ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಣಿಲಾಜೆ ಎಂಬಲ್ಲಿ, ದಿನಾಂಕ 10.02.2026 ರಂದು, ಯಾರೋ ಅಪರಿಚಿತ ಸೇಲ್ಸ್ ಮ್ಯಾನೊಬ್ಬ ಚಿನ್ನದ ಒಡವೆಗಳನ್ನು ತೊಳೆದು ಪಾಲಿಸ್ ಮಾಡಿಕೊಡುವುದಾಗಿ ನಂಬಿಸಿ, ಚಿನ್ನವನ್ನು ಪಡೆದುಕೊಂಡು ಅದನ್ನು ಯಾವುದೋ ದ್ರಾವಣ ಬಳಸಿ ಕರಗಿಸಿ ವಂಚಿಸಿದ ಘಟನೆಗೆ ಸಂಬಂದಿಸಿ, ಅ.ಕ್ರ:13/2026 ರಂತೆ ಪ್ರಕರಣ ದಾಖಲಾಗಿ, ತನಿಖೆಯ ಬೆನ್ನುಹತ್ತಿದ ವೇಣೂರು ಠಾಣಾ ಪೊಲೀಸರು, ಆರೋಪಿತನಾದ ಬಿಹಾರ ಮೂಲದ ಸುಫೋಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯಿಂದ ಸರಿ ಸುಮಾರು 75,000. ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತಯ ಪತ್ತೆಕಾರ್ಯದಲ್ಲಿ ವೇಣೂರು ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ, ಶ್ರೀಮತಿ ಓಮನ ಎನ್. ರವರ ನೇತೃತ್ವದಲ್ಲಿ ಎ.ಎಸ್.ಐ. ವೆಂಕಟೇಶ್ ನಾಯ್ಕ, ಎಎಸ್ ಐ ಬೆನ್ನಿಚ್ಚನ್, ಹೆಚ್.ಸಿ. ಕೃಷ್ಣ, ಹೆಚ್.ಸಿ. ಶ್ರೀಮತಿ ಕೇಶವತಿ, ಬಸವರಾಜ್, ಮೋಹನ್ , ರಾಕೇಶ್ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
