ಆಯುಷ್ಮಾನಡಿ ಬಡವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ( open heart surgery) ಮಾಡಲು ತಿಂಗಳುಗಟ್ಟಲೆ ಕಾಯಬೇಕಾ: ಸಂತೋಷ್ ಬಜಾಲ್ ಡಿವೈಎಪ್ಐ

ಕರಾವಳಿ

ದ.ಕ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ, ಸಂಶೋಧನಾ ಸಂಸ್ಥೆ ಸ್ಥಾಪನೆಗೆ ನಮ್ಮ ಬೇಡಿಕೆ ಯಾಕೆಂದು ಈ ಕೆಳಗಿನ ಕಥೆ ಓದಿ.

ಇಂದು ಸಂಜೆಯ ಹೊತ್ತಿಗೆ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂತು ಸಮಸ್ಯೆ ಕೇಳಿ ಅವರಿರುವ ಆಸ್ಪತ್ರೆ ಬಳಿ ದಾವಿಸಿದೆ. ರೋಗಿಯ ಹೆಸರು ಕೃಷ್ಣಪ್ಪ ಸಪಲಿಗ ಸುಮಾರು 70 ಪ್ರಾಯ ಅವರದು ಕೂಲಿ ಕೆಲಸ ಮಾಡಿ ಬದುಕುವ ಸಾಮಾನ್ಯ ಬಡ ಕುಟುಂಬ. ಜೊತೆಗಿದ್ದ ಮಗ ಆತನದು ಮೆಕಾನಿಕ್ ವೃತ್ತಿ. ಮಗ ತಂದೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೊದಲು ಖಾಸಗೀ ಆಸ್ಪತ್ರೆ ದಾವಿಸಿ ಪರೀಕ್ಷಿಸಿದಾಗ ಹೃದಯದಲ್ಲಿ ಮೂರು ಬ್ಲಾಕ್ ಅದರಲ್ಲಿ ಎರಡು ಶೇಖಡಾ 99ರಷ್ಟು ಮುಚ್ಚಿದೆ ಕೂಡಲೇ ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದರು. ಆಯುಷ್ಮಾನ್ ಅಡಿ ಮಾಡಬೇಕೆಂದರೆ ತಿಂಗಳವರೆಗೆ ಕಾಯಬೇಕೆಂದು ಹೇಳಿ ( ದುಡ್ಡಿಲ್ಲ ಅಂದ ಕಾರಣಕ್ಕೆ) ಅಲ್ಲಿಂದ ಅವರನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸುತ್ತಾರೆ. ವೆನ್ಲಾಕ್ ಆಸ್ಪತ್ರೆ ಆಯುಷ್ಮಾನ್ ರೆಫರಲ್ ಅಡಿ ಸೂಚಿಸಿದ ಇನ್ನೊಂದು ಖಾಸಗೀ ಮೆಡಿಕಲ್ ಕಾಲೇಜಿಗೆ ದಾಖಲಿಸಲು ಬಂದಾಗ ಅವರನ್ನು ಪರೀಕ್ಷಿಸಿದ ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಗೆ ಹತ್ತಿರತ್ತಿರ ಎರಡು ತಿಂಗಳು ಕಾಯಬೇಕಾಗಬಹುದು ಒಂದಾ ಬೇರೆ ಆಸ್ಪತ್ರೆ ತೆರಳಿ ಅಥವಾ ದುಡ್ಡು ಕೊಟ್ಟು ಮಾಡಿಸುವುದಾದರೆ ಕೂಡಲೇ ಮಾಡುವ ಎಂದಿದ್ದಾರೆ. ಈ ಬಗ್ಗೆ ಆರೋಗ್ಯ ಸಂಬಂಧಿತ ಅಧಿಕಾರಿಗಳಲ್ಲಿ ಮಾತಾಡಿದಾಗ ಆಯುಷ್ಮಾನ್ ನೀಡಿದ್ದೇವೆ ಬೇರೆ ಯಾವ ಆಸ್ಪತ್ರೆಯಲ್ಲಾದರೂ ಮಾಡಿಸಿ ಸರಳವಾಗಿ ಹೇಳಿ ಮುಗಿಸಿದರು. ಇನ್ನೊಬ್ಬರು ಒಂದಾ ಮೈಸೂರಿನ ಜಯದೇವ ಆಸ್ಪತ್ರೆಗೆ ಹೋಗೋದಕ್ಕೆ ಹೇಳಿ ನಾನು ಮಾತಾಡುತ್ತೇನೆ ಅಂದು ಬಿಟ್ಟರು. ಕುಟುಂಬ ಎದುರಿಸುತ್ತಿರುವ ವೇದನೆ, ಸಮಸ್ಯೆಗಳಿಗೆ ಪರಿಹಾರ ಇವರಿಬ್ಬರು ಅಧಿಕಾರಿಗಳು ಹೇಳಿದಷ್ಟು ಸುಲಭ ಮತ್ತು ಸರಳ ಇಲ್ಲ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.

