ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತಿದ್ದ ಪ್ರಕರಣದ ಆರೋಪಿ, ಅಬ್ಬಾಸ್ ಮುಳ್ಳುಗುಡ್ಡೆ, ಕೋಟೆಕಾರ್ ಎಂಬಾತನನ್ನು ವಶಕ್ಕೆ ಪಡೆದ ಪಣಂಬೂರು ACP ಪೊಲೀಸರ ತಂಡ ಹಾಗೂ ಮುಲ್ಕಿ ಪೊಲೀಸರ ತಂಡ ಜಂಟಿ ಕಾರ್ಯಚರಣೆ ನಡೆಸಿ, ಆರೋಪಿಯ ವಶವಿದ್ದ ಎರಡು ಲಕ್ಷ ರೂ ಮೌಲ್ಯದ 4 ಕೆಜಿ ಗಾಂಜಾ ಮಾದಕದ್ರವ್ಯವನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಾರದ ಮುಳಿಹಿತ್ಲು ಬಳಿ ಸಾರ್ವಜನಿಕರಿಗೆ ಎಂಡಿಎಂಎ ಮಾರಾಟಮಾಡುತ್ತಿದ್ದ, ಧನುಷ್ ಸುರಕ್ಷಾ ನಗರ ಎಂಬಾತನನ್ನು ಬಂಧಿಸಿ ಆತನ ವಶವಿದ್ದ 3.32 ಗ್ರಾಂ ಎಂಡಿಎಂಎ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ಆರೋಪಿಯನ್ನುಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಮಂಗಳೂರು ನಗರದ ಲಾಡ್ಜ್ ವೊಂದರಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ, ಸೋಮೇಶ್ವರ ಉಚ್ಚಿಲದ ಉಮರುಲ್ ಪಾರೂಕ್, ಹಲಸೂರಿನ ಮಹಮ್ಮದ್ ನದೀಂ, ಕಿನ್ಯಾ ಸಮೀಪದ ಇಮ್ತಿಯಾಜ್ ಇಸ್ಮಾಯಿಲ್ ಎಂಬವರನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿ, ಆರೋಪಿಗಳ ವಶವಿದ್ದ 35.33 ಗ್ರಾಂ, ಎಂಡಿಎಂಎ ಮತ್ತು 7030ರೂ. ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
