ದಾಖಲೆಗಾಗಿ ಇಪ್ಪತ್ತು ಸಾವಿರ ಲಂಚ.., ಬಂಟ್ವಾಳ ತಾಲೂಕು ಮಿನಿ ವಿಧಾನಸೌಧಕ್ಕೆ ಲೋಕಾಯುಕ್ತ ದಾಳಿ

ಕರಾವಳಿ

ಉಪತಹಶೀಲ್ದಾರ್, ಪ್ರಥಮ ದರ್ಜೆ ಸಹಾಯಕ, ಬ್ರೋಕರ್ ಅಂದರ್. ತಹಶೀಲ್ದಾರ್ ಗೆ ಹೆಚ್ಚಿನ ವಿಚಾರಣೆ.

ಬಂಟ್ವಾಳ ತಾಲೂಕು ಕಛೇರಿಯ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತೊಮ್ಮೆ ಬಯಲಾಗಿದೆ. ಸಜಿಪ ಮುನ್ನೂರು ನಿವಾಸಿ ಪುಷ್ಪರಾಜ್ ಎಂಬವರಿಂದ ಜಮೀನಿನ ದಾಖಲೆ ಸರಿಪಡಿಸಲು ಬಿ.ಸಿ.ರೋಡ್ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮೀಪ ಬ್ರೋಕರ್ ವಾಮದಪದವು ನಿವಾಸಿ ಗಣೇಶ್ ಎಂಬಾತನ ಮೂಲಕ ಇಪ್ಪತ್ತು ಸಾವಿರ ಲಂಚ ಪಡೆಯುತ್ತಿದ್ದ ಉಪತಹಶೀಲ್ದಾರ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ವಿಚಾರಣೆ ಸಂದರ್ಭ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೆ ಪಾಲು ಕೊಡುತ್ತಿದ್ದೇನೆಂದು ಉಪತಹಶೀಲ್ದಾರ್ ರಾಜೇಶ್ ಬಾಯ್ಬಿಟ್ಟಿದ್ದಾನೆ. ಇದರಿಂದಾಗಿ ತಹಶೀಲ್ದಾರ್ ಅವರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳ ವಿನಂತಿ ಮೇರೆಗೆ ಮಂಗಳೂರು ಅಪರ ಜಿಲ್ಲಾಧಿಕಾರಿ ರಾಜು ಕೆ. ಆಗಮಿಸಿದ್ದಾರೆ.

ಬಂಟ್ವಾಳ ತಾಲೂಕು ಮಿನಿ ವಿಧಾನಸೌಧದಲ್ಲಿ ಲಂಚಬಾಕರ ಹಾವಳಿ ಮಿತಿ ಮೀರಿದ ಬಗ್ಗೆ ಈ ಹಿಂದೆಯೇ ಸ್ಪೆಷಲ್ ನ್ಯೂಸ್ ವರದಿ ಮಾಡಿತ್ತು. ತಾಲೂಕು ಕಛೇರಿಯ ಕುಖ್ಯಾತ ಲಂಚಬಾಕ D.T.ರಾಜೇಶ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಮತ್ತು ದಲ್ಲಾಳಿ ಗಣೇಶ್ ನನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲೋಕಾಯುಕ್ತ ಕಾರ್ಯಾಚರಣೆಯಲ್ಲಿ
ಲೋಕಾಯುಕ್ತ ಎಸ್ಪಿ ಕುಮಾರಚಂದ್ರ, DYSP ಗಾನ ಪಿ.ಕುಮಾರ್, ಸುರೇಶ್ ಕುಮಾರ್, ಇನ್ಸ್ ಪೆಕ್ಟರ್ ಭಾರತಿ, ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.