ಲವ್ ಫೈಲ್ಯೂರ್; ಆಳ್ವಾಸ್ ಕಾಲೇಜಿನ ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಇರಿದ ಪ್ರಿಯಕರ!

ಶಿಕ್ಷಣ ಕಾಶಿ ಎಂದೇ ಕರೆಯಿಸಿಕೊಂಡಿರುವ ಆಳ್ವಾಸ್ ಮೂಡಬಿದ್ರೆ ಕಾಲೇಜಿನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಇರಿದ ವಿಚಿತ್ರ ಘಟನೆ ನಡೆದಿದೆ. ಆರೋಪಿ ಪೊಲೀಸರ ಅತಿಥಿಯಾಗಿದ್ದು, ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ತುಮಕೂರು ಮೂಲದ ಮಂಜುನಾಥ್ ನಿಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ನಡುವೆ ಪ್ರೇಮಾಂಕುರವಾಗಿತ್ತು. ವಿದ್ಯಾರ್ಥಿನಿ ಕೂಡ ತುಮಕೂರು ಮೂಲದವಳಾಗಿದ್ದು ಪಿಯುಸಿವರೆಗೆ ಇವರಿಬ್ಬರು ಜೊತೆಯಾಗಿಯೇ ಆಳ್ವಾಸ್ ನಲ್ಲಿ ಕಲಿಯುತ್ತಿದ್ದರು. ಹುಡುಗ ಆ ನಂತರ ಕಾಲೇಜು ಬಿಟ್ಟಿದ್ದು, ಈಕೆ ವಿದ್ಯಾಬ್ಯಾಸ […]

Continue Reading

ಹೆಗ್ಗುಂಜಿ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಆನ್‌ಲೈನ್ ತರಬೇತಿ ಮತ್ತು ಕೌನ್ಸಿಲಿಂಗ್

ಉಡುಪಿ : ಐಐಟಿ ಮದ್ರಾಸ್ ಪ್ರವರ್ತಕ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ 20 ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತರಗತಿಗಳನ್ನು ನಡೆಸಿಕೊಡುವ ಯೋಜನೆ ಹೆಗ್ಗುಂಜಿ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ. ಈ ತರಗತಿಗಳು ಆನ್ಲೈನ್ ಲೈವ್ ಮೂಲಕ ನಡೆಯಲಿದ್ದು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಐಐಟಿ ಯಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಿದ್ದೇನೆ ಎಂದು ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಹೇಳಿದರು. ಅವರು ಆಗಸ್ಟ್ 15ರಂದು ಉಚ್ಚಿಲ ಮೊಗವೀರ ಭವನದಲ್ಲಿ […]

Continue Reading

ವಿಟ್ಲ-ಅಡ್ಯನಡ್ಕದ ಕುದ್ದುಪದವು ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಅಂಗಡಿ ಮಾಲಿಕನಿಂದ ಲೈಂಗಿಕ ದೌರ್ಜನ್ಯ; ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ-ಅಡ್ಯನಡ್ಕ ರಸ್ತೆಯ ಕುದ್ದುಪದವು ಜಂಕ್ಷನಲ್ಲಿರುವ ಎ.ಎಮ್.ಸ್ಟೋರ್ ಅಂಗಡಿ ಮಾಲಿಕ ಮಹಮ್ಮದ್ ಅಶ್ರಫ್(48) ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಸೋಮವಾರ ಬೆಳಗ್ಗೆ ಸಾಮಾನು ಖರೀದಿಸಲು ಅಂಗಡಿ ಬಂದ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿದ ಪೋಷಕರು ಆರೋಪಿಯ ವಿರುದ್ಧ ಠಾಣೆಗೆ ದೂರು ನೀಡಿದ್ದರು. ಸುದ್ದಿ ಹಬ್ಬುತ್ತಿದ್ದಂತೆ ಹಿಂದೂ ಸಂಘಟನೆಗಳ ಮುಖಂಡರು ಠಾಣೆಗೆ ಆಗಮಿಸಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಮಧ್ಯೆ ದೂರು ದಾಖಲಾಗುತ್ತಿದ್ದಂತೆ ಆರೋಪಿ ಮಹಮ್ಮದ್ ಅಶ್ರಫ್ […]

Continue Reading

ಬಸ್ ಡಿಕ್ಕಿ, ಆಕ್ಟಿವಾ ಸವಾರ ಗಂಭೀರ. ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಕಟ್ಟತ್ತಿಲ ಸೇತುವೆ ಬಳಿ ಅಪಘಾತ.

ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಸೇತುವೆ ಬಳಿ ಮಂಗಳೂರಿಗೆ ಸಂಚರಿಸುತ್ತಿದ್ದ ‘ಮಹೇಶ್’ ಹೆಸರಿನ ಖಾಸಗಿ ಬಸ್ಸಿಗೆ ಎದುರಿನಿಂದ ಬರುತ್ತಿದ್ದ ಆಕ್ಟಿವಾ ಸ್ಕೂಟರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸವಾರ ಕಟ್ಟತ್ತಿಲ ನಿವಾಸಿ. ಮುಝಾಂಬಿಲ್(30)ಅವರ ಕಾಲುಗಳು, ಮತ್ತೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ, ಪೆರುವಾಯಿ ಗಡಿಭಾಗದ ಸೇತುವೆ ಸವಾರರ ಪಾಲಿಗೆ ಮರಣದ ಸೇತುವೆ

ವಿಟ್ಲ: ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪೆರುವಾಯಿ ಗ್ರಾಮದಲ್ಲಿನ ಗಡಿಭಾಗದ ಸೇತುವೆ ವಾಹನ ಸವಾರರ ಪಾಲಿಗೆ ಮರಣದ ಸೇತುವೆಯಾಗಿದೆ. ಕರ್ನಾಟಕ-ಕೇರಳ ಗಡಿಭಾಗದ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರಡ್ಕ ಹೊಳೆಗೆ ಸುಮಾರು ಅರವತ್ತು ವರ್ಷಗಳ ಹಿಂದೆ ಸೇತುವೆ ನಿರ್ಮಿಸಿದ್ದರು. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ನೀರಿನಲ್ಲಿ ಸೇತುವೆ ಮುಳುಗಡೆಯಾಗಿ ಒಂದೆರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತಡೆಯಾಗುತ್ತಿದೆ. ನೀರಿನ ಪ್ರಮಾಣ ಕೆಳಗಿಳಿದ ಬಳಿಕ ವಾಹನಗಳ ಓಡಾಟ ಆರಂಭವಾಗುತ್ತಿದೆ. ಪೆರುವಾಯಿ-ಬೆರಿಪದವು ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ […]

Continue Reading

ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಹಂತಕ, ರೌಡಿ ಶೀಟರ್ ಕಡಪ್ಪರ ಸಮೀರ್ ಮರ್ಡರ್

ಉಳ್ಳಾಲವನ್ನು ಬೆಚ್ಚಿಬೀಳಿಸಿದ್ದ ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಕಡಪ್ಪರ ಸಮೀರ್ ಮೇಲೆ ದುಷ್ಕರ್ಮಿಗಳ ತಂಡವೊಂದು ಕೊಲೆಗೆ ನಡೆಸಿರುವ ಘಟನೆ ಕಲ್ಲಾಪು ಬಳಿ ಭಾನುವಾರ ರಾತ್ರಿ ನಡೆದಿದೆ. ತನ್ನ ತಾಯಿಯೊಂದಿಗೆ ಕಲ್ಲಾಪು ರೆಸ್ಟೋರೆಂಟ್ ಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಐದಾರು ಮಂದಿಯಿಂದ ತಂಡ ಹಲ್ಲೆಗೆ ಯತ್ನಿಸಿದ್ದು, ಅಪಾಯದ ಮುನ್ಸೂಚನೆ ದೊರಕಿ ಅಲ್ಲಿಂದ ಓಡಿ ಪರಾರಿಯಾಗಿದ್ದು ಬೆನ್ನತ್ತಿದ್ದ ದುಷ್ಕರ್ಮಿಗಳು ರೈಲ್ವೆ ಟ್ರ್ಯಾಕ್ ಬಳಿ ತಲ್ವಾರ್ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ. ಡರೋಡೆ ಕೇಸಿನಲ್ಲಿ […]

Continue Reading

ಪಾದಯಾತ್ರೆ ಫ್ಲಾಪ್ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ; ವಿಜಯೇಂದ್ರ ವಿರುದ್ಧ ಗುಡುಗು.. ರೆಸಾರ್ಟ್ ನಲ್ಲಿ ರಹಸ್ಯ ಮೀಟಿಂಗ್.!

ಬಿ.ಕೆ, ಡಿ.ಕೆ ಜೊತೆಯಾಗಿ ನಿಂತು ಕಾಂಗ್ರೆಸ್ ಒಗ್ಗಟ್ಟಿನ ಪ್ರದರ್ಶನ ತೋರಿಸುತ್ತಿದ್ದರೆ, ಇತ್ತ ಬಿಜೆಪಿ ಪಕ್ಷದಲ್ಲೇ ಬಂಡಾಯದ ಕಾವು ಏರುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುತ್ತಾ ಮುಡಾ ಹಗರಣ ಸುತ್ತುತ್ತಿದ್ದಂತೆ ಉತ್ಸುಕಗೊಂಡಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಉದ್ದೇಶದಿಂದ ಒಂಭತ್ತು ದಿನಗಳ ಕಾಲ ಮೈಸೂರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದರು. ಬಿಜೆಪಿ ನಾಯಕರು ಅಂದುಕೊಂಡಂತೆ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಾಣಲು ವಿಫಲವಾಯಿತು. ಬಿಜೆಪಿ ನಡೆಸಿದ ಪಾದಯಾತ್ರೆಯಲ್ಲಿ ಮಿತ್ರಪಕ್ಷವಾದ ಜೆಡಿಎಸ್-ಬಿಜೆಪಿ ನಡುವಿನ ಹುಳುಕುಗಳು ಬಹಿರಂಗಗೊಂಡವು. ಇತ್ತ ಬಿಜೆಪಿಯ ಕೆಲವು ನಾಯಕರು ಪಾದಯಾತ್ರೆಯ ಕಡೆ […]

