ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು, ಮಂಗಳೂರು ಮತ್ತು ಕಾಸರಗೋಡಿನ ನಾಲ್ವರು ಖದೀಮರ ಬಂಧನ.!

ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು, ಮಂಗಳೂರು ಮತ್ತು ಕಾಸರಗೋಡಿನ ನಾಲ್ವರು ಖದೀಮರ ಬಂಧನ.! ಐದು ಮೊಬೈಲ್,13ಲಕ್ಷ ನಗದು ವಶ.! ಉಪೇಂದ್ರ ಭಟ್ ಎಂಬವರಿಗೆ ವಾಟ್ಸಪ್ ಕಾಲ್ ಮಾಡಿ ನಕಲಿ ಕಂಪನಿಗೆ ಹಣ ಹಾಕಿಸಿದ್ದ ಕಿರಾತಕರು.! 33ಲಕ್ಷ ಹತ್ತು ಸಾವಿರ ಹಣ ನಕಲಿ ಕಂಪನಿಯ ಅಕೌಂಟ್ ಗೆ ಹಣ ಹೂಡಿದ್ದ ಉಪೇಂದ್ರ ಭಟ್.! ಉಡುಪಿ CEN ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ.! ಉಡುಪಿ ಎಸ್ಪಿ ಅರುಣ್ ಕುಮಾರ್, ಹೆಚ್ಚುವರಿ ಎಸ್ಪಿ […]

Continue Reading

ಯುವಕನ ಅಪಹರಿಸಿ ಮನೆಯೊಳಗೆ ಕೂಡಿಹಾಕಿ ಹಲ್ಲೆ; ಸಾಮಾಜಿಕ ತಾಣದಲ್ಲಿ ವೀಡಿಯೋ ವೈರಲ್.

ತಂಡವೊಂದು ಯುವಕನ ಅಪಹರಿಸಿ ಮನೆಯೊಳಗೆ ಕೂಡಿಹಾಕಿ ಮನಬಂದಂತೆ ಥಳಿಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ತಂಡದಿಂದ ಹಲ್ಲೆಗೊಳಗಾದ ಯುವಕ ಕಲ್ಲಡ್ಕ ಸಮೀಪದ ಬೋಳಂತೂರು ನಿವಾಸಿ ರಹೀಂ ಎಂದು ತಿಳಿದು ಬಂದಿದೆ. ಹುಡುಗಿ ವಿಚಾರದಲ್ಲಿ ರಹೀಂನನ್ನು ಅಪಹರಿಸಿದ ಯುವಕರು ಪುತ್ತೂರು ಹೊರವಲಯದ ಮನೆಯೊಂದರಲ್ಲಿ ಕೂಡಿಹಾಕಿ ಥಳಿಸುತ್ತಿರುವ ದೃಶ್ಯ ಬುಧವಾರ ಸಂಜೆಯಿಂದ ವೈರಲಾಗುತ್ತಿದ್ದು ಈ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Continue Reading

ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂ ಕದ ತಟ್ಟಿದ್ದ ಜಮೀಯತ್ ಉಲೇಮಾ ಎ ಹಿಂದ್, ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾ

ತನ್ನ ನಡೆಯನ್ನು ಸಮರ್ಥಿಸಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರಕಾರ ಕೇಂದ್ರ ಸರಕಾರ 2019 ರಲ್ಲಿ ಜಾರಿಗೆ ತಂದಿರುವ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ರಲ್ಲಿ ತ್ರಿವಳಿ ತಲಾಖ್ ಅನ್ನು ಗಂಭೀರ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಈ ಅಪರಾಧಕ್ಕೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಕಾಯ್ದೆಯನ್ನು ಕೇಂದ್ರ ಸರಕಾರ ಸಂಸತ್ತಿನಲ್ಲಿ ಅಂಗೀಕರಿಸಿತ್ತು. ಈ ಕಾಯ್ದೆಯ ವಿರುದ್ಧ ದೇಶದಾದ್ಯಂತ ಮುಸ್ಲಿಂ ಸಮುದಾಯ ಆಕ್ರೋಶವನ್ನು […]

