ಕಡಲತೀರದ ಹೈ ಪ್ರೊಫೈಲ್ ಸಲಿಂಗಿ ಹನಿ ಕಹಾನಿ ಭಾರೀ ಸುದ್ದಿ ಮಾಡಿದೆ. ಜಿಲ್ಲಾ ಯುವ ಕಾಂಗ್ರೆಸ್ ಮುಖಂಡನೊಬ್ಬನ ಇಶಾರೆಯಲ್ಲಿ ಲೂಟಿ ಕಹಾನಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿ ಮಾಡಿದೆ. ಈ ಹನಿಟ್ರ್ಯಾಪ್ ದಂಧೆಯಲ್ಲಿ ಕೆಲವೊಂದು ವಿಷಯ ಮರೆಮಾಚಿದ್ದು ಇದರ ವಿಸ್ತ್ರತ ತನಿಖೆ ನಡೆಯಬೇಕಿದೆ.
ಅಸಲಿಗೆ ಕೋಲಾಟದ ಈ ಕಹಾನಿಯ ಹಿಂದೆ ಇದ್ದಿದ್ದು ಮಂಜನಾಡಿ ಕಲ್ಕಟ್ಟ ಸಮೀಪದ ಜಿತೇಶ್ ಅನ್ನುವ ಸುರಸುಂದರಾಂಗ ಯುವಕ. ತನ್ನ ಯಜಮಾನ ಉದ್ಯಮಿಯನ್ನು ಮೊದಲು ಯಾಮಾರಿಸಿದ್ದೇ ಈ ಖತರ್ನಾಕ್ ಯುವಕ. ಉದ್ಯಮಿಯ ಗುತ್ತಿಗೆ ಕಂಪೆನಿಯಲ್ಲಿ ಇಂಜಿನಿಯರ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಜಿತೇಶ್ ತನ್ನ ಕೋಲಾಟದ ದೃಶ್ಯಾವಳಿಗಳನ್ನು ಪೋನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಉದ್ಯಮಿಯಿಂದ 35 ಲಕ್ಷ ರೂಪಾಯಿ ಯಾಮಾರಿಸಿದ್ದ. 2024 ರಲ್ಲಿ ಉದ್ಯಮಿಯನ್ನು ಖೆಡ್ಡಾಕ್ಕೆ ಬೀಳಿಸಿ ದುಡ್ಡು ಪೀಕಿಸಿದ್ದ ಜಿತೇಶ್, ಆ ನಂತರ ವಿಡಿಯೋ ಮುಂದಿಟ್ಟುಕೊಂಡು ಉದ್ಯಮಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಸುರಸುಂದರಾಂಗ ಯುವಕನ ರಸ ಹೀರಲು ಹೋಗಿ ಕಂಪ್ಲೀಟ್ ಖೆಡ್ಡಾಕ್ಕೆ ಬಿದ್ದಿದ್ದ ಉದ್ಯಮಿ ಇದರಿಂದ ಪಾರಾಗಲು ತಮ್ಮದೇ ಕಂಪೆನಿಯಲ್ಲಿ ಕೆಲಸದಲ್ಲಿದ್ದ ನಿಝಾಮ್ ಎಂಬಾತನಲ್ಲಿ ಜಿತೇಶ್ ನ ಬ್ಲ್ಯಾಕ್ ಮೇಲ್ ಪುರಾಣವನ್ನು ಬಿಚ್ಚಿಟ್ಟಿದ್ದ. ಆದರೆ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಮಧ್ಯಸ್ಥಿಕೆ ವಹಿಸಬೇಕಿದ್ದ ಅಸಾಮಿ ಜಿತೇಶ್ ನೊಂದಿಗೆ ಸೇರಿ, ಪಕ್ಕಾ ಕ್ರಿಮಿನಲ್ ಪ್ಲ್ಯಾನ್ ರೂಪಿಸಿ ಉದ್ಯಮಿಯನ್ನೇ ಕೋಟಿಗಟ್ಟಲೆ ಲೂಟ್ ಮಾರ್ ನಡೆಸಿದರು. ಇತ್ತೀಚೆಗೆ ಜಿತೇಶ್ ಕಟೀಲು ಸಮೀಪದ ಕಲ್ಯಾಣ ಮಂಟಪದಲ್ಲಿ ಭರ್ಜರಿಯಾಗಿ ಗೃಹಸ್ಥಮಾನಕ್ಕೆ ಕಾಲಿಟ್ಟ, ನಂತರ ಕಲ್ಕಟ್ಟ ಬಳಿಯಿರುವ ತನ್ನ ಕನಸಿನ ಮನೆಯ ಗೃಹಪ್ರವೇಶವನ್ನು ನಡೆಸಿದ.
