ಪುತ್ತೂರು: ಪುತ್ತೂರು ನಗರ ಪೊಲೀಸರ ಕಾರ್ಯಾಚರಣೆ, ಮನೆ ಕಳ್ಳತನದ ಆರೋಪಿಯ ಬಂಧನ

ಕರಾವಳಿ

ಪುತ್ತೂರು ತಾಲೂಕು ನಿವಾಸಿ ರೇವತಿ ಎಂಬವರ ಮನೆಯಿಂದ ನಗದು ಹಾಗೂ ಚಿನ್ನಭರಣ ಕಳವುಗೈದು ಪರಾರಿಯಾದ ಆರೋಪಿ ಪ್ರವೀಣ್ ಸಿಟಿ ಗುಡ್ಡೆ ಮನೆ, ಕಬಕ ಗ್ರಾಮ ಪುತ್ತೂರು ತಾಲೂಕು ಎಂಬಾತನನ್ನು ಬಂಧಿಸುವಲ್ಲಿ ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಶ್ರೀಮತಿ ರೇವತಿ ಪುತ್ತೂರು ಎಂಬವರ ದೂರಿನಂತೆ ದಿನಾಂಕ:12.10.2025 ರಂದು ಬೆಳಿಗ್ಗೆ ಸಮಯ 10:00 ರಿಂದ ಸಾಯಂಕಾಲ 5 ಗಂಟೆ ಸಮಯದ ಮಧ್ಯಾವದಿಯಲ್ಲಿ ತನ್ನ ವಾಸದ ಮನೆಯಿಂದ ಯಾರೋ ಕಳ್ಳರು ಒಂದು ಚಿನ್ನದ ಬಳೆ, ಒಂದು ಜೊತೆ ಕಿವಿಯೋಲೆ ಹಾಗೂ ಒಂದು ಚಿನ್ನದ ಸರ ಮತ್ತು ನಗದು ಹಣ ಕಳವುಗೈದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 89/2025 ರಂತೆ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಕಬಕ ಗ್ರಾಮದ ಸಿಟಿ ಗುಡ್ಡೆ ಮನೆ ನಿವಾಸಿ, ಪ್ರವೀಣ್ ಎಂಬಾತನನ್ನು ಪತ್ತೆಮಾಡಿ ವಶಕ್ಕೆ ಪಡೆದು ಕಳವುಗೈದ ಚಿನ್ನಾಭರಣ ಹಾಗೂ ನಗದು ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೊಪಿಯನ್ನು ವಿಚಾರಣೆ ನಡೆಸಿ ಕಳವುಗೈದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.