ವಿಟ್ಲ ಪೊಲೀಸರ ಯಶಸ್ವಿ ಕಾರ್ಯಾಚರಣೆ; 16 ಸಬ್ ಮರ್ಸಿಬಲ್ ಪಂಪು ಕದ್ದ ಕುಖ್ಯಾತ ಕಳ್ಳನ ಬಂಧನ.

ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಗುರ್ಮೆ ಗಣೇಶ್ ಗೌಡರ ಮನೆ ಸಮೀಪದ ಕಟ್ಟಡದಿಂದ ಜುಲೈ21ರ ತಡರಾತ್ರಿ ದುರಸ್ತಿಗಾಗಿ ತಂದಿರಿಸಿದ್ದ ಅಂದಾಜು 1,81,000/- ರೂ ಮೌಲ್ಯದ ಒಟ್ಟು 16 ಬೊರ್‌ವೆಲ್‌ ಪಂಪುಗಳನ್ನು ಯಾರೋ ಕಳ್ಳರು ವಾಹನದಲ್ಲಿ ಬಂದು ಕಳ್ಳತನ ನಡೆಸಿದ್ದರು. ಈ ಬಗ್ಗೆ ವಿಟ್ಲ ಠಾಣಾ ಅ.ಕ್ರ.119/2024 ಕಲಂ:303(2) ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು 14-08-2024 ರಂದು ಆರೋಪಿಯಾದ ಕಡಬ ತಾಲೂಕು […]

Continue Reading

ಮೂಡಬಿದಿರೆ: ಸಿಂಗಂ ಸಂದೇಶ್ ಅವರಿಗೆ ಮುಖ್ಯಮಂತ್ರಿ ಪದಕ ಗೌರವ

ಮೂಡಬಿದಿರೆಯ ಸಿಂಗಂ ಎಂದೇ ಪ್ರಖ್ಯಾತಿ ಪಡೆದಿರುವ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಕರ್ತವ್ಯ ನಿರ್ವಹಿಸಿದ ಕಡೆಗಳಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದು, ಡೇರಿಂಗ್ ಇಮೇಜಿನಿಂದ ಸಾರ್ವಜನಿಕ ವಲಯದಲ್ಲಿ ಅಪಾರ ಪ್ರಸಿದ್ಧಿ ಪಡೆದಿದ್ದಾರೆ. ಇವರ ಸೇವೆ ಗುರುತಿಸಿ ಕರ್ನಾಟಕ ಸರಕಾರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದು, ಈ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ರಾಜ್ಯದ ಸುಮಾರು 126 ಮಂದಿ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ […]

Continue Reading

ಬೆಂಗಳೂರಿನ ಕಲಾವಿಧರ ಸಂಘದ ನಾಗಸಾನ್ನಿಧ್ಯವಿಲ್ಲದ ಹಾಲ್ ನಲ್ಲಿ ನಾಗದರ್ಶನ ನೀಡಿದ್ದು ಕರಾವಳಿಯ ನಾಗಾರಾಧನೆಗೆ ಮಾಡಿದ ಅವಮಾನವಲ್ಲವೇ.?

ನಾಗಪಾತ್ರಿ ಮತ್ತು ಅದನ್ನು ಮಾಡಿಸಿದ ಜೋತಿಷಿ ಕ್ಷಮೆ ಕೇಳಬೇಕಲ್ಲವೇ.? ✍️. ನವೀನ್ ಸೂರಿಂಜೆ, ಪತ್ರಕರ್ತರು ‘ನೀವು ಯಾವ ಕೇಸ್ ?’ ಎಂದು ನಾನಿದ್ದ ಜೈಲಿನ ವಾರ್ಡ್ ನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರನ್ನು ಕೇಳಿದ್ದೆ, ಆತ ‘ನಾಗಪಾತ್ರಿ ರಾಬರಿ ಕೇಸ್’ ಎಂದಿದ್ದ !. ಇದೊಂದು ಅಪರೂಪದ ಕೇಸ್ ಎಂದುಕೊಂಡು ಆತನ ಎದುರು ಚಕ್ಕಳಮಕ್ಕಳ ಹಾಕಿ ದರೋಡೆ ಕತೆ ಕೇಳಲು ಕೂತಿದ್ದೆ. – ನವೀನ್ ಸೂರಿಂಜೆ ಕರಾವಳಿಯಲ್ಲಿ ಬೆರಳೆಣಿಕೆಯ ನಾಗಪಾತ್ರಿ ಬ್ರಾಹ್ಮಣ ಕುಟುಂಬಗಳಿವೆ. ಒಬ್ಬರು ನಾಗಪಾತ್ರಿಯಾದರೆ ಇನ್ನೊಬ್ಬರು ವೈದ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ಈಗ […]

Continue Reading

ಮಂಗಳೂರು ಕಮೀಷನರ್ ಆಗಿದ್ದ ಚಂದ್ರಶೇಖರ್​ ಎಂ. ಐಪಿಎಸ್ (ಎಡಿಜಿಪಿ, ಐಎಸ್​ಡಿ, ಬೆಂಗಳೂರು) ರವರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ

ಪೊಲೀಸ್​ ಇಲಾಖೆಯಲ್ಲಿ ಉತ್ತಮ ಸೇವೆಗೈದ ಪೊಲೀಸ್ ಅಧಿಕಾರಿಗಳಿಗೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರತಿವರ್ಷ ನೀಡಲಾಗುವ ವಿವಿಧ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ವರ್ಷ ಒಟ್ಟು 1,037 ಸೇವಾ ಪದಕವನ್ನು ಕೇಂದ್ರ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿಗೆ ಘೋಷಣೆ ಮಾಡಲಾಗಿದ್ದು, ಇದರಲ್ಲಿ 208 ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದರೆ.ಕರ್ನಾಟಕದ ರಾಜ್ಯದ 19 ಪೊಲೀಸ್‌ ಅಧಿಕಾರಿಗಳು ರಾಷ್ಟ್ರಪತಿಯವರು ಪ್ರದಾನ ಮಾಡುವ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಐಪಿಎಸ್​ […]

Continue Reading

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಅಂಗಡಿ ಮಾಲಿಕ ಬಂಧನ.

ವಿಟ್ಲ-ಅಡ್ಯನಡ್ಕ ರಸ್ತೆಯ ಕುದ್ದುಪದವು ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಅಂಗಡಿ ಮಾಲಿಕ ಮಹಮ್ಮದ್ ಅಶ್ರಫ್ ಎಂಬಾತನನ್ನು ವಿಟ್ಲ ಪೊಲೀಸರು ಕೇರಳದ ಆನೇಕಲ್ಲು ಸಮೀಪದ ಗುವೆದಪಡ್ಪು ಎಂಬಲ್ಲಿ ಬಂಧಿಸಿದ್ದಾರೆ. ಕುದ್ದುಪದವು ಜಂಕ್ಷನಲ್ಲಿನ ಎ.ಎಂ.ಸ್ಟೋರ್ ಮಾಲಿಕ ಅಂಗಡಿಗೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಂಗಡಿ ಮಾಲಿಕ ಅಶ್ರಫ್ ಪರಾರಿಯಾಗಿದ್ದ. ಘಟನೆ ನಡೆದು 48ಗಂಟೆಯಲ್ಲೇ ಆರೋಪಿ ಅಶ್ರಫ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ […]

Continue Reading

ಆಗಸ್ಟ್ 14 ; ಸ್ವಾತಂತ್ರ್ಯದ ಸಂರಕ್ಷಣೆಗಾಗಿ ಹಾಗೂ ಕಾರ್ಮಿಕ ಹಕ್ಕುಗಳ ಉಳಿವಿಗಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ

ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಈ ಸತ್ಯಾಗ್ರಹ ದೇಶದ ಸ್ವಾತಂತ್ರ್ಯ ,ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ, ಕಾರ್ಮಿಕ ವರ್ಗದ ಹಕ್ಕುಗಳ ಉಳಿವಿಗಾಗಿ ಹಾಗೂ ಕಾರ್ಪೊರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ಆಗಸ್ಟ್ 14 ರಂದು ಸಂಜೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಗರದ ಪುರಭವನದ ಮುಖ್ಯ ದ್ವಾರದ ಬಳಿಯಲ್ಲಿ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ನಡೆಸಲು CITU ದ.ಕ.ಜಿಲ್ಲಾ ಸಮಿತಿಯು ನಿರ್ಧರಿಸಿದ್ದು, CITU ಅಖಿಲ ಭಾರತ ತೀರ್ಮಾನದ ಮೇರೆಗೆ ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ […]

Continue Reading

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕೊಣಾಜೆ ಗ್ರಾಮದ ಯುವಕ ಮೃತ್ಯು

ಕೊಣಾಜೆ ಗ್ರಾಮದ ನಡುಪದವು ನಿವಾಸಿ ಉಮ್ಮರ್ ಅವರ ಪುತ್ರ ನೌಫಲ್( 25) ಅಬುಧಾಬಿಯಲ್ಲಿ ಎ.ಸಿ.ಮೆಕ್ಯಾನಿಕ್ ವೃತ್ತಿಯಲ್ಲಿದ್ದರು. ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಕ್ಕೆ ಬಿದ್ದ ನೌಫಲ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತರು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿಯವರ ಸಹೋದರನಾಗಿದ್ದು ಮೃತದೇಹವನ್ನು ಹುಟ್ಟೂರಿಗೆ ತರುವ ವ್ಯವಸ್ಥೆ ಮಾಡಿದ್ದಾರೆ.