ಇವರು ಹೇಳುವ ಪ್ರಕಾರ ಬಡಪಾಯಿ ಮಗ ತನ್ನ ತಂದೆಯ ಚಿಕಿತ್ಸೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸಿ ಆಯುಷ್ಮಾನ್ ಅಡಿ ಶಸ್ತ್ರಚಿಕಿತ್ಸೆ ನಡೆಸುತ್ತಿರಾ ಎಂದು ಬೇಡಿಕೊಳ್ಳಬೇಕಾ.? ಅಥವಾ ಇಷ್ಟೊಂದು ಗಂಭೀರ ಹೃದಯ ಖಾಯಿಲೆ ಇರುವವರನ್ನು ಮನೆಯಲ್ಲಿ ಕೂರಿಸಿ ತಿಂಗಳುಗಟ್ಟಲೆ ಕಾಯಬೇಕಾ.? ರೋಗಿಯ ಮಗ ಮತ್ತು ಹೆಂಡತಿಗೆ ಹೇಗಾಗಬೇಡ.? ಇವರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು? ಧರ್ಮರಕ್ಷಣೆಗೆ ಓಡೋಡಿ ಬರುವವರು ಈಗ ಎಲ್ಲಿದ್ದಾರೆ. ನಮ್ಮ ಜಿಲ್ಲೆಯಲ್ಲಿ 8 ಖಾಸಗೀ ಮೆಡಿಕಲ್ ಕಾಲೇಜು ಇದೆ ಕಲಬುರಗಿಯಲ್ಲಿ ಏನಿದೆ ಎಂದು ಕೊಚ್ಚಿಕೊಂಡವರು ಈ ರೀತಿ ಚಿಕಿತ್ಸೆ ನಿರಾಕರಿಸಲ್ಪಡುವ ರೋಗಿಗಳಿಗೆ ಅದೇ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಮಾಡಲು ಸಾಧ್ಯವಿದೆಯಾ? ಹಾಗೆ ನೋಡಿದರೆ ನಮ್ಮ ಜಿಲ್ಲೆಗಿಂತ ಕಲಬುರಗಿಯೇ ಎಷ್ಟೋ ವಾಸಿ. ಅಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಇದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಆಸ್ಪತ್ರೆ ಉಪಕೇಂದ್ರ ಇದೆ. ಕಿದ್ವಾಯಿ ಸ್ಮಾರಕ ಗ್ರಂಥಿ ಕ್ಯಾನ್ಸರ್ ಆಸ್ಪತ್ರೆ ಇದೆ. ಇಲ್ಲಿಗೆ ಹೋಲಿಸಿದರೆ ಕಲಬುರಗಿಯೇ ಎಷ್ಟೋ ವಾಸಿ.

