ಮೋದಿ ಆಡಳಿತದಿಂದ ಗ್ರಾಮೀಣ ಜನರ ಬದುಕು ಬುಲ್ಡೋಜ್; ಕೇಂದ್ರ ಸರಕಾರದ ವಿರುದ್ಧ ಗುಡುಗಿದ ಸೋನಿಯಾ ಗಾಂಧಿ

ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದ್ದ ‘ಮನಾರೇಗ’ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯನ್ನು ಬುಲ್ಡೋಜ್ ಮಾಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

“ಹಳ್ಳಿಯ ಜನರ ಉದ್ಯೋಗದ ಹಕ್ಕು ಕಸಿದುಕೊಳ್ಳುವ ಉದ್ದೇಶ ‘ವಿಬಿ ಜಿ ರಾಮ್ ಜಿ’ (ವಿಕಸಿತ ಭಾರತ -ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್) ವಿಧೇಯಕದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಹೋರಾಟ ನಡೆಸಲಿದೆ. ವಿಧೇಯಕ ಹಿಂದಕ್ಕೆ ಪಡೆಯುವ ತನಕ ಪಕ್ಷದ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ” ಎಂದು ಸೋನಿಯಾ ಗಾಂಧಿ ಘೋಷಣೆ ಮಾಡಿದ್ದಾರೆ. ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಸೋನಿಯಾ ಗಾಂಧಿ “ಕಳೆದ 11 ವರ್ಷದಲ್ಲಿ ಗ್ರಾಮೀಣ ಜನರ ಹಿತಾಸಕ್ತಿ ಕಡೆಗಣಿಸಿರುವ ಸರಕಾರ ಮನಾರೇಗ ಯೋಜನೆಯನ್ನು ದುರ್ಬಲಗೊಳಿಸುವ ಮೂಲಕ ಕಾರ್ಮಿಕರು, ಭೂ ರಹಿತ ಕಾರ್ಮಿಕರ ಹಿತ ಬಲಿಕೊಡಲು ಹೊರಟಿದೆ” ಎಂದು ಟೀಕಿಸಿದರು.