ಕೊನೆಗೂ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಪಕ್ಷ ನಿಷ್ಠೆ ಡಿಕೆ ಶಿವಕುಮಾರ್ ಅವರನ್ನು ಕೈ ಹಿಡಿದಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಲು ದಿನ ಮುಹೂರ್ತ ಆಗಿದೆ. ರಾಜಕಾರಣದಲ್ಲಿ ಕನಕಪುರದ ಬಂಡೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬಿ ಸೋಲುವ ಹಾದಿಯಲ್ಲಿದ್ದ ಪಕ್ಷವನ್ನು ಫೀನಿಕ್ಸ್ ನಂತೆ ಎದ್ದೇಳುವಂತೆ ಮಾಡಿದ ಸಮರ್ಥ ಸೇನಾನಿ ಆಗಿದ್ದಾರೆ ಡಿಕೆ ಶಿವಕುಮಾರ್.
ಡಿಕೆಶಿ ಗೆ ಜಿಲ್ಲೆಯಲ್ಲಿ ಹಲವಾರು ಆಪ್ತರು ಇರಬಹುದು. ಆದರೆ ಅದರಲ್ಲಿ ಡಿಕೆಶಿ ಪಾಳೆಯದಲ್ಲಿ ನಂಬಿಕಸ್ಥ ಬಂಟನಾಗಿ ಗುರುತಿಸಿಕೊಂಡವರು ಇನಾಯತ್ ಆಲಿ. ತನ್ನ ರಾಜಕೀಯ ಜೀವನದ ಆರಂಭದಿಂದ ಈವರೆಗೂ ಡಿಕೆಶಿ ಕ್ಯಾಂಪ್ ನಲ್ಲಿ ಗುರುತಿಸಿಕೊಂಡು ಇದೀಗ ಜಿಲ್ಲಾ ರಾಜಕಾರಣದಲ್ಲಿ ಶಕ್ತಿಶಾಲಿ ನಾಯಕರಾಗಿ ಬೆಳೆಯುತ್ತಿರುವವರು ಓನ್ ಆಂಡ್ ಓನ್ಲಿ ಇನಾಯತ್ ಆಲಿ ಎಂದರೆ ತಪ್ಪಲ್ಲ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಹೊಸ ಅಲೆ ಎಬ್ಬಿಸಿದವರು ಇನಾಯತ್ ಆಲಿ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ದಕ್ಕಿ ಪರಾಜಿತರಾದರೂ ತನ್ನ ಕ್ಷೇತ್ರದ ಜನತೆಯನ್ನು ಕೈ ಬಿಡದೆ ಪಕ್ಷ ಸಂಘಟನೆಗಾಗಿ ಹಗಲಿರುಳು ಕ್ಷೇತ್ರದಾದ್ಯಂತ ಸುತ್ತಾಡುತ್ತಿರುವ ಜಿಲ್ಲೆಯ ಏಕೈಕ ರಾಜಕಾರಣಿ ಅಂದರೆ ಇನಾಯತ್ ಆಲಿ. ಕಳೆದ ಚುನಾವಣೆಯಲ್ಲಿ ಪರಾಜಿತರಾದರೂ ರಾಜಕೀಯ ಸಾಕು ಅಂತ ಸುಮ್ಮನೆ ಕೂರಬಹುದಿತ್ತು. ತನ್ನ ಅಗಾಧ ಉದ್ಯಮ ಸಾಮ್ರಾಜ್ಯವನ್ನು ಮುನ್ನೆಡೆಸಿಕೊಂಡು ಹೋಗಬಹುದಿತ್ತು. ಆದರೆ ಇನಾಯತ್ ಆಲಿ ಹಾಗೆ ಮಾಡಲಿಲ್ಲ. ಸುಮ್ಮನೆ ಕೂರಲಿಲ್ಲ. ರಾಜಕಾರಣದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಹಠ ಹೊಂದಿದವರು. ಡಿಕೆಶಿ ಮೊದಲ ಚುನಾವಣೆಯಲ್ಲಿ ಸೋತಿದ್ದರು. ರಾಜಕೀಯವೇ ಸಾಕಪ್ಪಾ ಅಂತ ಸುಮ್ಮನಿದ್ದರೆ ಇಂದು ಮುಖ್ಯಮಂತ್ರಿ ಆಗುವಷ್ಟು ದೊಡ್ಡ ನಾಯಕರಾಗಿ ಬೆಳೆಯುತ್ತಿರಲಿಲ್ಲ. ಹಠ, ಛಲ ದಿಂದ ಮುನ್ನುಗ್ಗಿ ರಾಜ್ಯ ರಾಜಕಾರಣದಲ್ಲಿ ಬಂಡೆ ಆಗಿ ಬದಲಾದರು. ಡಿಕೆಶಿ ರೀತಿಯಲ್ಲೇ ಇನಾಯತ್ ಆಲಿ ಹಠ, ಛಲ ಹೊಂದಿದ್ದಾರೆ. ರಾಜಕಾರಣದಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ಇನಾಯತ್ ಆಲಿ ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಅದ್ದೂರಿ ಕಾರ್ಯಕ್ರಮ ನಡೆಸಿ ಪಕ್ಷಕ್ಕೆ ಬೂಸ್ಟ್ ಕೊಟ್ಟಿದ್ದಾರೆ. ಮಂಗಳೂರು ಉತ್ತರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಬೆರಗುಗಣ್ಣಿನಿಂದ ನೋಡುತ್ತಿದೆ. ಇದಕ್ಕೆಲ್ಲ ಇನಾಯತ್ ಆಲಿ ಯವರ ಸಂಘಟನಾ ಚಾತುರ್ಯತೆ ಕಾರಣ. ಡಿಕೆಶಿ ಆಪ್ತತೆಯಿಂದ ಬಂದ ಬಳುವಳಿ ಅಂದರೂ ತಪ್ಪಲ್ಲ.
