ಕರಾವಳಿಗರ ಮೇಲೆ, ಕರಾವಳಿಯ ಬ್ರಾಹ್ಮಣರ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಟಿಪ್ಪುವನ್ನು ಮಂಗಳೂರಿಗರು ವಿರೋಧಿಸುವುದು ದುರಂತ

ಕರಾವಳಿ

✍️. ನವೀನ್ ಸೂರಿಂಜೆ ಪತ್ರಕರ್ತ

ಕೊಡಗಿನ ಅರಸನಾದ ವೀರ ರಾಜೇಂದ್ರ ಒಡೆಯನು ಅಳದಂಗಡಿ, ಜೈಲಂಗಡಿ, ಬಂಗಾಡಿ ಮುಂತಾದ ಊರುಗಳನ್ನು ಸುಲಿಗೆ ಮಾಡಿ, ಬಂಟ್ವಾಳಕ್ಕೆ ಬಂದು ಪೇಟೆಯನ್ನು ಸುಲಿಗೆ ಮಾಡಿ ಬಂಟ್ವಾಳ ಶ್ರೀ ವೆಂಕಟ್ರಮಣ ದೇವರ ಪ್ರತಿಮೆಯನ್ನೂ ಅನೇಕ ಮಂದಿ ಗೌಡ ಸಾರಸ್ವತ ಬ್ರಾಹ್ಮಣರನ್ನು ಸೆರೆ ಹಿಡಿದು ಕೊಡಗಿಗೆ ಕರೆದುಕೊಂಡು ಹೋದನು. ಮುಖ್ಯವಾಗಿ ಗೌಡ ಸಾರಸ್ವತ ಬ್ರಾಹ್ಮಣರ ಹೆಂಗಸರನ್ನು ಸೆರೆ ಹಿಡಿದು ಕೊಡಗಿಗೆ ಕರೆದೊಯ್ದರು. ಇದು ಟಿಪ್ಪು ಆಕ್ರೋಶಕ್ಕೆ ಕಾರಣವಾಗಿತ್ತು. (ಆಧಾರ : ಖ್ಯಾತ ಇತಿಹಾಸಕಾರ ಗಣಪತಿ ರಾವ್ ಐಗಳ್ ರವರು 1923 ರಲ್ಲಿ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಪುಸ್ತಕದ ‘ಕೊಡವರು’ ಎಂಬ ಅಧ್ಯಾಯದ ಪುಟ ಸಂಖ್ಯೆ 241)

ಕರಾವಳಿಗರ ಮೇಲೆ, ಕರಾವಳಿಯ ಬ್ರಾಹ್ಮಣರ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಟಿಪ್ಪುವನ್ನು ಮಂಗಳೂರಿಗರು ವಿರೋಧಿಸುವುದು ದುರಂತ. ಟಿಪ್ಪು ಸುಲ್ತಾನ್ ಕೊಡವ ರಾಜ‌ನ ಮೇಲೆ ಕೋಪ ಹೊಂದಿದ್ದೇ ಮಂಗಳೂರಿನ ಬ್ರಾಹ್ಮಣರ ಮೇಲಿನ ಪ್ರೀತಿಯಿಂದಾಗಿ.!*