ಪುತ್ತೂರು: ಮೊಬೈಲ್ ಟವರಿಗೆ ಅಳವಡಿಸಿದ್ದ ಬ್ಯಾಟರಿಗಳ ಕಳ್ಳತನ ಪ್ರಕರಣ: ಆರೋಪಿಯ ಬಂಧನ, ಬ್ಯಾಟರಿ ವಶ

ಕರಾವಳಿ

ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಮೊಬೈಲ್ ಟವರಿಗೆ ಅಳವಡಿಸಿದ್ದ ಬ್ಯಾಟರಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ 13.09.2025 ರಂದು ಅ ಕ್ರ: 79/2025 ಕಲಂ: 331(3), 331(4), 305 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪುತ್ತೂರು ಠಾಣಾ ಪೊಲೀಸರು ಕೇರಳದ ಕೊಲ್ಲಂ ಮೂಲದ ನಿವಾಸಿ ಇಟ್ಟಿ ಫನಿಕ್ಕರ್ ಎಂಬಾತನನ್ನು ಬಂಧಿಸಿದ್ದಾರೆ.

ವಶಕ್ಕೆ ಪಡೆದೆ ಆರೋಪಿ ಪನಿಕ್ಕರ್ ನನ್ನು ವಿಚಾರಣೆ ನಡೆಸಿ, ಆರೋಪಿಯು ಕಳವುಗೈದ ಬ್ಯಾಟರಿಗಳನ್ನು ಪೊಲೀಸರು ಸ್ವಾಧೀನಪಡಿಸಿ, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾನ್ಯ ನ್ಯಾಯಾಲಯವು ಆರೋಪಿ ಇಟ್ಟಿ ಪನಿಕ್ಕರ್ ಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.