ಶಿಕ್ಷಕ – ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಶಕ್ತಿ;

“ಒಬ್ಬ ಶಿಕ್ಷಕ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸಬಹುದು ಅಥವಾ ಆತನ ಭವಿಷ್ಯವನ್ನು ಹಾಳುಮಾಡಬಹುದು. ಶಿಕ್ಷಕನ ಕೈಯಲ್ಲಿರುವುದು ಕೇವಲ ದಂಡನೆ ಅಲ್ಲ – ಅದು ಬದುಕನ್ನು ಕಟ್ಟುವ ಶಕ್ತಿ” ಇಸ್ಮಾಯಿಲ್ ಸುನಾಲ್, ವಕೀಲರು, ಬರಹಗಾರರು “ಶಿಕ್ಷಕರ ಭವಿಷ್ಯದ ಪ್ರಜೆಗಳ ಶಿಲ್ಪಿಗಳು” ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಅತೀ ಪ್ರಾಚೀನ. ಆದರೆ ಪ್ರತಿಯೊಬ್ಬ ಶಿಕ್ಷಕನು ಶಿಲ್ಪಿಗಳಂತೆ ಇರಲೇಬೇಕೆಂಬುದಿಲ್ಲ ಎಂಬುದನ್ನು ನಾನು ನನ್ನ ಜೀವನದ ಮೂಲಕವೇ ಅನುಭವಿಸಿದ್ದೇನೆ. ಶಿಕ್ಷಕನು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಮಿಸಬಹುದು, ಹಾಳುಮಾಡಬಹುದು ಎಂಬ ಮಾತು ನಿಜಕ್ಕೂ ನನ್ನ ಬದುಕಿನ ಕಹಿ-ಮಧುರ […]

Continue Reading

ತುರ್ತು ಚಿಕಿತ್ಸೆಗೆ ಮುಂಗಡ ಹಣ ಬೇಡಿಕೆ ಇಡುವಂತಿಲ್ಲ , ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು: ಆರೋಗ್ಯ ಇಲಾಖೆ

ಅಪಘಾತ ಸಂದರ್ಭದಲ್ಲಿ ಮುಂಗಡ ಹಣ ಪಾವತಿಸುವಂತೆ ಬೇಡಿಕೆಯಿಡದೆ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡುವ ಕಾನೂನುಬದ್ಧ ಬಾಧ್ಯತೆಯನ್ನು ರಾಜ್ಯ ಸರಕಾರ ಪುನರುಚ್ಚರಿಸಿದೆ. ವೈದ್ಯಕೀಯ ಸಂಸ್ಥೆ ಅಥವಾ ವೈದ್ಯರು ಚಿಕಿತ್ಸೆಗೂ ಮೊದಲು ಹಣದ ಬೇಡಿಕೆ ಇಡುವಂತಿಲ್ಲ. ವಿಳಂಬ ಮಾಡದೇ ಚಿಕಿತ್ಸೆ ನೀಡುವುದು ಕಡ್ಡಾಯವಾಗಿದೆ. ಉಲ್ಲಂಘನೆ ಮಾಡಿದಲ್ಲಿ ಒಂದು ಲಕ್ಷ ರೂಪಾಯಿ ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. 2025 ರ ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆ ಯೋಜನೆಯನ್ನು ಉಲ್ಲೇಖಿಸಿ ‘ರಸ್ತೆ ಅಪಘಾತದ […]

Continue Reading

ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸದ ಸಿಸಿ ಟಿವಿ; ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಸುಪ್ರೀಂ ಕೋರ್ಟ್

ಪೊಲೀಸ್ ಠಾಣೆಗಳಲ್ಲಿ ಕಸ್ಡಡಿ ಚಿತ್ರಹಿಂಸೆ ತಡೆಯಲು ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಗುರುವಾರ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿ ಕೊಂಡು ನೋಟಿಸ್ ನೀಡಿದೆ. ದೇಶಾದ್ಯಂತ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳ ಕೊರತೆಯ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ. 2025 ರ ಮೊದಲ ಎಂಟು ತಿಂಗಳಲ್ಲಿ ರಾಜಸ್ಥಾನದಲ್ಲಿ 11 ಜನರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳುವ […]

