ಲಾಗೋಸ್: 31.5 ಕೆ.ಜಿ ಕೊಕೇನ್‌ ವಶಪಡಿಸಿಕೊಂಡ ನೈಜೀರಿಯಾ ಪೊಲೀಸರು, 22 ಭಾರತೀಯರ ಬಂಧನ

ಅಂತಾರಾಷ್ಟ್ರೀಯ

ಲಾಗೋಸ್: ಹಡಗಿನಲ್ಲಿದ್ದ 31.5 ಕೆ.ಜಿ ಕೊಕೇನ್‌ ವಶಪಡಿಸಿಕೊಂಡ ನೈಜೀರಿಯಾ ಪೊಲೀಸರು, 22 ಭಾರತೀಯರನ್ನು ಬಂಧಿಸಿದ್ದಾರೆ. ಲಾಗೋಸ್‌ನ ಅಪಾಪಾ ಬಂದರಿನ ಜಿಡಿಎನ್‌ಎಲ್‌ ಟರ್ಮಿನಲ್‌ನಲ್ಲಿದ್ದ ‘ಎಂವಿ ಅರುಣ ಹುಲ್ಯ’ ಎಂಬ ವ್ಯಾಪಾರಿ ಹಡಗನ್ನು ಶೋಧಿಸಿದ ನೈಜೀರಿಯಾದ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳಿಗೆ ಕೊಕೇನ್ ದೊರೆತಿದೆ. ಎಂದು ವೆಬ್‌ ಪೋರ್ಟಲ್‌ ‘ಪಂಚ್’ ವರದಿ ಮಾಡಿದೆ.

ಕೊಕೇನ್‌ ಪತ್ತೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರಲ್ಲಿ ಹಡಗಿನ ಮಾಸ್ಟರ್‌ ಶರ್ಮಾ ಶಶಿ ಭೂಷಣ್‌ ಮತ್ತು 21 ಸಿಬ್ಬಂದಿ ಇದ್ದಾರೆ ಎಂದು ಮಾಧ್ಯಮ ಮತ್ತು ವಕಾಲತ್ತು ನಿರ್ದೇಶಕ ಫೆಮಿ ಬಾಬಾಫೆಮಿ ತಿಳಿಸಿದ್ದಾರೆ.