Continue Reading

ಕೋಮುವಾದಿಗಳಿಗೆ ಸಿಂಹಸ್ವಪ್ನ, ಭ್ರಷ್ಟರ ‌ಭೇಟೆಯಾಡುತ್ತಿರುವ ADC; ನಿಯತ್ತಿನ ಅಪರ ಜಿಲ್ಲಾಧಿಕಾರಿ ಡಾ॥ ಜಿ. ಸಂತೋಷ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ॥ ಜಿ. ಸಂತೋಷ್ ಕುಮಾರ್ ನಿಯತ್ತಿನ, ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟರ ವಿರುದ್ಧ ಯಾರ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ದಿಟ್ಟ, ನೇರ ನಡೆ-ನುಡಿಯ ಅಧಿಕಾರಿ ADC ಸಂತೋಷ್ ಕುಮಾರ್. ಇತ್ತೀಚೆಗೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರ ಕಚೇರಿಯ FDA ಕೊಕ್ಕೆ ಮಹೇಶನನ್ನು ಎತ್ತಂಗಡಿ ಮಾಡುವಲ್ಲಿ ಸಫಲರಾಗಿದ್ದಾರೆ. ಕೊಕ್ಕೆ ಮಹೇಶನ ಬಗ್ಗೆ ಸಾರ್ವಜನಿಕರು ಬಹಳ ಕಿರಿಕಿರಿ ಅನುಭವಿಸುತ್ತಿದ್ದರು. ಮಾತ್ರವಲ್ಲದೆ ಈತ ಸಾರ್ವಜನಿಕರನ್ನು ಬಹಳ ಸತಾಯಿಸುತ್ತಿದ್ದ. […]

Continue Reading

151 ಹಾಲಿ ಸಂಸದರ, ಶಾಸಕರ ವಿರುದ್ಧ ಮಹಿಳಾ ನಿಂದನೆ ಪ್ರಕರಣ.

ಭಾರತೀಯ ಜನತಾ ಪಕ್ಷವು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣದಲ್ಲಿ ಪ್ರಥಮ ಸ್ಥಾನ ಪಡೆದಿದೆ ಭಾರತದ ಒಟ್ಟು ಜನಪ್ರತಿನಿಧಿಗಳ ಪೈಕಿ 151 ಹಾಲಿ ಸಂಸದರು, ಶಾಸಕರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 151 ಹಾಲಿ ಸಂಸದರು ಮತ್ತು ಶಾಸಕರು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಪಶ್ಚಿಮ ಬಂಗಾಳವು ಅಂತಹ ಪ್ರಕರಣಗಳನ್ನು ಎದುರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಹೊಂದಿದೆ ಎಂದು ಸಮೀಕ್ಷೆಯ ಇತ್ತೀಚಿನ ವರದಿ ತಿಳಿಸಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ […]

Continue Reading

ಮಸೂದ್ ಟ್ರಸ್ಟ್ ವತಿಯಿಂದ ಡಾ.ಯು.ಟಿ ಇಫ್ತಿಕಾರ್ ಅಲಿಯವರಿಗೆ ಸನ್ಮಾನ

ಮಸೂದ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ ಇಫ್ತಿಕಾರ್ ಅಲಿ ಅವರನ್ನು ಕುದ್ರೋಳಿಯಲ್ಲಿ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಸನ್ಮಾನ ನೆರವೇರಿಸಿ ಮಾತನಾಡಿದರು. ಸ್ವಂತ ಸಾಮರ್ಥ್ಯದಿಂದ ಇಫ್ತಿಕಾರ್ ಅಲಿ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಂಥ ಕ್ರಿಯಾಶೀಲ, ಸ್ಪೂರ್ತಿದಾಯಕ ಯುವಕರ ಅಗತ್ಯ ಸಮಾಜಕ್ಕೆ ಅತ್ಯಗತ್ಯ. ಆ ಮೂಲಕ ಸಮಾಜದ ಸೇವೆ ನಡೆಯಬೇಕು ಎಂದರು. ಡಾ. ಯು.ಟಿ ಇಫ್ತಿಕಾರ್ ಅಲಿ ಸನ್ಮಾನ ಸ್ವೀಕರಿಸಿ, ಮಸೂದ್ […]

Continue Reading

ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ ಬಸ್ ಮತ್ತು ಆಕ್ಟಿವಾ ಅಪಘಾತದಲ್ಲಿ ಗಾಯಗೊಂಡ ಮುಝಂಬಿಲ್ ಚಿಕಿತ್ಸೆ ಫಲಕಾರಿಯಾಗದೆ ನಿಧನ.

ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ ಆಗಸ್ಟ್ 12ರಂದು ನಡೆದಿದ್ದ ಬಸ್ ಮತ್ತು ಆಕ್ಟಿವಾ ನಡುವೆ ಅಪಘಾತದಲ್ಲಿ ಗಾಯಗೊಂಡು ಅಸ್ಪತ್ತೆಗೆ ದಾಖಲಾಗಿದ್ದ ಕಟ್ಟತ್ತಿಲ ನಿವಾಸಿ ಚಿಕಿತ್ಸೆ ಫಲಕಾರಿಯಾಗದೆ ನಿಧನ. ಮಂಗಳೂರಿಗೆ ಕಡೆ ಹೋಗುತ್ತಿದ್ದ ಮಹೇಶ್ ಖಾಸಗಿ ಬಸ್-ಆಕ್ಟಿವಾ ನಡುವೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಟ್ಟತ್ತಿಲ ನಿವಾಸಿ ಮುಝಾಂಬಿಲ್(30)ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಗಾಯಾಳು ಮುಝಾಂಬಿಲ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ನಿಧನರಾಗಿದ್ದಾರೆ.

Continue Reading

ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದುಪಡಿಸಿ, 79ಎ ಮತ್ತು 79ಬಿ ಮರು ಸ್ಥಾಪಿಸಲು ನಿರ್ಧರಿಸಿರುವೆ; ಸಿದ್ದರಾಮಯ್ಯ

ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದುಪಡಿಸಿ, ಕಾಯ್ದೆಯ ಉಪಬಂಧ 79ಎ ಮತ್ತು 79ಬಿ ಮರು ಸ್ಥಾಪಿಸಲು ನಿರ್ಧರಿಸಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.ವಿಧಾನಸೌಧ ಬ್ಯಾಂಕ್ವೆಟ್ ಹಾಲ್​ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳವಾರ ಏರ್ಪಡಿಸಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು 109ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ವಿುಕರ ಪರ ಹಿರಿಯ ಹೋರಾಟಗಾರ, ಮಾಜಿ ಸಚಿವ ಎಸ್.ಕೆ. ಕಾಂತ ಅವರಿಗೆ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ […]

Continue Reading

ರಾಜ್ಯದಾದ್ಯಂತ ಭಾರೀ ಸುದ್ಧಿಯಾದ ಕಾರ್ಕಳ ಪರಶುರಾಮ ಮೂರ್ತಿ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆ

ರಾಜ್ಯದಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಒಂದಿಲ್ಲೊಂದು ಸುದ್ದಿ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ. ಕಾರ್ಕಳ ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಫೈಟ್ ಗೆ ಕಾರಣವಾಗಿದ್ದ ಪರಶುರಾಮ ಥೀಮ್ ಪಾರ್ಕ್ ಹಲವು ಅಧಿಕಾರಿಗಳ ತಲೆದಂಡಕ್ಕೂ ಕಾರಣವಾಗಿತ್ತು. ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಮೂರ್ತಿ ವಿಚಾರದಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಕಂಚಿನ ಪ್ರತಿಮೆ ಬದಲು ಫೈಬರ್ ಮೂರ್ತಿ ಅಳವಡಿಸಿರುವುದಾಗಿ ಆರೋಪಗಳು ಕೇಳಿ ಬಂದಿತ್ತು. ರಾತ್ರೋರಾತ್ರಿ ಮೂರ್ತಿ ಕಾಣೆಯಾಗಿತ್ತು. ಈ ವಿವಾದವನ್ನು ಕಾಂಗ್ರೆಸ್ […]

Continue Reading

ಬಜರಂಗದಳದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಕೊಯ್ಯೂರು ಘಟಕದ ಪ್ರಮುಖ್ ಸಚಿನ್ ಕೊಯ್ಯೂರು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ಬಜರಂಗದಳದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿ ಸಚಿನ್‌ ಕೆಯ್ಯೂರು (27) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಸಚಿನ್ ಕೊಯ್ಯೂರು ಘಟಕದ ಸುರಕ್ಷಾ ಪ್ರಮುಖ್‌ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿಯಾಗಿರುವ ಕುಶಾಲಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾಗಿರುವ ಸಚಿನ್ ಕೆಯ್ಯೂರು ಗ್ರಾಮದ ಪಂಚಾಯತ್ ಸಮೀಪ ಗೇರು ಮರವೊಂದಕ್ಕೆ ಕೇಸರಿ ಶಾಲು ಬಿಗಿದು ನೇಣು ಹಾಕಿಕೊಂಡಿದ್ದಾರೆ. ಬಿಸಿಎ ಪದವಿ […]

Continue Reading