ಕಿನ್ನಿಗೋಳಿ: ತಾಯಿಯನ್ನು ರಕ್ಷಿಸಿ ಸಾಹಸ ಮೆರೆದ ಬಾಲಕಿ ವೈಭವಿ ಗೆ ಮಂಗಳೂರು ಪೊಲೀಸ್ ಕಮಿಷನರ್ ರವರಿಂದ ಸನ್ಮಾನ

ದಿನಾಂಕ 06-09-2024 ರಂದು ಸಂಜೆ ಕಿನ್ನಿಗೋಳಿಯ ರಾಮನಗರ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತಾಯಿಗೆ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದು ಒದ್ದಾಡುತ್ತಿದ್ದ ತಾಯಿಯನ್ನು ಕೂಡಲೇ ಧಾವಿಸಿ ಬಂದು ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ರಿಕ್ಷಾ ಮೇಲಕ್ಕೆತ್ತಿ ರಕ್ಷಿಸಿದ ಬಾಲಕಿ ವೈಭವಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ನೇತೃತ್ವದಲ್ಲಿ ಸನ್ಮಾನಿಸಿದರು. ಬಾಲಕಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಎಲ್ಲರೂ ಕೊಂಡಾಡಿದರು. ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಾಮಾಜಿಕ […]

Continue Reading

ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಬಿತ್ತುಪಾದೆ ನಿಧನ

ನೀರುಮಾರ್ಗ ಪರಿಸರದಲ್ಲಿ ಅಮ್ಮಿಯಾಕ ಎಂದೇ ಜನಪ್ರಿಯರಾಗಿದ್ದ ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಇಂದು ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸ್ಥಳೀಯವಾಗಿ ಜನಾನುರಾಯಿಯಾಗಿದ್ದ ಹಮೀದ್ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಹಲವು ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದರು. ಅಧ್ಯಕ್ಷರಾಗುವ ಅವಕಾಶ ಇದ್ದರೂ ಪಕ್ಷಕ್ಕಾಗಿ ತ್ಯಾಗ ಮಾಡಿದ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾಗಿದ್ದುಕೊಂಡು ತಾವೇ ಮುಂದಾಳತ್ವ ವಹಿಸಿ ನೀರಿನ ಪೈಪ್, ಚರಂಡಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೆರವೇರಿಸಿಕೊಡುತ್ತಿದ್ದರು. ಅಮ್ಮಿ ಇದ್ದರೆ ಸಾಕು ಇಲ್ಲಿ ಸಮಸ್ಯೆ ಮುಗಿಯಿತು ಅನ್ನುವ ರೀತಿಯಲ್ಲಿ […]

Continue Reading

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ ಗೆ ಆಘಾತ.!

ಏಕನಾಥ್ ಶಿಂಧೆ ಸರ್ಕಾರ ಮಹಾರಾಷ್ಟ್ರದ ಜನರ ಮನಸ್ಸು ಗೆಲ್ಲುವಲ್ಲಿ ವಿಫಲ: ಲೋಕ್ ಪೋಲ್ ಸಮೀಕ್ಷೆ ಡಿಸೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ಪ್ರಮುಖ ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಅಧಿಕಾರದಲ್ಲಿರುವ ಎನ್‌ಡಿಎ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಭಗೀರಥ ಪ್ರಯತ್ನ ನಡೆಸುತ್ತಿದೆ. ಈ ಬಾರಿ ಎನ್ ಡಿ ಎ ಗೆ ಆಘಾತ ಎದುರಾಗುವ ಸೂಚನೆ ಸಿಕ್ಕಿದೆ. ಲೋಕ್‌ಪೋಲ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದ್ದು, ಎನ್‌ಡಿಎಗೆ ಹಿನ್ನಡೆಯಾಗಲಿದೆ ಎಂದು ವರದಿಯಾಗಿದೆ. ಹಲವು ರಾಜ್ಯಗಳ ವಿಧಾನಸಭಾ […]

Continue Reading

ನಾಳೆ ಸಂಜೆಯೊಳಗೆ ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಿಗೆ ಆದೇಶ

ಆದೇಶ ಪಾಲಿಸದಿದ್ದರೆ ರಾಜ್ಯ ಸರ್ಕಾರ ವೈದ್ಯರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬಹುದು: ಸುಪ್ರೀಂ ಕೋರ್ಟ್ ಕೋಲ್ಕತ್ತಾದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರಿಗೆ ಸುಪ್ರೀಂ ಕೋರ್ಟ್ ನಾಳೆ ಮಂಗಳವಾರ ಸಂಜೆ 5 ಗಂಟೆಯೊಳಗೆ ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಿದೆ. ವೈದ್ಯರು ಆದೇಶ ಪಾಲಿಸದಿದ್ದರೆ ರಾಜ್ಯ ಸರ್ಕಾರ ಅವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬಹುದು […]

Continue Reading

ಬೋಳಂತೂರಿನ ಭವ್ಯ ಇತಿಹಾಸಕ್ಕೆ ಕಪ್ಪು ಚುಕ್ಕೆ ಇಟ್ಟ ಕೋಮುವಾದಿಗಳು.!