Continue Reading

ಯುವ ವಕೀಲನ ಸಾವು ಅಪಘಾತದಿಂದ ಆದ ಸಾವಲ್ಲ; ಹಳೆಯ ಧ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚಿನಿಂದ ನಡೆಸಿದ ಪ್ಲಾನಿಂಗ್ ಮರ್ಡರ್

ಆ.8 ರಂದು ವಿಜಯಪುರದಲ್ಲಿ ನಡೆದಿದ್ದ ವಕೀಲನ ಸಾವು ಅಪಘಾತದಿಂದ ಆದ ಸಾವಲ್ಲ, ಹಳೆಯ ಧ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತ ಸಂಚಿನಿಂದ ನಡೆಸಿದ ಪ್ಲಾನಿಂಗ್ ಮರ್ಡರ್ ಎಂಬುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುತ್ತಾರೆ. ತಲೆ ಮರೆಸಿಕೊಂಡಿರುವ ಇತರರ ಬಂಧನಕ್ಕೆ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ. ವಿಜಯಪುರ ನಗರದಲ್ಲಿ ಆ.8 ರಂದು ಸಂಜೆ 5-30 ರ ಸುಮಾರಿಗೆ ನಡೆದಿದ್ದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿ ಸಿಲುಕಿ ಸುಮಾರು ಎರಡೂವರೆ ಕಿ.ಮೀ. ದೂರಕ್ಕೆ ಎಳೆದೊಯ್ದ ಘಟನೆಯಲ್ಲಿ ನಗರದ […]

Continue Reading

ಫಳ್ನೀರ್‌ ಶಾಖೆಯ ಬ್ಯಾಕೊಂದರ ಮುಖ್ಯಸ್ಥ ಹಾಗೂ ಸಹಾಯಕ ವ್ಯವಸ್ಥಾಪಕ ಸೇರಿಕೊಂಡು ಒಟ್ಟು 62.40 ಲಕ್ಷ ವಂಚಿಸಿದ್ದಾರೆ’ ಎಂದು ಆರೋಪಿಸಿ ದೂರು ದಾಖಲು

ಮಂಗಳೂರು ಫಳ್ನೀರ್‌ ಶಾಖೆಯ ಬ್ಯಾಕೊಂದರ ಮುಖ್ಯಸ್ಥ ಹಾಗೂ ಸಹಾಯಕ ವ್ಯವಸ್ಥಾಪಕ ಸೇರಿಕೊಂಡು ನನ್ನ ಸಾಲದ ಖಾತೆಯ ಓವರ್‌ ಡ್ರಾಫ್ಟ್‌ನಲ್ಲಿ 11 ವಹಿವಾಟುಗಳನ್ನು ಅಕ್ರಮವಾಗಿ ನಡೆಸಿ ಒಟ್ಟು ₹ 62.40 ಲಕ್ಷ ವಂಚಿಸಿದ್ದಾರೆ’ ಎಂದು ಆರೋಪಿಸಿ ಮೆ|ಜಾಝಾ ಇನ್ಫ್ರಾ ಸಂಸ್ಥೆಯ ಪಾಲುದಾರ ಮೊಹಮ್ಮದ್‌ ಸಫ್ವಾನ್‌ ಎಂಬವರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪ್ರಕರಣ ದಾಖಲಾಗಿದೆ. ನಾಲ್ಕು ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಅಡವಿಟ್ಟುಕೊಂಡ ‌ 70 ಲಕ್ಷದಷ್ಟಿರುವ ಸಾಲವನ್ನು 2023ರ ಜುಲೈ 31ರಂದು ಬ್ಯಾಂಕ್‌ ಮಂಜೂರು […]

Continue Reading

ಗಾಳಿಮನೆ ಅಮ್ನಾಯ: ಯಕ್ಷ ಸಂಸ್ಕೃತಿ ಬಳಗದ ಪ್ರಥಮ ವಾರ್ಷಿಕೋತ್ಸವ

ಮನೋರಂಜನೆ ಹೆಸರಿನಲ್ಲಿ ಯಕ್ಷಗಾನದ ವಿರೂಪ ಸಲ್ಲದು : ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ವರದಿ: ಅನುಷಾ ಉಡುಪಿ ಉಡುಪಿ : ಮನೋರಂಜನೆ ಹೆಸರಿನಲ್ಲಿ ಯಕ್ಷಗಾನದ ವಿರೂಪ ಸಲ್ಲದು. ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರದ ಸಾಂದರ್ಭಿಕತೆ, ಗಂಭೀರತೆಯನ್ನು ಅರಿತು ಕಲಾವಿದರು ಅಭಿನಯಿಸಬೇಕು ಎಂದು ಕರ್ನಾಟಕ ಯಕ್ಷಾಗನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಮೂಡಬಿದಿರೆಯ ಸಂಪಿಗೆ ಶ್ರೀ ದುರ್ಗಾ ಜ್ಯೋತಿಷ್ಯಾಲಯದಲ್ಲಿ ಗಾಳಿಮನೆ ಅಮ್ನಾಯ: ಯಕ್ಷ ಸಂಸ್ಕೃತಿ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ‘ಆಟ-ಕೂಟ-ನಾಟ್ಯ’ […]

Continue Reading