ಬಸವರಾಜ್ ವಿ.ಕೋರಿಮಠ ರವರ ಗೆಲುವು ನ್ಯಾಯಕ್ಕೆ ಸಂದ ಗೌರವ: ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ.ಜಿಲ್ಲಾ ಘಟಕ
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ 2026ರ ಚುನಾವಣೆಯಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಮುಖಂಡರಾದ ಹುಬ್ಬಳ್ಳಿಯ ಬಸವರಾಜ್ ವಿ.ಕೋರಿಮಠ ಗೆಲುವು ಸಾಧಿಸಿದ್ದು, ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ ಜಿಲ್ಲಾ ಸಮಿತಿ ಅಭಿನಂದನೆಗಳನ್ನು ಸಲ್ಲಿಸಿದೆ.
ಹುಬ್ಬಳ್ಳಿಯಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಬಸವರಾಜ್ ವಿ. ಕೋರಿಮಠರವರು AILU ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ಸಿವಿಲ್ ನ್ಯಾಯಾಧೀಶರ ಹುದ್ದೆಯ ಆಕಾಂಕ್ಷಿಗಳಿಗೆ ಹಾಗೂ ಯುವ ವಕೀಲರಿಗೆ AILU ವತಿಯಿಂದ ಸುಮಾರು ಐದಾರು ವರ್ಷಗಳಿಂದ ನಡೆಸುತ್ತಿರುವ ಆನ್ ಲೈನ್ ತರಭೇತಿಯ ತರಗತಿ ಮತ್ತು ಕಾರ್ಯಾಗಾರಗಳಲ್ಲಿ ಮಹತ್ವದ ಪಾತ್ರವಹಿಸಿ ರಾಜ್ಯಾದ್ಯಂತ ವಕೀಲರ ವೃತ್ತಿ ಕೌಶಲ್ಯದ ಬಲವರ್ಧನೆಯಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿ, ವಕೀಲ ಸಮುದಾಯದ ಮಧ್ಯೆ ತಮ್ಮದೇ ಛಾಪನ್ನು ಒತ್ತಿದ್ದಾರೆ.
ಕೋರಿಮಠರವರ ಗೆಲುವು ನ್ಯಾಯಕ್ಕೆ ಸಂದ ಗೌರವವಾಗಿದ್ದು, ಅವರ ಗೆಲುವಿಗಾಗಿ ಶ್ರಮಿಸಿದ ರಾಜ್ಯದ ವಕೀಲ ಮಿತ್ರರಿಗೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ ಮರೋಳಿ ಮತ್ತು ಕಾರ್ಯದರ್ಶಿ ನಿತಿನ್ ಕುತ್ತಾರ್ ರವರು ಜಂಟಿ ಹೇಳಿಕೆ ನೀಡಿರುತ್ತಾರೆ.