Continue Reading

ದರ್ಗಾ ತೆರವಿಗೆ ಹಿಂದೂ ಬಲಪಂಥೀಯ ಸಂಘಟನೆ ‘ಸೇವ್ ಇಂಡಿಯಾ’ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್

ದರ್ಗಾ ಕಾನೂನು ಬದ್ಧವೋ ಇಲ್ಲವೋ ಬೇರೆ ಮಾತು; ಆದರೆ ಒಂದು ನಿರ್ದಿಷ್ಟ ಧರ್ಮವನ್ನು ಗುರಿ ಮಾಡುವ ಹಿಂದಿನ ಉದ್ದೇಶವೇನು.? ಹೈಕೋರ್ಟ್ ಕಳವಳ ದೆಹಲಿಯ ಯಮುನಾ ನದಿ ತೀರದಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಕೋರಿ ‘ಸೇವ್ ಇಂಡಿಯಾ’ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿಯಲ್ಲಿ ಒಂದು ಮಜರ್ ಮತ್ತು ರೋಹ್ಟಕ್ ರಸ್ತೆ, ಸೀಲಾಂಪುರ ಮತ್ತು ಬುರಾರಿಯ ಮೂರು ದರ್ಗಾಗಳು ಸೇರಿವೆ. ಈ ಎನ್‌ಜಿಒ ಹಿಂದೂ ಬಲಪಂಥೀಯ ಗುಂಪುಗಳೊಂದಿಗೆ ಸಂಬಂಧ ಹೊಂದಿದೆ. ಸಂಘಟನೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ ಮುಖ್ಯ […]

Continue Reading

ಮಗು ಮಾರಾಟ ಜಾಲ ಪತ್ತೆ; ಬಂಟ್ವಾಳದ ವೈದ್ಯ, ದುರ್ಗಾವಾಹಿನಿ ಮುಖಂಡೆ ಖಾಕಿ ಬಲೆಗೆ

ಹಿಂದೂ ಮುಖಂಡೆಯ ಪಿಜಿಯಲ್ಲಿ ವಾಸವಿದ್ದ ಯುವತಿ ಅಕ್ರಮ ಗರ್ಭ ಧರಿಸಿದ್ದ ಗಂಡು ಮಗುವನ್ನೇ 4.5 ಲಕ್ಷ ರೂಪಾಯಿಗೆ ಮಾರಾಟಕ್ಕಿಟ್ಟಿದ್ದರು.! ಮಂಗಳೂರಿನಲ್ಲಿ ಶಿಶು ಮಾರಾಟ ಜಾಲ ಈ ಹಿಂದಿನಿಂದಲೂ ಸುದ್ಧಿಯಲ್ಲಿದ್ದ ವಿಷಯವಾಗಿತ್ತು ‌ಸರಕಾರಿ ಆಸ್ಪತ್ರೆಯೊಂದು ಶಿಶು ಮಾರಾಟ ಜಾಲಕ್ಕೆ ಕುಖ್ಯಾತಿ ಪಡೆದಿತ್ತು. ಆದರೆ ಈ ಬಾರಿ ಕಂಕನಾಡಿ ಸಮೀಪದ ಖಾಸಗಿ ಆಸ್ಪತ್ರೆಯೊಂದು ಮಗುವಿನ ಮಾರಾಟ ಜಾಲದಲ್ಲಿ ಕೈಯಾಡಿಸಿರುವ ವಿಷಯ ಹೊರಬಂದಿದೆ. ಮಗು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕಾಪುವಿನ ಶಿರ್ವ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳದ ವೈದ್ಯ […]

Continue Reading

ಬ್ರ್ಯಾಂಡ್ ಮಂಗಳೂರಿಗೆ ಕಪ್ಪು ಚುಕ್ಕೆ ಇಟ್ಟ ಏರ್ಪೋರ್ಟ್ ಕಳ್ಳರು.!

