ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಒಬ್ಬ ಒಳನುಸುಳುಕೋರ, ಅವರನ್ನು ಉತ್ತರಾಖಂಡಕ್ಕೆ ಗಡೀಪಾರು ಮಾಡಬೇಕು: ಅಖಿಲೇಶ್‌ ಯಾದವ್‌

ರಾಷ್ಟ್ರೀಯ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಒಬ್ಬ ಒಳನುಸುಳುಕೋರನಾಗಿದ್ದು, ಅವರನ್ನು ಉತ್ತರಾಖಂಡಕ್ಕೆ ಗಡೀಪಾರು ಮಾಡಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭಾನುವಾರ ಆಗ್ರಹಿಸಿದ್ದಾರೆ. ಲಕ್ನೋದಲ್ಲಿ ನಡೆದ ರಾಮ್‌ ಮನೋಹರ್‌ ಲೋಹಿಯಾ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳನುಸುಳುಕೋರರ ಬಗ್ಗೆ ಬಿಜೆಪಿ ಲೆಕ್ಕಾಚಾರ ಕೊಡುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಒಳನುಸುಳುಕೋರರಿದ್ದಾರೆ.

ನಮ್ಮ ಮುಖ್ಯಮಂತ್ರಿ ಉತ್ತರಾಖಂಡದವರು. ಅವರನ್ನು ಅಲ್ಲಿಗೇ ಕಳುಹಿಸಬೇಕು. ಸೈದ್ಧಾಂತಿಕವಾಗಿಯೂ ಅವರು ಒಳನುಸುಳುಕೋರ. ಅವರು ಮೊದಲು ಬಿಜೆಪಿಯಲ್ಲಿರಲಿಲ್ಲ. ಇಂತಹ ಒಳನುಸುಳುಕೋರರನ್ನು ಯಾವಾಗ ಹೊರಹಾಕುತ್ತೀರಿ ಎಂದು ಅಖಿಲೇಶ್ ಯಾದವ್ ಟೀಕಿಸಿದ್ದಾರೆ.