ನೂರಾರು ಮುಸ್ಲಿಮ್ ಸೈನಿಕರು ಮಡಿದು ಯುದ್ಧ ಗೆದ್ದಿದ್ದರಿಂದಲೇ ಬೊಳಂತೂರಿನಲ್ಲಿ ದೈವಸ್ಥಾನ ನಿರ್ಮಿಸಲು ಸಾಧ್ಯವಾಯಿತು. ಮಸೀದಿಗೆ ಪತ್ರ ಬರೆದು ಅವಮಾನ ಮಾಡಿದೆವು ಎಂದು ಕೋಮುವಾದಿಗಳು ಅಂದುಕೊಂಡಿರಬಹುದು. ಆದರೆ, ಇದು ಬೋಳಂತೂರಿನ ‘ಅರಸು ಕುರಿಯಡಿತ್ತಾಯಿ ಮೂವರು ದೈವಂ’ಗಳಿಗೆ ಮಾಡುವ ಅವಮಾನವಲ್ಲದೇ ಇನ್ನೇನೂ ಅಲ್ಲ. ✍️. ನವೀನ್ ಸೂರಿಂಜೆ. ಪತ್ರಕರ್ತರು ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ತುಳಸೀವನ ಗಣೇಶೋತ್ಸವ ಮೆರವಣಿಗೆಗೆ ಈ ಬಾರಿ ಬೋಳಂತೂರು ಮಸೀದಿಯಿಂದ ತಂಪು ಪಾನೀಯ, ಸಿಹಿತಿಂಡಿ ವಿತರಿಸಬಾರದು ಎಂದು ಬೊಳಂತೂರಿನ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿ ಹೇಳಿದೆ. […]

Continue Reading

ಎತ್ತಿನಹೊಳೆ ಯೋಜನೆಯ ಮೊದಲ ಹಂತ ಸಾಕಾರಗೊಂಡ ಬೆನ್ನಲ್ಲೇ ಕೇಂದ್ರ ಸಚಿವಾಲಯಗಳ ತಕರಾರು

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತ ಸಾಕಾರಗೊಂಡ ಬೆನ್ನಲ್ಲೇ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತಕರಾರು ಎತ್ತಿದೆ.ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿಗಳಿದ್ದು, ಈ ಬಗ್ಗೆ ವಾಸ್ತವಾಂಶದ ಹಾಗೂ ಇಡೀ ಯೋಜನೆ ಕಾರ್ಯಸಾಧ್ಯತೆಯ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ. ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ದೇವನಹಳ್ಳಿ ಕೈಗಾರಿಕಾ ಪ್ರದೇಶದ ಕುಡಿಯುವ ನೀರು ಒದಗಿರುವ ಉದ್ದೇಶದ ಈ ಯೋಜನೆಗೆ ಈವರೆಗೆ […]

Continue Reading

ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿಯ ಸೂರಲ್ಪಾಡಿ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಟೋಲ್ ಗೇಟ್ ಸ್ಥಳಕ್ಕೆ ಭೇಟಿ, ವೀಕ್ಷಣೆ

ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ನೇತ್ರತ್ವದಲ್ಲಿ ಪರಿಶೀಲನೆ ಮಂಗಳೂರು, ಮೂಡಬಿದ್ರೆ, ಕಾರ್ಕಳ ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರುತ್ತಿದ್ದು, ನಂತೂರಿನಿಂದ 17 ಕಿ.ಮೀ ದೂರದಲ್ಲಿ ಗಂಜಿಮಠದ ಸೂರಲ್ಪಾಡಿ ಮಸೀದಿ ಸಮೀಪ ಟೋಲ್ ಸಂಗ್ರಹ ಪ್ಲಾಝಾದ ಕಾಮಗಾರಿ ಭರದಿಂದ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಸ್ಥೆ, ನಿಧಾನಗತಿ, ಸ್ವಜನ ಪಕ್ಷಪಾತದ ದೂರುಗಳು, ಟೋಲ್ ಸಂಗ್ರಹ ಪ್ಲಾಜ಼ಾ ನಿರ್ಮಾಣದ ಸ್ಥಳವನ್ನು ಅವೈಜ್ಞಾನಿಕವಾಗಿ ಗುರುತಿಸಿರುವ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಇಂದು […]