ಇನ್ನು ಮುಂದೆ ರಾಜ್ಯದಲ್ಲಿ ಡಿಕೆಶಿ ಪರ್ವ. ಜಿಲ್ಲೆಯಲ್ಲಿ ಇನಾಯತ್ ಆಲಿ ಪರ್ವ ಅಂದರೂ ತಪ್ಪಲ್ಲ. ಜಿಲ್ಲೆಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರಿದ್ದರೂ ಡಿಕೆಶಿ ಅವರ ನಂಬಿಕಸ್ಥ ಬಂಟರಾಗಿ ಗುರುತಿಸಿಕೊಂಡವರು ಇನಾಯತ್ ಆಲಿ. ಕಳೆದ ಮೂರು ವರ್ಷಗಳಿಂದ ಇನಾಯತ್ ಆಲಿ ಬಳಿಗೆ ಸಮಸ್ಯೆ, ಸಂಕಷ್ಟ ಹೇಳಿ ಬರುವ ಸಂಖ್ಯೆಗೆ ಲೆಕ್ಕಕ್ಕಿಲ್ಲ. ಅವರೇನೂ ಶಾಸಕರಲ್ಲ. ಆದರೆ ಬಡವರು, ಹಿಂದುಳಿದವರು, ಸಂಕಷ್ಟದಲ್ಲಿರುವವರ ಬಗ್ಗೆ ಅವರಿಗಿರುವ ಬದ್ಧತೆ, ಸಾಮಾಜಿಕ ಕಳಕಳಿ ಅಪರೂಪದ ನಾಯಕರಾಗಿ ಬೆಳೆಸಿದೆ. ವಿವಿಧ ಧರ್ಮ, ಪಕ್ಷಗಳ ಜನರು ಇನಾಯತ್ ಆಲಿ ಅವರ ಕಾರ್ಯಕ್ಕೆ ಮನಸೋತಿದ್ದಾರೆ. ಧರ್ಮಾತೀತವಾಗಿ ಜನರ ಸಂಕಷ್ಟಕ್ಕೆ ಮಿಡಿಯುವ ಅವರ ಸೇವೆಯನ್ನು ಜಿಲ್ಲೆಯ ಜನ ಕೊಂಡಾಡುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಕ್ರೀಯ ರಾಜಕಾರಣಕ್ಕೆ ಇಳಿದು ಹಲವಾರು ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಇಲ್ಲಿನ ಘಟಾನುಘಟಿ ನಾಯಕರಿಗೆ ಮಾಡಲಾಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಸರಕಾರದಿಂದ ಹಲವಾರು ಇಲಾಖೆಯಿಂದ ಫಂಡ್ ಗಳನ್ನು ತಂದು ಜಿಲ್ಲೆಯ ಅಭಿವೃದ್ದಿ ಕಾರ್ಯಕ್ಕೆ ಬಳಸಿದ್ದಾರೆ. ಆದರೆ ಅದನ್ನು ಪ್ರಚಾರದ ವಸ್ತುವಾಗಿ ಬಳಸಿಲ್ಲ ಅನ್ನುವುದು ಅಷ್ಟೇ ದಿಟ.
ರಾಜ್ಯದಲ್ಲಿ ಡಿಕೆಶಿ ಪರ್ವ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಇನಾಯತ್ ಆಲಿ ಪರ್ವ ಆರಂಭವಾಗಲಿದೆ ಅನ್ನುವುದು ಅಷ್ಟೇ ಸತ್ಯ. ಇನ್ನು ಜಿಲ್ಲೆಯಲ್ಲಿ ಯಾರೇ ಎಷ್ಟು ದೊಡ್ಡ ಲೀಡರ್ ಆದರೂ ಪವರ್ ಮಾತ್ರ ಇನಾಯತ್ ಅಲಿಯವರದ್ದೆ. ಡಿಕೆಶಿ ತನ್ನ ನಂಬಿಕಸ್ಥ ಬಂಟನಿಗೆ ‘ಪವರ್’ ನೀಡಲಿದ್ದಾರೆ ಅನ್ನುವುದು ಅಷ್ಟೇ ಸತ್ಯ. ಸಿ.ಎಂ ಆಪ್ತ ಬಳಗದಲ್ಲಿ ಇನಾಯತ್ ಆಲಿ ವಿರಾಜಮಾನರಾಗಲಿದ್ದಾರೆ; ಆ ಮೂಲಕ ಜಿಲ್ಲೆಯ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಲಿದೆ. ಇನಾಯತ್ ಆಲಿ ಅವರ ಮಾನವೀಯ ಪ್ರತಿರೂಪದ ರಾಜಕಾರಣಕ್ಕೆ ದೊಡ್ಡದೊಂದು ಯಶಸ್ಸು ಸಿಗಲಿದೆ.