ಬಹುಶಃ ಹನಿಟ್ರ್ಯಾಪ್ ದಂಧೆಯಲ್ಲಿ ಇಂತಹ ಖತರ್ನಾಕ್ ಐಡಿಯಾ ಬಳಕೆಯಾದದ್ದೇ ಇದೇ ಮೊತ್ತ ಮೊದಲು ಆಗಿರಬೇಕು. ಜಿತೇಶ್ ಅನ್ನುವ ಸುಂದರಾಂಗ ದುಡ್ಡಿಗಾಗಿ ಸತ್ತಂತೆ ನಟಿಸಿದ್ದ, ಕುತ್ತಿಗೆಗೆ ಹಗ್ಗಕಟ್ಟಿದ. ನಿಝಾಮ್ ದುಡ್ಡಿಗಾಗಿ ಜಿತೇಶ್ ನನ್ನು ಹೆಣವಾಗಿಸುವ ನಾಟಕ ಆಡಿದ್ದ. ಇವರಿಬ್ಬರ ರಿಹರ್ಸಲ್ ಗಳನ್ನೇ ರಿಯಲ್ ಎಂದು ನಂಬಿ ಕೋಲಾಟದ ಕಿಲಿಕಿಲಿ ಆಡಿದ ಉದ್ಯಮಿ ಕೋಟಿ, ಕೋಟಿ ಕಳೆದುಕೊಂಡ.

ಜಿತೇಶ್ ಜತೆ ಗುತ್ತಿಗೆದಾರ ಆಪ್ತವಾಗಿರುವ ವಿಡಿಯೋ ಮಾಡಿ ಆರಂಭದಲ್ಲಿ ಜಿತೇಶ್ ಮಾತ್ರ ಬ್ಲಾೃಕ್ ಮೇಲ್ ಮಾಡುತ್ತಿದ್ದ. ಈತ ಗುತ್ತಿಗೆದಾರನಿಂದ 35 ಲಕ್ಷ ರೂ. ಚೆಕ್ ಮೂಲಕ ಪಡೆದಿದ್ದ. ಮರ್ಯಾದೆಗೆ ಅಂಜಿ ಈ ವಿಚಾರವನ್ನು ಸರಿ ಮಾಡಿಕೊಡುವಂತೆ ನಿಜಾಮ್ ಜತೆ ಗುತ್ತಿಗೆದಾರ ಹೇಳಿದ್ದು, ಆದರೆ ನಿಜಾಮ್ ಕೂಡಾ ಜಿತೇಶ್ ಜತೆ ಸೇರಿ ಬ್ಲಾೃಕ್‌ಮೇಲ್ ಮಾಡತೊಡಗಿದ್ದ. ಜಿತೇಶ್ ಘಟನೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್ ನೋಟ್‌ನಲ್ಲಿ ನಿಮ್ಮ ಹೆಸರಿದೆ, ಕೋರ್ಟ್ ಕಚೇರಿ ಎಂದು ಹೋದರೆ ಜೈಲಿಗೆ ಹೋಗುವುದು ಖಚಿತ ಎಂದು ಬೆದರಿಸಿ ಸುಳ್ಳು ಕಥೆ ಕಟ್ಟಿ ಬ್ಲಾೃಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಇಬ್ಬರೂ ಸೇರಿ 2024ರಿಂದ 2026ರ ತನಕ ಹಂತ ಹಂತವಾಗಿ ಬರೋಬ್ಬರಿ 2.77 ಕೋಟಿ ರೂ. ವಸೂಲಿ ಮಾಡಿದ್ದಾರೆ. ಪ್ರಕರಣದ ಹಿಂದೆ ಈ ಇಬ್ಬರು ಆರೋಪಿಗಳು ಮಾತ್ರ ಇದ್ದರಾ ಅಥವಾ ಬೇರೆ ಯಾರಿಗಾದರೂ ಪಾಲು ಹೋಗಿದೆಯೇ ಎನ್ನುವುದು ಪೊಲೀಸ್ ತನಿಖೆಯ ಬಳಿಕಷ್ಟೇ ತಿಳಿದು ಬರಬೇಕಾಗಿದೆ. ಇಗೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಇಂದಿನ ದಿನಗಳಲ್ಲಿ ಛೋಟಾ ನಾಯಕರು ದೊಡ್ಡ ನಾಯಕರ ಮುಂದೆ ನಿಂತು ತಾವು ದೊಡ್ಡ ನಾಯಕರೆಂದು