ಈಗಿರುವ ಪ್ರಶ್ನೆ ಏನೆಂದರೆ ಆಯುಷ್ಮಾನ್ ಅಡಿ ರೆಫರ್ ಮಾಡಿದ ನಂತರವೂ ಖಾಸಗೀ ಆಸ್ಪತ್ರೆಗಳಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ( open heart surgery) ಮಾಡಬೇಕಾದರೆ ಎರಡೆರಡು ತಿಂಗಳು ಕಾಯಬೇಕಾಗಿ ಬರೋದು ಯಾಕಾಗಿ.? ದುಡ್ಡಿದ್ದರೆ ಒಂದೆರಡು ದಿನದಲ್ಲೇ ಆಗುವುದಾದರೆ ಆಯುಷ್ಮಾನ್ ಅಡಿಯ ರೋಗಿಗಳನ್ನು ತಿಂಗಳುಗಟ್ಟಲೆ ಕಾಯಿಸುವುದು, ಸತಾಯಿಸುವುದು ಯಾವ ಕಾರಣಕ್ಕಾಗಿ.?
ಸರದಿ ಸಾಲಲ್ಲಿ ಶಸ್ತ್ರಚಿಕಿತ್ಸೆ ಮಾಡುವುದೆಂದಾದರೆ ಆಯುಷ್ಮಾನ್ ಅಡಿ ಎಷ್ಟು ಜನ ಇವತ್ತು ಈ ಶಸ್ತ್ರಚಿಕಿತ್ಸೆ ಗೆ ಒಳಗಾಗುತ್ತಿದ್ದಾರೆ. ಶಸ್ತ್ರಚಿಕಿತ್ಸೆಯಲ್ಲಿ ಇಷ್ಟೊಂದು ನಿಧಾನಗತಿ ಯಾಕಾಗಿ? ಸಂದರ್ಭಕ್ಕಣುಗುಣವಾಗಿ ರೋಗಿಗಳು ಚಿಕಿತ್ಸೆಯಿಂದ ನಿರಾಕರಿಸಲ್ಪಡದ ಹಾಗೆ ನೋಡಿಕೊಳ್ಳಬೇಕಾದವರು ಯಾರು?. ಈ ಎಲ್ಲಾ ಪ್ರಶ್ನೆಗಳಿಗೆ ಆರೋಗ್ಯ ಇಲಾಖೆ ಉತ್ತರಿಸಬೇಕಲ್ಲವೇ? ಆರೋಗ್ಯ ಮಂತ್ರಿ ಇಂತಹದಕ್ಕೆಲ್ಲ ಎನು ಪರಿಹಾರ ಕಂಡುಕೊಂಡಿದ್ದಾರೆಂದು ಹೇಳಬೇಕಲ್ಲವೇ..

ಡಿವೈಎಫ್ಐ ಕಳೆದ ಹಲವು ವರುಷಗಳಿಂದ ದ.ಕ ಜಿಲ್ಲೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ, ಸಂಶೋಧನ ಆಸ್ಪತ್ರೆ ಮತ್ತು ಕಿದ್ವಾಯಿ ಸ್ಮಾರಕ ಗ್ರಂಥಿ ( ಕ್ಯಾನ್ಸರ್) ಆಸ್ಪತ್ರೆ ಸ್ಥಾಪಿಸಿರಿ ಎಂದು ಹೋರಾಟ ನಡೆಸುತ್ತಾ ಬಂದಿದೆ. ಸರಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ. ಇಲ್ಲ ಎಲ್ಲಾ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವೆಂದೇಳಿ ಖಾಸಗೀ ಸಹಭಾಗಿತ್ವದಲ್ಲಿ ಮಾಡಿದ ಅಭಿವೃದ್ಧಿಯಿಂದ ಜನರಿಗೆ ಯಾವ ಪ್ರಯೋಜನೂ ಲಭ್ಯವಾಗುತ್ತಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತು ಕೊಳ್ಳಲಿ ಜಯದೇವ , ಕಿದ್ವಾಯಿ ಆಸ್ಪತ್ರೆ ಸ್ಥಾಪನೆಗೆ ಕ್ರಮಕೈಗೊಳ್ಳಲಿ.