ಖಾಸಗಿ ತೆಕ್ಕೆಗೆ ಬಂದ ನಂತರ ಇಲ್ಲಿ ನಡೆಯುತ್ತೆ ಕರಾಳ ಕೃತ್ಯ; ಈ ಹಿಂದೆಯೂ ನಡೆದಿತ್ತು ಕಳ್ಳರ ಕೈಚಳಕ.! ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜಪೆ) ಮಂಗಳೂರಿನ ಹಿರಿಮೆಗೊಂದು ಗರಿ. ಆದರೆ ಇತ್ತೀಚಿನ ದಿನಗಳಲ್ಲಿ ಏರ್ಪೋರ್ಟ್ ಸಿಬ್ಬಂದಿಗಳ ರಾದ್ಧಾಂತ, ಅನಪೇಕ್ಷಿತ ಘಟನೆಗಳು ಬ್ರ್ಯಾಂಡ್ ಮಂಗಳೂರು ಕನಸಿಗೆ ಕಪ್ಪು ಚುಕ್ಕೆ ಇಟ್ಟಿದೆ. ಅದರಲ್ಲೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ ಬಂದ ನಂತರವಂತೂ ಇಲ್ಲಿ ಕೆಲವೊಂದು ಕರಾಳ ಕೃತ್ಯಗಳು ಸದ್ದಿಲ್ಲದೆ ನಡೆಯುತ್ತಿರುವುದಂತೂ ಸತ್ಯ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ […]

Continue Reading

ಹದಿನೇಳರಯದ ಪೋರ, ಎರಡು ಮಕ್ಕಳ ತಾಯಿಯ ಕುಚ್ ಕುಚ್. ಲೈಂಗಿಕ ತೃಷೆಗಾಗಿ ವಿಧ್ಯಾರ್ಥಿಯನ್ನು ಅಪಹರಿಸಿದ್ದ ಮಹಿಳೆ ಅಂದರ್.!

ಅಪ್ರಾಪ್ತ ಯುವತಿಯನ್ನು ಅಪಹರಿಸಿ ಲೈಂಗಿಕ ತೃಷೆಗೆ ಬಳಸಿಕೊಳ್ಳುವ ಅನೇಕ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಾಕೆ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು 17 ರ ಹರೆಯದ ಕಾಲೇಜು ವಿದ್ಯಾರ್ಥಿಯೊಂದಿಗೆ ಪರಾರಿಯಾಗಿ ಸಿಕ್ಕಿಬಿದ್ದ ಘಟನೆ ದೇವರ ನಾಡು ಕೇರಳದಲ್ಲಿ ನಡೆದಿದೆ. ಕೇರಳದ ಆಲಪ್ಪುಝಾ ಚೇರ್ತಾಳದ 27 ರ ಹರೆಯದ ಮಹಿಳೆ ಸನೂಷ ತನ್ನ ಎರಡು ಮಕ್ಕಳೊಂದಿಗೆ 17 ರ ಬಾಲಕನೊಂದಿಗೆ ಪರಾರಿಯಾಗಿದ್ದಳು. ಈ ಸಂಬಂಧ ಬಾಲಕನ ಪೋಷಕರು ಆಲಪ್ಪುಝಾ ಠಾಣೆಯಲ್ಲಿ ಮಹಿಳೆಯ ವಿರುದ್ಧ ಅಪಹರಣ ಕೇಸ್ ದಾಖಲಿಸಿದ್ದರು. ಮಹಿಳೆ, ಬಾಲಕ […]

Continue Reading

ಬೀಡಿ ಕಾರ್ಮಿಕರು ಕನಿಷ್ಟ ವೇತನ ಪಡೆಯಲು ಪ್ರಬಲ‌ ಹೋರಾಟಕ್ಕೆ ಮುಂದಾಗಬೇಕು: ಜೆ. ಬಾಲಕೃಷ್ದ ಶೆಟ್ಟಿ

