ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪುತ್ತೂರು ತಾಲೂಕಿನ ಪುರಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ಯಾರಿ ಕಲಾವಿದ ಮುಹಮ್ಮದ್ ಆಲಿ ಬಡ್ಡೂರು ಅವರಿಗೆ ಚಮ್ಮನ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ 2022-23 ರ ಸಾಲಿನ ಬ್ಯಾರಿ ಅಕಾಡೆಮಿ ಚಮ್ಮನ (ಗೌರವ ಪ್ರಶಸ್ತಿ) ಪುರಸ್ಕಾರಕ್ಕೆ ಮುಹಮ್ಮದ್ ಆಲಿ ಬಡ್ಡೂರು ಆಯ್ಕೆಯಾಗಿದ್ದರು. ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಂಗಭೂಮಿ ಕಲಾವಿದರಾಗಿ ಜಿಲ್ಲೆಯಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವ ಮುಹಮ್ಮದ್ ಆಲಿ ಬಡ್ಡೂರು ಹಲವಾರು ಬ್ಯಾರಿ, ತುಳು ನಾಟಕದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸೀರಿಯಲ್ ಹಾಗೂ ಸಿನೆಮಾದಲ್ಲೂ ಅಭಿನಯಿಸಿದ್ದರು. ಬ್ಯಾರಿ ಕಲೆ, ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
