ಬಿ.ಸಿ.ರೋಡ್ ತಲಪಾಡಿ ಬಳಿ ನವದಂಪತಿಗಳು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ

ಪತ್ನಿ ಸ್ಥಳದಲ್ಲೇ ಸಾವು, ಪತಿ ಸ್ಥಿತಿ ಚಿಂತಾಜನಕ. ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಮೃತಪಟ್ಟು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿಯಲ್ಲಿ ಸೆ.7ರ ಶನಿವಾರ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದೇ ತಿಂಗಳ 5ರಂದು ಪೆರ್ನೆ ಸಮೀಪದ […]

Continue Reading

ಮಂಗಳೂರು ನಗರದಲ್ಲಿ ಜನರು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರ ಕುಸಿದಿದೆ: ಗ್ರೀನ್ ಪೀಸ್ ಇಂಡಿಯಾ ವರದಿ

ಮಾಲಿನ್ಯದ ಪ್ರಮಾಣ ಅಪಾಯಕಾರಿ; ವಾಯುಮಾಲಿನ್ಯ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಮಂಗಳೂರು ನಗರದಲ್ಲಿ ಜನರು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರ ಕುಸಿದಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಗ್ರೀನ್ ಪೀಸ್ ಸಂಶೋಧನಾ ವರದಿ ರವಾನಿಸಿದೆ. ಕರ್ನಾಟಕದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ನಾವು ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರ ಕುಸಿದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಕೂಡಲೇ ವಾಯುಮಾಲಿನ್ಯ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಆರೋಗ್ಯದ […]

Continue Reading

ಕಟ್ಟರ್ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಲೈಂಗಿಕ ದೌರ್ಜನ್ಯ ಪ್ರಕರಣ; ಸಂತ್ರಸ್ತೆ ಮಹಿಳೆಯಿಂದ ರಾಜ್ಯಮಾನವ ಹಕ್ಕುಗಳ ಆಯೋಗಕ್ಕೆ ದೂರು

ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಶಾಮೀಲಾಗಿ ನನಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಕಟ್ಟರ್ ಹಿಂದುತ್ವವಾದಿ, ಬಿಜೆಪಿ ಮುಖಂಡ ಅರುಣ್ ಕುಮಾರ್‌ ಪುತ್ತಿಲ ವಿರುದ್ಧ ಪುತ್ತೂರಿನ ಮಹಿಳೆಯೊಬ್ಬರು ನೀಡಿರುವ ಅತ್ಯಾಚಾರ ಪ್ರಕರಣದ ದೂರನ್ನು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಲ್ಲದೇ, ನನಗೆ ನ್ಯಾಯ ಕೊಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ಆರೋಪಿಸಿರುವ ಸಂತ್ರಸ್ತೆ ಮಹಿಳೆ ರಾಜ್ಯಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಂಬಿಕೆ ದ್ರೋಹ, ಕೊಲೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ […]

Continue Reading

ಶಿಕ್ಷಕನೊಬ್ಬನ ಮೊಬೈಲ್ ನಲ್ಲಿ 5,000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಹೆಚ್ಚು ನಗ್ನ ದೃಶ್ಯಗಳು ಪತ್ತೆ; FIR ರದ್ದತಿಗೆ ಹೈಕೋರ್ಟ್ ನಿರಾಕರಣೆ

ಶಾಲಾ ಶಿಕ್ಷಕನೊಬ್ಬನ ಮೊಬೈಲ್ ನಲ್ಲಿ ವಿದ್ಯಾರ್ಥಿನಿಯರ 5,000 ಹೆಚ್ಚು ನಗ್ನ ದೃಶ್ಯಗಳು ಪತ್ತೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ದಾಖಲಾದ ಎಫ್ ಐ ಆರ್ ರದ್ದತಿಗೆ ಹೈಕೋರ್ಟ್ ನಿರಾಕರಿಸಿದೆ.ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಚಿತ್ರಕಲಾ ಶಿಕ್ಷಕ ಬಾಲಕಿಯರು ಬಟ್ಟೆ ಬದಲಿಸುವ ಸಮಯದ 5,000ಕ್ಕೂ ಹೆಚ್ಚು ಫೋಟೋ ಹಾಗೂ ನೂರಾರು ವಿಡಿಯೋ ಸೆರೆಹಿಡಿದ ಆರೋಪವಿತ್ತು. ಪೋಕ್ಸೋ ಕಾಯ್ದೆಯಡಿಯಲ್ಲಿ ಚಿತ್ರಕಲಾ ಶಿಕ್ಷಕನೊಬ್ಬನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ […]