Continue Reading

ಬಡವರಿಗೆ ಭೂಮಿ ಸಿಗುವಂತಾಗಲು ಕಮ್ಯುನಿಸ್ಟ್ ಚಳುವಳಿಯ ಪಾತ್ರ ಅಪಾರ-ಸುನೀಲ್ ಕುಮಾರ್ ಬಜಾಲ್

ದ.ಕ ಜಿಲ್ಲೆಯಲ್ಲಿ ಉಳುವವನೇ ಹೊಲದೊಡೆಯ ಕಾನೂನು ಜಾರಿಗೊಳಿಸಲು ಕಮ್ಯುನಿಸ್ಟ್ ನಾಯಕರು ಭೂ ಮಾಲೀಕರನ್ನು ದಿಟ್ಟವಾಗಿ ಎದುರಿಸಿ ನಡೆಸಿದ ಸಮರಧೀರ ಹೋರಾಟದ ಫಲವಾಗಿ ಬಡ ರೈತರು ಭೂಮಿಯ ಒಡೆಯರಾಗಲು ಸಾಧ್ಯವಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಕಾರ್ಮಿಕ ವರ್ಗದ ಹಾಗೂ ಜನಸಾಮಾನ್ಯರ ಯಾವುದೇ ಪ್ರಶ್ನೆಗಳು ಎದುರಾದಾಗ ಅವುಗಳ ವಿರುದ್ದ ಹೋರಾಟ ನಡೆಸಿ ಜನತೆಯ ಗಟ್ಟಿ ಧ್ವನಿಯಾಗುವಲ್ಲಿ ಕಮ್ಯುನಿಸ್ಟ್ ಪಕ್ಷದ ಪಾತ್ರವೇ ಹಿರಿದಾದದ್ದು.ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ತ್ಯಾಗ ಬಲಿದಾನದ ಪರಂಪರೆಯನ್ನು ಕೂಡ ಕಮ್ಯುನಿಸ್ಟ್ ಪಕ್ಷ ಹೊಂದಿದೆ ಎಂದು CPIM ಜಿಲ್ಲಾ ಕಾರ್ಯದರ್ಶಿ […]

Continue Reading

ರಾಜ್ಯದಲ್ಲಿ ಹನಿಟ್ರ್ಯಾಪ್‌ ದಂಧೆಯ ಗ್ಯಾಂಗ್ ಸಕ್ರಿಯ; ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಶ್ರೀಮಂತರೇ ಈ ಗ್ಯಾಂಗ್‌ನ ಟಾರ್ಗೆಟ್

ಇತ್ತೀಚೆಗೆ ರಾಜ್ಯದಲ್ಲಿ ಹನಿಟ್ರ್ಯಾಪ್‌ ದಂಧೆಯ ಗ್ಯಾಂಗ್ ಸಕ್ರಿಯವಾಗಿದ್ದು, ಗ್ಯಾಂಗ್‌ನ ಸಂತ್ರಸ್ತೆಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಘಟನೆ ನಡೆದಿದೆ. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಶ್ರೀಮಂತರೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಪರಿಚಯ ಮಾಡಿಕೊಂಡು ನಂತರ ಸಲುಗೆ ಬೆಳೆಸುತ್ತಾರೆ.ಅದಾದ ಬಳಿಕ ಮಂಚಕ್ಕೆ ಕರೆದು ವೀಡಿಯೋ ಮಾಡಲಾಗುತ್ತಿತ್ತು. ನಂತರ ಗ್ಯಾಂಗ್ ಅವರಿಂದ ಲಕ್ಷ, ಲಕ್ಷ ಹಣ ವಸೂಲಿ ಮಾಡುತ್ತಾರೆ. ಈ ವಿಚಾರವನ್ನು ಖುದ್ದು ಹನಿಟ್ರ‍್ಯಾಪ್ ಸಂತ್ರಸ್ತೆ ಇತ್ತೀಚೆಗೆ ಬಿಚ್ಚಿಟ್ಟಿದ್ದಾಳೆ. ಸಂಘಟನೆ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ […]

Continue Reading

ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಐದು ಮಂದಿ ಸಾವು; 24 ಜನರಿಗೆ ಗಾಯ

ಲಖನೌ: ನಗರದಲ್ಲಿ ಶನಿವಾರ ಸಂಜೆ ಮೂರು ಅಂತಸ್ತಿನ ಕಟ್ಟಡ ಕುಸಿದು ಐದು ಮಂದಿ ಮೃತಪಟ್ಟಿದ್ದಾರೆ. ಸುಮಾರು 24 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದು, 24 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತುಗಳು ಇನ್ನಷ್ಟೇ ಪತ್ತೆಯಾಗಬೇಕಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಟ್ಟಡವನ್ನು ಉಗ್ರಾಣವಾಗಿ ಬಳಸಲಾಗುತ್ತಿತ್ತು. ಮೂರು ಅಂತಸ್ತಿನ ಕಟ್ಟಡದಲ್ಲಿ ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು. […]

Continue Reading