ್ ಎಂಬಾತನು Guru dprasad Haleyangadi ಎಂಬ Facebook ಖಾತೆಯ ಮುಖಾಂತರ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 53/2025 ಕಲಂ.196(1),(A),353(2),79,56 ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ, ಸದ್ರಿ ಗುರು ಪ್ರಸಾದ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.
ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ , ಉಪ ಪೊಲೀಸ್ ಆಯುಕ್ತರರಾದ ಸಿದ್ದಾರ್ಥ ಗೋಯಲ್ (ಕಾ ಮತ್ತು ಸು) ಮತ್ತು ರವಿಶಂಕರ್ (ಅ ಮತ್ತು ಸಂ) ರವರ ಮಾರ್ಗದರ್ಶನದಲ್ಲಿ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿರವರ ವಿಶೇಷ ತಂಡಗಳಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