2018ರಿಂದ ಬೀಡಿ ಕಾರ್ಮಿಕರಿಗೆ ಬಾಕಿ ಇರಿಸಿಕೊಂಡಿರುವ ತುಟ್ಟಿಭತ್ತೆಯ ಭಾಗವಾಗಿ ಪ್ರತೀ ಸಾವಿರ ಬೀಡಿಗೆ ರೂ 7 ರಂತೆ ಕೊಡುವುದಾಗಿ ಒಪ್ಪಿಕೊಂಡಿರುವ ಬೀಡಿ ಮಾಲಕರು ಈ ಪಾವತಿಯನ್ನು ವಿಳಂಬಿಸುತ್ತಿದ್ದಾರೆ.ಕಳೆದ ಎಪ್ರಿಲ್ ನಲ್ಲಿ ಪಾವತಿಸುವುದಾಗಿ ಭರವಸೆ ನೀಡಿದ ಮಾಲಕರು ಸಪ್ಟೆಂಬರ್ ಆದರೂ ಇನ್ನೂ ಪಾವತಿ ಮಾಡಿರುವುದಿಲ್ಲ.ಮಾತ್ರವಲ್ಲ 2024ರ ಕನಿಷ್ಠ ಕೂಲಿಯನ್ನೂ ನೀಡಿರುವುದಿಲ್ಲ. ಈ ಬಗ್ಗೆ ಕಾರ್ಮಿಕ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನ ಆಗಲಿಲ್ಲ.ಅದ್ದರಿಂದ ಅಕ್ಟೋಬರ್ 7ರಿಂದ ಬೀಡಿ ಕಂಪೆನಿಗಳ ಮುಂದೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದೆಂದು ದ.ಕ.ಜಿಲ್ಲಾ ಬೀಡಿ ಕಾರ್ಮಿಕರ […]

Continue Reading

ಮಂಗಳೂರು: ವಿಮಾನ ಪ್ರಯಾಣಿಕರ ಬ್ಯಾಗೇಜ್ ನಿಂದ ಚಿನ್ನಾಭರಣ ಕಳವು ಪ್ರಕರಣ: ಕಳವು ಮಾಡಿದ ಬ್ಯಾಗೇಜ್ ನೌಕರರ ಬಂಧನ, ಚಿನ್ನಾಭರಣ ಸಹಿತ ನಗದು ವಶ.

ಬಜಪೆ ಏರ್ ಪೋರ್ಟ್ ಬ್ಯಾಗೇಜ್ ಸಿಬ್ಬಂದಿಗಳೇ ದರೋಡೆಕೋರರು.! ಪ್ರಯಾಣಿಕರ ಬ್ಯಾಗ್ ನಿಂದಲೇ ಚಿನ್ನ ಲಪಟಾಯಿಸುವ ಕರಾಳ ಜಾಲ ಬೆಳಕಿಗೆ.! ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು 30-08-2025 ರಂದು ಬೆಳಿಗ್ಗೆ ಬೆಂಗಳೂರಿನಿಂದ AIR INDIA EXPRESS ವಿಮಾನದಲ್ಲಿ ಪ್ರಯಾಣ ಮಾಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ನಿಲ್ದಾಣದ ಬ್ಯಾಗೆಜ್ ಬೇಲ್ಟ್ ನಿಂದ ತಮ್ಮ ಲಗೇಜ್ ನ್ನು ಪಡೆದು ಚೆಕ್ ಮಾಡಿದಾಗ 56 ಗ್ರಾಂ ತೂಕದ ಚಿನ್ನಾಭರಣ (ಮೌಲ್ಯ 4,50,000/-) ಕಳವು ಆಗಿದ್ದು, ಈ ಬಗ್ಗೆ […]

Continue Reading

ಮಾದಕ ವಸ್ತು ಸಾಗಾಟ, ಮಾರಾಟ ಪ್ರಕರಣದಲ್ಲಿ ಹೊರ ರಾಜ್ಯದ ಇಬ್ಬರು ಆರೋಪಿಗಳ ಬಂಧನ

ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿ, ಮಾದಕ ವಸ್ತುಗಳನ್ನು ಮತ್ತು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು ಗ್ರಾಮದ, ತೋಕೂರು ರೈಲ್ವೇ ಸ್ಟೇಶನ್ ಬಳಿ ಸಾರ್ವಜನಿಕರು ಓಡಾಡುವ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಐ ರವರಿಗೆ ಬಂದ ಖಚಿತ ಮಾಹಿತಿಯಂತೆ ಮಂಗಳೂರು ನಗರ ಉತ್ತರ ಉಪ […]

Continue Reading