Continue Reading

ಪೆರಂಪಳ್ಳಿಯ ರಾಬಿಯಾ-ಖಾಲಿದ್ ದಂಪತಿಯಿಂದ ಕಾನೂನು ಬಾಹಿರವಾಗಿ ಮೂಲ್ಕಿಯ ವಾಜಿದ್ ರಿಗೆ ಮಗು ಮಾರಾಟ.!

ಅಂಗನವಾಡಿ ಕಾರ್ಯಕರ್ತೆ ಸಮಯಪ್ರಜ್ಞೆ; ತಂದೆ-ತಾಯಿ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು ಕಾನೂನು ಬಾಹಿರ ಮತ್ತು ಅನಧಿಕೃತವಾಗಿ ಮಗುವೊಂದನ್ನು ಮಾರಾಟ ಮಾಡಿರುವುದು ಹಾಗೂ ದತ್ತು ಸ್ವೀಕಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಬಿಯಾ ಬಾನು, ಖಾಲಿದ್ ಸಯ್ಯದ್ ಹಾಗೂ ಮಗುವನ್ನು ಪಡೆದುಕೊಂಡ ವಾಜಿದ್ ವಿರುದ್ಧ ದೂರು ದಾಖಲಾಗಿದೆ. ಜು.19 ರಂದು ರಾಬಿಯಾ ಬಾನು ಮತ್ತು ಖಾಲಿದ್ ಸಯ್ಯದ್ ಅವರಿಗೆ ಹೆಣ್ಣು ಮಗು ಜನಿಸಿದ್ದು, ಆ ಮಗು ತಂದೆ-ತಾಯಿಯ ವಶದಲ್ಲಿ ಇಲ್ಲದೇ […]

Continue Reading

ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್‌ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್‌ ರವರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಮಮತಾ ಸಿಂಗ್ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಮೇರೆಗೆ ತನಿಖೆಗೆ ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಹಾಗೂ ಅದನ್ನು ರದ್ದುಪಡಿಸುವಂತೆ ಕೋರಿ ಅಲೋಕ್ ಕುಮಾರ್ ರವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಗರದ 39 ನೇ ಎಸಿಎಂಎಂ ಕೋರ್ಟ್‌ ಅರ್ಜಿದಾರರ ವಿರುದ್ಧ ನಡೆಸುತ್ತಿದ್ದ ವಿಚಾರಣಾ […]

Continue Reading

ಪಡುಬಿದ್ರಿ- ಕಾರ್ಕಳ ರಸ್ತೆಯ ಟೋಲ್ ಗೇಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಕರವೇ ಎಂಟ್ರಿ; ಕಾಲ್ಕಿತ್ತ ಗುದ್ದಲಿ ಪೂಜಾ ತಂಡ

ಹೆದ್ದಾರಿಯ ಇಕ್ಕೆಲಲ್ಲಿ ಕಲ್ಲುಗಳನಿಟ್ಟು, ಅರಸಿನ ಹುಡಿ, ಕುಂಕುಮ ಹರಡಿ, ಹೂ ಹಾಕಿ ಜನರನ್ನು ವಂಚಿಸುವ ನಾಟಕ ವರದಿ: ಅನುಷಾ ಉಡುಪಿ ಪಡುಬಿದ್ರಿ-ಕಾರ್ಕಳ ರಸ್ತೆ ಟೋಲ್ ಗೇಟ್ ಗುದ್ದಲಿಪೂಜೆ ನಡೆಸಲು ಬಂದ ತಂಡವನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆನ್ಸರ್ ಅಹಮದ್ ಅವರ ನೇತೃತ್ವದಲ್ಲಿ ಸಾರ್ವಜನಿಕರು ಸೇರಿ ಹಿಂದೆ ಕಳುಹಿಸಿದ ಘಟನೆ ಪಡುಬಿದ್ರಿಯ ಸುಜ್ಲಾನ್ ಕಂಪನಿಯ ಸಮೀಪ ನಡೆದಿದೆ. ಪಡುಬಿದ್ರಿ ಕಾರ್ಕಳದ ಸಂಪರ್ಕ ರಸ್ತೆ ಆದ ರಾಜ್ಯ ಹೆದ್ದಾರಿ 1 ರಲ್ಲಿ ಟೋಲ್ ಗೇಟ್ […]

Continue Reading