ಬಿಂಬಿಸುವುದು ಸರ್ವೇ ಸಾಮಾನ್ಯವಾಗಿ ಬಿಡುತ್ತದೆ. ರಾಜಕಾರಣದಲ್ಲಿ ಪೋಟೋ ಶೂಟ್ ಪ್ರಾಮುಖ್ಯವಾಗಿರುವುದರಿಂದ ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಆದರೆ ರಾಜಕಾರಣವನ್ನು ದುಡ್ಡು ಪೀಕಿಸುವ ದಂಧೆ ಮಾಡುವ ಕೆಲವೊಂದು ವೈಟ್ ಕಾಲರ್ ಕುಳಗಳು ಪೊಲೀಸ್ ಅಧಿಕಾರಿಗಳ ಹಿಂದೆ ನಿಂತು ಪೋಟೋ ಕ್ಕೆ ಪೋಸ್ ಕೊಡುತ್ತಾರೆ. ಪೊಲೀಸ್ ಅಧಿಕಾರಿಗಳು ಕೂಡ ಕಿಸಕ್ಕನೆ ನಕ್ಕು ಪೋಸ್ ಕೊಡುತ್ತಾರೆ. ಇನ್ನು ಕೆಲವರಂತೂ ಪೊಲೀಸರ ಹೆಗಲ ಮೇಲೂ ಕೈ ಹಾಕಿ ಸೆಲ್ಪಿ ತೆಗೆಯುವ ಪರಿಪಾಠವಿದೆ. ಕೆಲವರಂತು ಕೆಲವು ಅಧಿಕಾರಿಗಳನ್ನು ಮನೆಗೆ ಕರೆದು ಡಿನ್ನರು-ಗಿನ್ನರು ಮಾಡಿ ಬುಟ್ಟಿಗೆಗೆ ಹಾಕಿಕೊಳ್ಳುತ್ತಾರೆ.

ಒಂದು ಕಾಲವಿತ್ತು ಮಂಗಳೂರಿನ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿದರೆ ಉಚ್ಛ ಒಯ್ಯುತ್ತಿದ್ದರು. ಇಂದು ಗಾಂಜಿ ಪೀಂಜಿಗಳ ಪ್ರೊಪೈಲು, ಡಿಪಿ, ಸ್ಟೇಟಸ್, ಪೇಸು ಬುಕ್ಕು, ಇನ್ಸ್ಟಾ ಗಳಲ್ಲಿ ಕೆಲವು ಅಧಿಕಾರಿಗಳದ್ದೇ ಪೋಟೋ. ಏನು.. ಪೋಸು..! ಇದು ನಿಜವಾಗಿಯು ಸಮಾಜಕ್ಕೆ ತಪ್ಪು ಸಂದೇಶನೀಡುತ್ತದೆ ಎಂಬ ಕಿಂಚಿತ್ತು ಅರಿವು ಅಧಿಕಾರಿಗಳಿಗೆ ಬೇಕು. ಈ ಹಿಂದೆ ಅಧಿಕಾರಿಗಳು ಕ್ರೈಂ, ಕಾನೂನು ಸುವ್ಯವಸ್ಥೆ ಕಾಪಾಡಲು, ಪ್ರಭಾವ ಬೀರದಂತೆ ತಡೆಯಲು ಛೋಟಾ ನಾಯಕರನ್ನು ಹತ್ತಿರಕ್ಕೆ ಸುಳಿಯಲು ಬಿಡುತ್ತಿರಲಿಲ್ಲ. ಆದರೆ ಈಗಿನ ಜಮಾನದ ಅಧಿಕಾರಿಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇವರು ಕುಣಿಸುತ್ತಿದ್ದಾರೆ. ಅಧಿಕಾರಿಗಳ ಜೊತೆಗಿನ ಸೆಲ್ಪಿಯನ್ನು ತಮ್ಮ ಪ್ರಭಾವಕ್ಕೆ ಬಳಸಿಕೊಳ್ಳುತ್ತಾರೆ. ಕೊನೆಗೆ ಸಿಕ್ಕಿ ಬೀಳುವಾಗ ತಮ್ಮ ಜೊತೆಗೆ ಪೋಟೋ ಗೆ ಪೋಶ್ ಕೊಟ್ಟವರ ಮಾನವೂ ಹರಾಜಾಗುತ್ತದೆ. ಕೊನೆಗೆ ಬಲಾಲ್ ಮುಸೀಬತ್ತ್.!