Continue Reading

ಶಿವಮೊಗ್ಗದ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಸ್ಥಗಿತ ಸಾಧ್ಯತೆ.!

ಶಿವಮೊಗ್ಗ ವಿಮಾನ ನಿಲ್ದಾಣದ ಲೈಸೆನ್ಸ್‌ ಅವಧಿ ಕೇವಲ ಒಂದು ತಿಂಗಳಿಗೆ ಮಾತ್ರ ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ನೀಡಿದ್ದ ಅನುಮತಿ ಇನ್ನು 20 ದಿನದಲ್ಲಿ ಮುಕ್ತಾಯಗೊಳ್ಳಲಿದೆ. ಒಂದು ವರ್ಷಕ್ಕೆ ವಿಸ್ತರಿಸಬೇಕಿದ್ದ DGCA ಈ ಬಾರಿ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಲೈಸೆನ್ಸ್‌ ವಿಸ್ತರಿಸಿದೆ. ಹೀಗಾಗಿ ವಿಮಾನ ಪ್ರಯಾಣಿಕರಿಗೆ ವಿಮಾನ ಹಾರಾಟ ನಡೆಸುತ್ತಾ ಅಥವಾ ಹಾರಾಟ ಸ್ಥಗಿತಗೊಳಿಸುತ್ತಾ ಎಂಬ ಪ್ರಶ್ನೆ ಎದ್ದಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ DGCA […]

Continue Reading

ಟಿ.ವಿ ವಾಲ್ಯೂಮ್ ವಿಚಾರದಲ್ಲಿ ಮಾತಿನ ಚಕಮಕಿ. ಆಕ್ರೋಶಗೊಂಡ ತಂದೆಯಿಂದ ಮಗನ ಮೇಲೆ ಕತ್ತಿಯಿಂದ ಹಲ್ಲೆ.

ಪುಣಚ ಗ್ರಾಮದ ಕೊಲ್ಲಪದವು ನಿವಾಸಿ ಬಾಬು ಕೆ.ಎಂಬವರ ಮಗ ಅಶೋಕ್ ಕೆ (33) ಅವರು ಈ ಕುರಿತು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಅಶೋಕ್ ಮತ್ತು ಆತನ ತಂದೆ ಮಧ್ಯೆ ಮನೆಯಲ್ಲಿ ಆಗಾಗ ಜಗಳವಾಗುತ್ತಿದ್ದು, ಸೆ.3ರಂದು ರಾತ್ರಿ ಅಶೋಕ್ ಮನೆಯಲ್ಲಿರುವಾಗ ತಂದೆ ಟಿವಿ ನೋಡುತ್ತಿದ್ದರು. ಟಿ.ವಿ ವಾಲ್ಯೂಮ್ ಕಡಿಮೆ ಮಾಡುವಂತೆ ಮಗ ಅಶೋಕ್ ಹೇಳಿದ್ದರಿಂದ ತಂದೆ ಆಕ್ರೋಶಗೊಂಡು ಶಬ್ದ ಕಡಿಮೆ ಮಾಡುವುದಿಲ್ಲ ಎಂದು ಹೇಳಿದ್ಜಲ್ಲದೇ “ನೀನು ಕೆಲಸಕ್ಕೂ ಹೋಗದೆ ಅಲ್ಲಿ ಇಲ್ಲಿ ಸುತ್ತಾಡಿ ನನ್ನ ಕುಟುಂಬದ ಮಾನ-ಮರ್ಯಾದೆ […]

Continue Reading

ಕರ್ನಾಟಕದ ಎಲ್ಲಾ ಜಾತಿ ನಿಗಮಗಳ ವಿಲೀನಕ್ಕೆ ಸರ್ಕಾರ ಚಿಂತನೆ.!

ಸರಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿವೆಯೇ ನಿಗಮ, ಮಂಡಳಿಗಳು.? ಆಡಳಿತದಲ್ಲಿ ಕೇಂದ್ರೀಕರಣವಿರಬಾರದು, ವಿಕೇಂದ್ರಿಕರಣವಿರಬೇಕು ಎಂಬ ಉದ್ದೇಶದಿಂದ ನಿಗಮ ಮಂಡಳಿಗಳನ್ನು ರಚಿಸಲಾಗಿದೆ. ಆದರೆ  ಈ ನಿಗಮ ಮಂಡಳಿಗಳೇ ಗಜಗಾತ್ರದಂತಾಗಿದ್ದು, ಇವುಗಳನ್ನು ಸಾಕುವುದೇ ಕಷ್ಟಕರ ಎಂಬ ಸ್ಥಿತಿ ಉದ್ಭವವಾಗಿದೆ. ಅಂದರೆ ಸದ್ಯ ನಿಗಮ, ಮಂಡಳಿಗಳ ಸಂಖ್ಯೆಯು ನೂರರ ಸನಿಹಕ್ಕೆ ಬಂದು ನಿಂತಿವೆ. ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರಲ್ಲದೆ, ಅಧಿಕಾರಿ, ಸಿಬಂದಿಯಿಂದ ತುಂಬಿ ತುಳುಕುವ ನಿಗಮ, ಮಂಡಳಿಗಳು ಆಡಳಿತಾತ್ಮಕ ಅನುಕೂಲಕ್ಕಿಂತ ಆಡಳಿತಾತ್ಮಕ ವೆಚ್ಚ ಹೆಚ್ಚಿಸುವ ಬಿಳಿಯಾನೆ ಎನಿಸಿಬಿಟ್ಟಿವೆ. ರಾಜ್ಯದಲ್ಲಿ ಜಾತಿ ನಿಗಮಗಳ ಸಂಖ್ಯೆ ಹೆಚ್ಚಾಗಿದ್ದು, ಇದು […]

Continue Reading

ಸ್ಥಿರಾಸ್ತಿ ಅಡಮಾನ ಸಾಲ ಪಡೆದು ಸುಸ್ತಿದಾರ, ಅದೇ ಸಂಸ್ಥೆಯಲ್ಲಿ ಅಡಮಾನವಿರಿಸಿದ ಬಂಗಾರದ ಸಾಲ ಸಂದಾಯ ಮಾಡಿದರೂ, ಅಡವಿರಿಸಿದ ಬಂಗಾರ ಹಿಂದೆ ಪಡೆಯಲು ಅರ್ಹನಲ್ಲ: ಗ್ರಾಹಕ ಆಯೋಗ

ಉಡುಪಿ: ಗ್ರಾಹಕ ಸ್ಥಿರಾಸ್ತಿ ಅಡಮಾನ ಸಾಲ ಪಡೆದು ಸುಸ್ತಿದಾರನಾದಾಗ, ಅದೇ ಸಂಸ್ಥೆಯಲ್ಲಿ ಅಡಮಾನವಿರಿಸಿದ ಬಂಗಾರದ ಸಾಲ ಸಂದಾಯ ಮಾಡಿದರೂ, ಅಡವಿರಿಸಿದ ಬಂಗಾರ ಹಿಂದೆ ಪಡೆಯಲು ಅರ್ಹನಲ್ಲ ಎಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ತರ ತೀರ್ಪು ನೀಡಿದೆ. ಉಡುಪಿಯ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿಯ ಶಾಖೆಯಲ್ಲಿ ಸಂಸ್ಥೆಯ ಗ್ರಾಹಕರೊಬ್ಬರು 25 ಲಕ್ಷ ರೂಪಾಯಿ ಆಸ್ತಿ ಸಾಲ ಪಡೆದಿದ್ದರು. ಈ ಸಾಲವು ಸುಸ್ತಿಯಾಗಿ, ಸಂಸ್ಥೆಯು ಸಾಲ ವಸೂಲಾತಿಗಾಗಿ ಕ್ರಮ ಕೈಗೊಂಡಿತ್ತು. ಈ ಬಗ್ಗೆ ಸಹಕಾರ […]

