60-70 ಶಾಸಕರಿದ್ದಾರೆ ಎಂದು ನಂಬಿ ಡಿಕೆಶಿಗೆ ಸಿಎಂ ಕೊಡಲು ಮುಂದಾಗಿತ್ತು.! ಅಸಲಿ ಸತ್ಯ ಗೊತ್ತಾದಾಗ ಯೂಟರ್ನ್ ಹೊಡೆದಿತ್ತು ಬಿಜೆಪಿ.!

ರಾಜ್ಯ

ರಾಜ್ಯ ರಾಜಕಾರಣದಲ್ಲಿ ಧೂಳೆಬ್ಬಿಸಿದ ಯತ್ನಾಳ್ ಸಿಡಿಸಿದ ಬಾಂಬ್

ರಾಜ್ಯ ರಾಜಕಾರಣದಲ್ಲಿ ಆ ಒಂದು ಹೇಳಿಕೆ ಮಿಂಚಿನ ಸಂಚಾರಕ್ಕೆ ಕಾರಣವಾಗಿದೆ. ಉಪಮುಖ್ಯಮಂತ್ರಿ ಡಿಕೆಶಿ ಬಿಜೆಪಿ ಸೇರ್ಪಡೆ ಬಗ್ಗೆ ಕೆಲವು ತಿಂಗಳ ಹಿಂದೆಯೇ ದೆಹಲಿಯಲ್ಲಿ ಮಹತ್ವದ ಚರ್ಚೆ ನಡೆದಿತ್ತು. ಬಿಜೆಪಿ ಸೇರ್ಪಡೆಗೆ ಡಿಕೆಶಿ ತುದಿಗಾಲಲ್ಲಿ ನಿಂತಿದ್ದರು ಎಂದು ಬಿಜೆಪಿ ಉಚ್ಛಾಟಿತ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಡಿಕೆಶಿಯವರು ಒಂದು ಕಾಲು ಕಾಂಗ್ರೆಸ್ಸಿನಲ್ಲಿ, ಮತ್ತೊಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ. ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಡಿಕೆಶಿ ಮಹತ್ವದ ಸಭೆ ನಢೆಸಿದ್ದರು. ತಾವು ಬಿಜೆಪಿಗೆ ಬಂದರೆ 60-70 ಶಾಸಕರ ಜೊತೆಗೆ ಬಿಜೆಪಿ ಸೇರಲಿದ್ದೇನೆ, ಸರಕಾರ ಪತನವಾಗಲಿದೆ ಎಂದು ಅಭಯ ನೀಡಿದ್ದರು. ಈ ಮಾತನ್ನು ನಂಬಿದ್ದ ಬಿಜೆಪಿ ಹೈಕಮಾಂಡ್ ಡಿಕೆಶಿ ಸಿಎಂ, ವಿಜಯೇಂದ್ರ ಡಿಸಿಎಂ ಮಾಡಲು ಬಿಜೆಪಿ ನಿರ್ಧರಿಸಿತ್ತು.

ಆದರೆ ಡಿಕೆಶಿ ಯವರ ಹಿಂದೆ 60-70 ಶಾಸಕರು ಇರಲಿಲ್ಲ. ಅವರ ಹಿಂದಿದ್ದದ್ದು ಬರೀ 10-15 ಶಾಸಕರಷ್ಟೇ. ಈ ಸತ್ಯ ಗೊತ್ತಾದ ಕೂಡಲೇ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಸರಕಾರ ಪತನಗೊಳಿಸಿ ಡಿಕೆಶಿ ಸಿಎಂ ಮಾಡುವ ಪ್ರಕ್ರಿಯೆಯಿಂದ ಹಿಂದೆ ಸರಿಯಿತು ಎಂದು ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.

ಯತ್ನಾಳ್ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಕೆಲವು ತಿಂಗಳುಗಳಿಂದ ಡಿಕೆಶಿ ಬಿಜೆಪಿ ನಾಯಕರ ಜೊತೆಗೆ ಆತ್ಮೀಯ ಸಖ್ಯತೆ, ಅಮಿತ್ ಶಾ ರೊಂದಿಗಿನ ಆತ್ಮೀಯತೆ, ಧರ್ಮಸ್ಥಳ ಪ್ರಕರಣದಲ್ಲಿ ಏಕಪಕ್ಷೀಯವಾಗಿ ತನಿಖೆಯನ್ನೇ ಪ್ರಶ್ನಿಸಿರುವುದು, ಸದನದಲ್ಲಿ ಆರ್ ಎಸ್ ಎಸ್ ಗೀತೆ ಪಠಣ ಡಿಕೆಶಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲಿದ್ದಾರೆ ಅನ್ನುವುದಕ್ಕೆ ಪುಷ್ಠಿ ದೊರಕಿತ್ತು. ಆ ನಂತರ ನಾನು ಹುಟ್ಟು ಕಾಂಗ್ರೆಸ್ಸಿಗ, ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದರು. ಆದರೆ ಇದೀಗ ಯತ್ನಾಳ್ ಸಿಡಿಸಿದ ಬಾಂಬ್ ಡಿಕೆಶಿ ವಿರೋಧಿಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.