ಪವಿತ್ರ ಉಮ್ರಾ ನಿರ್ವಹಿಸಿ ಮಕ್ಕಾದಿಂದ ಹಿಂತಿರುಗುತ್ತಿದ್ದಾಗ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸೌದಿ ಮಸೀದಿಯ ಇಮಾಮ್, ಅವರ ಪತ್ನಿ ಮತ್ತು ಅವರ ಐದು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಸೌದಿಯ ಕರಾವಳಿ ನಗರವಾದ ಅಲ್ ಕುನ್ಫುದಾ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್, ಇಮಾಮ್ ಶೇಖ್ ಅಹ್ಮದ್ ಅಲ್ ಬಸಿಸಿ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ 7 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