Continue Reading

ಒಂದು ಪಕ್ಷದಿಂದ ಗೆದ್ದು, ಮತ್ತೊಂದು ಪಕ್ಷಕ್ಕೆ ಜಿಗಿಯುವ ಶಾಸಕರು ಇನ್ನು ಮುಂದೆ ಪಿಂಚಣಿಯನ್ನು ಪಡೆಯುವುದಿಲ್ಲ.

ಹಿಮಾಚಲ ಪ್ರದೇಶದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ ಮಾದರಿ ಮಸೂದೆಯೊಂದನ್ನು ಅಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಜಿಗಿಯುವ ಶಾಸಕರು ಇನ್ನು ಮುಂದೆ ಪಿಂಚಣಿಯನ್ನು ಪಡೆಯುವುದಿಲ್ಲ. ಹೀಗಾಗಿ ಪಕ್ಷಗಳಿಗೆ ಪಕ್ಷಾಂತರ ಮಾಡುವ ಹಿಮಾಚಲ ಪ್ರದೇಶದ ಶಾಸಕರಿಗೆ ಪಿಂಚಣಿ ಸಿಗುವುದಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡ ಶಾಸಕರಿಗೆ ಇದು ಅನ್ವಯಿಸುತ್ತದೆ ಎಂದು ಹೊಸ ಕಾನೂನು ಹೇಳುತ್ತದೆ. ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿಗೆ ಹೋದವರು ಹಾಗೂ ಇನ್ನು ಮುಂದೆ ಹೋಗುವವರಿಗೆ ಪಾಠ ಕಲಿಸಲೆಂದೇ ಅಲ್ಲಿನ ಕಾಂಗ್ರೆಸ್‌ ಹೊಸ ಮಸೂದೆಯನ್ನು […]

Continue Reading

SSLC ನಕಲಿ ಅಂಕಪಟ್ಟಿ ಸಲ್ಲಿಸಿ, ರಾಜ್ಯದ ಆರೋಗ್ಯ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿದ ಸಾವಿರಾರು ಅಭ್ಯರ್ಥಿಗಳು

ನಕಲಿ ಅಂಕಪಟ್ಟಿ ಸಲ್ಲಿಸಿ ಸಾವಿರಾರು ಅಭ್ಯರ್ಥಿಗಳು ರಾಜ್ಯ ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರಿ ಗಿಟ್ಟಿಸಿಕೊಂಡಿರುವುದು ಇದೀಗ ಬಯಲಾಗಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಜಲಸಂಪನ್ಮೂಲ ಇಲಾಖೆಯ ಬ್ಯಾಕ್​ಲಾಗ್ ನೌಕರಿ ಗಿಟ್ಟಿಸಿದ ಪ್ರಕರಣ ಇನ್ನೂ ಜೀವಂತ ಇರುವಾಗಲೇ ಮತ್ತೊಂದು ಇಲಾಖೆಯಲ್ಲಿ ಇದೇ ರೀತಿ ನಕಲಿ ನಡೆದಿರುವುದು ಪ್ರತಿಭಾವಂತ ಮತ್ತು ಅರ್ಹ ವ್ಯಕ್ತಿಗಳಿಗೆ ಆಘಾತ ಉಂಟು ಮಾಡಿದೆ. ರಾಜ್ಯದಲ್ಲಿ ನಡೆದ ಪಿಎಸ್​ಐ, ಕೆಇಐ, ಕೆಪಿಟಿಸಿಎಲ್ ನೇಮಕ ಪರೀಕ್ಷಾ ಅಕ್ರಮಗಳಿಂದ ಪ್ರತಿಭಾವಂತರಿಗೆ ಪರೀಕ್ಷೆ ಮತ್ತು ನೇಮಕಾತಿ ಮೇಲಿನ ವಿಶ್ವಾಸಕ್ಕೆ ಬಲವಾದ ಪೆಟ್ಟು […]

Continue Reading