ನರೇಂದ್ರ ಮೋದಿಯವರು ಕಟ್ಟಿರುವ ಬಿಜೆಪಿ ಕೋಟೆಗೆ ಮುಂದಿನ ಅಧಿಪತಿ ಯಾರು.? ನಮೋ ಸಾಮ್ರಾಜ್ಯದ ಉತ್ತರಾಧಿಕಾರಿ ಪಟ್ಟ ಯಾರಿಗೆ ಸಿಗಲಿದೆ.? ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಪ್ರಾರಂಭವಾಗಿದೆ.
ಮೋದಿ ಉತ್ತರಾಧಿಕಾರಿಯ ರೇಸ್ನಲ್ಲಿ ಅತೀ ಹೆಚ್ಚು ಕೇಳಿ ಬರುತ್ತಿರುವ ಹೆಸರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರದ್ದು. ನಂತರ ಬಿಜೆಪಿಯ ಸಾರಥ್ಯ ವಹಿಸುವ ಸಾಮರ್ಥ್ಯವಿರುವ ಮತ್ತೊಬ್ಬ ಪ್ರಭಾವಿ ನಾಯಕ ಅಮಿತ್ ಶಾ. ಮೋದಿಯವರ ‘ಬಲಗೈ ಬಂಟ’ ಎಂದೇ ಕರೆಸಿಕೊಳ್ಳುವ ಅಮಿತ್ ಶಾ ಕೂಡ ರೇಸ್ ನಲ್ಲಿ ಇದ್ದಾರೆ. ಚಾಣಕ್ಯ’ ಎಂದೇ ಹೆಸರುವಾಸಿ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇವರಲ್ಲಿದೆ.
ಯೋಗಿ ಮತ್ತು ಅಮಿತ್ ಶಾ ಅವರ ಜೊತೆಗೆ ಕೇಳಿ ಬರುತ್ತಿರುವ ಮತ್ತೊಂದು ಹೆಸರು ಮಹಾರಾಷ್ಟ್ರದ ಪ್ರಬಲ ನಾಯಕ ದೇವೇಂದ್ರ ಫಡ್ನವೀಸ್. ಫಡ್ನವೀಸ್, ಬಿಜೆಪಿಯ ಭವಿಷ್ಯದ ಪ್ರಮುಖ ನಾಯಕರಲ್ಲಿ ಒಬ್ಬರು. ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬಲ್ಲ ಸಾಮರ್ಥ್ಯ ಇವರಿಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಇನ್ನೊಂದೇ ವರ್ಷದಲ್ಲಿ ದೇಶದ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆಯಿದ್ದು, ಯೋಗಿ ಆದಿತ್ಯನಾಥ್, ಅಮಿತ್ ಶಾ ಅಥವಾ ದೇವೇಂದ್ರ ಫಡ್ನವೀಸ್ ಇವರಲ್ಲಿ ಯಾರು ಮೋದಿಯವರ ಪಟ್ಟದ ವಾರಿಸುದಾರರಾಗಲಿದ್ದಾರೆ ಎಂಬ ರಹಸ್ಯ ಸದ್ಯದಲ್ಲೇ ಬಯಲಾಗಲಿದೆ.
