ಅಪ್ರಾಪ್ತ ಬಾಲಕಿಯರ ಗ್ಯಾಂಗ್ ರೇಪ್ ಗೆ ರೆಡಿಯಾಗುತ್ತಿದ್ದಂತೆ ಅಪತ್ಬಾಂಧವನಾಗಿ ಬಂದ ಇನ್ಸ್ ಪೆಕ್ಟರ್ ಸಿಂಗಂ ಸಂದೇಶ್, ನಾಲ್ಕು ಮಂದಿ ಅಂದರ್
ನಿಡ್ಡೋಡಿ ಪರಿಸರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರ ತಂಡವೊಂದು ಸಿಕ್ಕಿಬಿದ್ದಿದ್ದು ಸಂಭಾವ್ಯ ಗ್ಯಾಂಗ್ ರೇಪ್ ಒಂದನ್ನು ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ.ಅವರ ಸಮಯ ಪ್ರಜ್ಞೆಯಿಂದ ತಪ್ಪಿ ಹೋಗಿದೆ. ಅಪ್ರಾಪ್ತ ಬಾಲಕಿಯರೊಂದಿಗೆ ಮಾಯಾಲೋಕ ಸೃಷ್ಟಿಸಲು ಹೊರಟಿದ್ದ ನಾಲ್ವರ ಹೆಡೆಮುರಿ ಕಟ್ಟಲಾಗಿದೆ.

ಬಂಧಿತರನ್ನು ನಿಡ್ಡೋಡಿಯ ಮಹೇಶ, ಕಟೀಲು ಪರಿಸರದ ಯಜ್ಞೇಶ್, ದಿಲೀಪ್ ಹಾಗೂ ಶ್ರೀಕಾಂತ್ ಎಂದು ತಿಳಿದು ಬಂದಿದೆ. ನಿಡ್ಡೋಡಿಯ ಮನೆಯೊಂದರಲ್ಲಿ ನಾಲ್ಕು ಮಂದಿ ಯುವಕರ ತಂಡ ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗಿದ್ದಾರೆನ್ನುವ ಮಾಹಿತಿ ಪಡೆದ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸ್ ತಂಡವು ಆ ಮನೆಗೆ ದಾಳಿ ನಡೆಸಿದೆ. ಅಲ್ಲಿ ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರು ಮಾಯಾಲೋಕದಲ್ಲಿದ್ದು, ಅವರೆಲ್ಲಾ ಗ್ಯಾಂಗ್ ರೇಪ್ ನ ಸಿದ್ಧತೆಯಲ್ಲಿದ್ದರೆನ್ನುವುದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲದೆ ಲೈಂಗಿಕ ಕ್ರಿಯೆಗೆ ಬಳಸುವ ಕೆಲವೊಂದು ವಸ್ತುಗಳು ಅಲ್ಲಿ ಪತ್ತೆಯಾಗಿದೆ. ಸಂತ್ರಸ್ತ ಬಾಲಕಿಯರನ್ನು ಮತ್ತು ಆರೋಪಿಗಳನ್ನು ಠಾಣೆಗೆ ತಂದು ವಿಚಾರಿಸಿದಾಗ ಎಲ್ಲ ವಿಚಾರಗಳನ್ನು ಅರೋಪಿಗಳು ಬಾಯಿಬಿಟ್ಟಿದ್ದಾರೆ.
ಮಹೇಶನ ಮನೆಯಲ್ಲಿ ಯಾರೂ ವಾಸವಿಲ್ಲ. ಅವನೊಬ್ಬನೇ ವಾಸವಿದ್ದು ಆ ಮನೆಯನ್ನು ಈ ಕೃತ್ಯಕ್ಕೆ, ಹಾಗೂ ಅಕ್ರಮ ಚಟುವಟಿಕೆಗೆ ಉಪಯೋಗಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣದ ಮಾಹಿತಿ ಸಿಕ್ಕ ಕೂಡಲೇ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪೊಲೀಸರ ತಂಡದೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಅಲ್ಲಿಗೆ ತೆರಳಿ ದೊಡ್ಡದಾದ ಅನಾಹುತವನ್ನು ತಪ್ಪಿಸಿದ್ದಾರೆ. ಇನ್ಸ್ ಪೆಕ್ಟರ್ ಸಂದೇಶ್ ರವರು ಮಿಂಚಿನ ಕಾರ್ಯಾಚರಣೆ ನಡೆಸದೆ ಹೋಗಿದ್ದರೆ ದೆಹಲಿ ಪರಿಸರದಲ್ಲಿ ಸುದ್ದಿಯಾದಂತಹ ಗ್ಯಾಂಗ್ ರೇಪ್ ನಡೆದು, ದೊಡ್ಡ ಮಟ್ಟಿನ ರಾಷ್ಟ್ರೀಯ ಸುದ್ದಿಯಾಗುತ್ತಿತ್ತು. ದ.ಕ ಜಿಲ್ಲೆಯ ಮಾನ-ಮರ್ಯಾದೆ ಹರಾಜಾಗುತ್ತಿತ್ತು. ಮೊದಲೇ ಜಿಲ್ಲೆಗೊಂದು ಕಳಂಕವಿದೆ ಕೋಮು ಸೂಕ್ಷ ಪ್ರದೇಶವೆಂದು. ಈ ಗ್ಯಾಂಗ್ ರೇಪ್ ನಡೆದು ಹೋಗಿದ್ದರೆ, ಬುದ್ದಿವಂತರ ಜಿಲ್ಲೆಗೆ ಅತ್ಯಾಚಾರದ ಕಳಂಕ ತಟ್ಟುತ್ತಿತ್ತು. ಅದು ಇನ್ಸ್ ಪೆಕ್ಟರ್ ಸಂದೇಶ್ ರವರ ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆಯಿಂದ ತಪ್ಪಿಹೊಗಿದೆ. ಆರೋಪಿಗಳನ್ನು ಬಂಧಿಸಿ ಅಮಾಯಕ ಯುವತಿಯರ ರಕ್ಷಣೆ ಮಾಡಿದ ರೀತಿ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆರೋಪಿಗಳ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
