ಬಜಪೆ: ಇನ್ಸ್ಟಾಗ್ರಾಮ್ ಪರಿಚಯ; ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ವಿಡಿಯೋ ಶೇರ್ ಪ್ರಕರಣ, ಆರೋಪಿಗಳು ಜೈಲಿಗೆ.

ಕರಾವಳಿ

ಅಪ್ರಾಪ್ತ ವಿದ್ಯಾರ್ಥಿನಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡು ಅತ್ಯಾಚಾರ ನಡೆಸಿ, ವಿಡಿಯೋ ಶೇಖ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಅಗಸ್ಟ್ 16 ರಂದು ಅಪ್ರಾಪ್ತ ವಿದ್ಯಾರ್ಥಿನಿ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಬಜಪೆ ಪೊಲೀಸರು ಪ್ರಕರಣ ಸಂಖ್ಯೆ 147/2025 ರಂತೆ ಆರೋಪಿಗಳ ವಿರುದ್ದ FIR ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಗುರುಪುರ ಕೈಕಂಬದ ಕಿನ್ನಿಕಂಬಳ ಬಳಿಯಿರುವ ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಗೆ ಎರಡು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಕಾರ್ತಿಕ್ ಅನ್ನುವ ಹುಡುಗನ ಪರಿಚಯವಾಗಿತ್ತು. ಇನ್ಸ್ಟಾಗ್ರಾಮ್ ನಲ್ಲಿ ಚಾಟಿಂಗ್, ಕಾಲಿಂಗ್ ಮಾಮೂಲಿಯಾಗಿತ್ತು. ಈ ಪರಿಚಯ ಪ್ರೀತಿಗೆ ಬದಲಾಗಿತ್ತು. ಜೂನ್ ತಿಂಗಳ ಕೊನೆಯ ವಾರದ ಶನಿವಾರ ಮಧ್ಯಾಹ್ನ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರ್ತಿಕ್ ತನ್ನ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗಿದ್ದ. ವಳಚ್ಚಿಲ್ ಬಳಿಯ ಹೋಟೆಲ್ ನಲ್ಲಿ ಬಿರಿಯಾನಿ, ಕೂಲ್ ಡ್ರಿಂಕ್ಸ್ ಕುಡಿಸಿ ಅಡ್ಯಾರ್ ಫಾಲ್ಸ್ ಬಳಿಯಿರುವ ಕಾಡಿಗೆ ಕರೆದುಕೊಂಡು ಹೋಗಿ ಕಾರ್ತಿಕ್ ಮತ್ತು ಆತನ ಸ್ನೇಹಿತ ರಾಕೇಶ ಸಲ್ಡಾನ್ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ರಾಕೇಶ ಸಲ್ಡಾನ್ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದ ದೃಶ್ಯಗಳನ್ನು ಕಾರ್ತಿಕ್ ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿ ತನ್ನ ಸ್ನೇಹಿತರಿಗೆ ಶೇರ್ ಮಾಡಿರುವುದಾಗಿ ದೂರು ನೀಡಿದ್ದಳು.

ಪ್ರಕರಣ ದಾಖಲಿಸಿಕೊಂಡ ಬಜಪೆ ಪೊಲೀಸರು ಅತ್ಯಾಚಾರ ಆರೋಪದಲ್ಲಿ ಕಾರ್ತಿಕ್, ರಾಕೇಶ ಸಲ್ಡಾನ್ ನನ್ನು ಅಗಸ್ಟ್ 18 ರಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಡಿಯೋ ಶೇರ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್, ಕಾನೂನು ಸಂಘಷಕ್ಕೆ ಒಳಗಾದ ಬಾಲಕನೊಬ್ಬನನ್ನು ಹೊರತು ಪಡಿಸಿ ಉಳಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಏನೂ ಇರಿಯದ ಅಮಾಯಕ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಆಸೆ, ಅಮೀಷ ತೋರಿಸಿ ತನ್ನದೇ ಸಮುದಾಯದ ಮಂದಿ ರೇಪ್ ಮಾಡಿದರೂ ಹಿಂದೂ ಸಂಘಟನೆಗಳು ಮೌನ ವಹಿಸಿರುವುದು ಆತಂಕಕಾರಿ ಬೆಳವಣಿಗೆ. ಪ್ರಕರಣ ಬಗ್ಗೆ ಧ್ವನಿ ಎತ್ತಿ ನ್ಯಾಯ ನೀಡಲು ಮುಂದಾಗದೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುವುದು ಅನೇಕ ಕಡೆಗಳಲ್ಲಿ ನಡೆಯುತ್ತಿದೆ. ಆದರೆ ಆರೋಪಿ ಅನ್ಯಧರ್ಮೀಯರಾಗಿದ್ದರೆ ಧರ್ಮ ರಕ್ಷಣೆಯ ಗುತ್ತಿಗೆ ಪಡೆದವರ ಪೌರುಷ ಎದ್ದೇಳುತ್ತದೆ. ನಿಜವಾಗಿಯೂ ಅನ್ಯಾಯ ಆಗುವುದು ಹೆಣ್ಣಿಗೇನೇ. ಅತ್ಯಾಚಾರಿಗಳ ಜಾತಿ, ಧರ್ಮ ನೋಡದೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಈ ಸಮಾಜದ್ದು.