ಕರ್ನಾಟಕದ 6 ಜಿಲ್ಲೆಗಳ 12 ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೆ:ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ರಾಜ್ಯ

ಕರ್ನಾಟಕದ 6 ಜಿಲ್ಲೆಗಳ 12 ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಜತೆಗೆ ಬೆಳಗಾವಿಯ ಒಂದು ಪುರಸಭೆಯನ್ನು ನಗರ ಸಭೆಯನ್ನಾಗಿಯೂ ಉನ್ನತೀಕರಿಸಲು ಒಪ್ಪಿಗೆ ನೀಡಲಾಗಿದೆ. ವಿಧಾನಸೌಧದಲ್ಲಿ ಬುಧವಾರ ನಡೆಸ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಮಾಡಲಾಗಿದೆ. ಆ ಪೈಕಿ ಸ್ಥಳೀಯ ಸಂಸ್ಥೆಗಳ ಉನ್ನತೀಕರಣವು ಒಂದಾಗಿದೆ. ಹಲವು ವರ್ಷಗಳಿಂದ ಇದ್ದ ಮೇಲ್ದರ್ಜೆಗೇರಿಸುವ ಬೇಡಿಕೆಗೆ ಸರ್ಕಾರ ಕೊನೆಗೂ ಒಪ್ಪಿಗೆ ನೀಡಿದೆ.

ಮೇಲ್ದರ್ಜೆಗೆರಿದ ಗ್ರಾಮ ಪಂಚಾಯತಿಗಳು. ಬೀದರ್ ಜಿಲ್ಲೆಯ ಕಮಠಾಣಾ, ಹುಲಸೂರು, ಮನ್ನಾಖೇಳ್ಳಿ ಗ್ರಾಮ ಪಂಚಾಯತಿ. ಬೆಳಗಾವಿ ಜಿಲ್ಲೆಯ ಅಂಕಲಿ, ಸುರೇಬಾನ, ಮನಿಹಾಳ, ಕಟಕೋಳ ಗ್ರಾಮ ಪಂಚಾಯತಿ, ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಂಚಾಯತಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು ಗ್ರಾಮ ಪಂಚಾಯತಿ
ಯಾದಗಿರಿ ಜಿಲ್ಲೆಯ ಸಗರ (ಬಿ), ವಡಗೇರಾ ಗ್ರಾಮ ಪಂಚಾಯತಿ.
ಉತ್ತಕನ್ನಡ ಜಿಲ್ಲೆಯ ಮಾವಳ್ಳಿ ಗ್ರಾಮ ಪಂಚಾಯತಿ.

ಉನ್ನತೀಕರಣಗೊಂಡ ಸ್ಥಳೀಯ ಸಂಸ್ಥೆಗಳು. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯತಿಯು ಪುರಸಭೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆಯು ನಗರಸಭೆ. ಹೀಗೆ ಕರ್ನಾಟಕದ 6 ಜಿಲ್ಲೆಗಳ 12 ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.