ವಾಹನಗಳ ನಂಬರ್ ಪ್ಲೇಟ್​ ಮೇಲೆ ಯಾವುದೇ ಸಂಘಸಂಸ್ಥೆಗಳ ಹೆಸರು, ಲಾಂಛನ ಹಾಕುವಂತಿಲ್ಲ; ಹೆಸರು, ಲಾಂಛನ ಹಾಕಿಸಿದ್ರೆ ಬೀಳುತ್ತೆ ಭಾರಿ ದಂಡ

ರಾಜ್ಯ

ಬೆಂಗಳೂರಿನಲ್ಲಿ ಕಾರು, ಬೈಕ್ ನಂಬರ್ ಪ್ಲೇಟ್ ಮೇಲೆ ಸಂಘ-ಸಂಸ್ಥೆಗಳ ಹುದ್ದೆಗಳ ಹೆಸರು, ಲಾಂಛನ ಹಾಕಿದರೆ ಮೊದಲ ಸಲ 500 ರೂ. ಎರಡನೇ ಸಲ 1000 ರೂಪಾಯಿ ದಂಡ ವಿಧಿಸಲು ಮುಂದಾಗಿದೆ.

ನಿಯಮಗಳ ಪ್ರಕಾರ ಕಾರು, ಬೈಕ್ ಅಥವಾ ಇತರ ವಾಹನಗಳ ನಂಬರ್ ಪ್ಲೇಟ್ ಮೇಲೆ ಯಾವುದೇ ಸಂಘ ಸಂಸ್ಥೆಗಳ ಹೆಸರು, ಲಾಂಛನ ಹಾಕುವಂತಿಲ್ಲ. ಸರ್ಕಾರದ ಅಧಿಕೃತ ವಾಹನಗಳಲ್ಲಿ ಮಾತ್ರ ಹೆಸರು ಹಾಗೂ ಲಾಂಛನ ಬಳಸಬಹುದಾಗಿದೆ.

ಒಂದು ವೇಳೆ ವಾಹನಗಳ ನಂಬರ್ ಪ್ಲೇಟ್ ಮೇಲೆ, ನಾನು ಆ ಸಂಘದ ಅಧ್ಯಕ್ಷ, ಈ ಸಂಘದ ಅಧ್ಯಕ್ಷ ಎಂದು ಬರೆಸಿಕೊಂಡು ಬಿಲ್ಡಪ್ ಕೊಟ್ಟರೆ ಇನ್ಮುಂದೆ ಆರ್​ಟಿಒ ಅಧಿಕಾರಿಗಳು ದಂಡ ವಿಧಿಸಲಿದ್ದಾರೆ.