ಮಂಗಳೂರು: ನ್ಯಾಯವಾದಿ ಜೀಶನ್ ಅಲಿಗೆ ಜೀವ ಬೆದರಿಕೆ, ಹಲ್ಲೆಗೆ ಯತ್ನ; ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕರಾವಳಿ

ಈ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರು ಅಡ್ಡ ಗಟ್ಟಿ, ತಲವಾರು ಝಳಪಿಸಿ, ಹಲ್ಲೆಗೆ ಯತ್ನಿಸಿದ್ದ ಆರೋಪಿ ರಿಯಾಜ್

ಮಂಗಳೂರು: ತನ್ನ ಕಕ್ಷಿದಾರೆಯ ಗಂಡನಾದ ಆರೋಪಿ ರಿಯಾಜ್ ಅವರು ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ಕುರಿತು ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ನ್ಯಾಯವಾದಿ ಜೀಶನ್ ಅಲಿ ಅವರನ್ನು ಕಕ್ಷಿದಾರೆ ಭೇಟಿ ಮಾಡಿ ಚರ್ಚಿಸಿದ್ದರು.

ಈ ಹಿನ್ನೆಲೆಯಲ್ಲಿ, ದಿನಾಂಕ 11-05-2026 ರಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ, ನ್ಯಾಯವಾದಿ ಜೀಶನ್ ಅಲಿ ಅವರು ತಮ್ಮ ವೃತ್ತಿ ಕಾರ್ಯ ಮುಗಿಸಿ ಅತ್ತಾವರ ಪ್ರದೇಶದ ಮೂಲಕ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಆರೋಪಿ ರೌಡಿ ರಿಯಾಜ್ ಎಂಬಾತ ನ್ಯಾಯವಾದಿ ಜೀಶನ್ ಅಲಿಯವರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದುನಿಂದಿಸಿದ್ದಲ್ಲದೆ, ಆರೋಪಿ ತನ್ನ ದ್ವಿಚಕ್ರ ವಾಹನದಲ್ಲಿ ತಂದಿದ್ದ ಹರಿತವಾದ ಆಯುಧಗಳನ್ನು ಬಳಸಿ, ನ್ಯಾಯವಾದಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆರೋಪಿ ರೌಡಿ ಶೀಟರ್ ಆಗಿದ್ದು, ಈ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರಿಗೆ ಅಡ್ಡ ಗಟ್ಟಿ, ತಲವಾರು ಝಳಪಿಸಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರರಕಣ ದಾಖಲಗಿರುತ್ತದೆ

ಘಟನೆ ವೇಳೆ ಅಲ್ಲಿದ್ದ ಸಾರ್ವಜನಿಕರು ತಕ್ಷಣ ಮಧ್ಯಪ್ರವೇಶಿಸಿ ತಡೆದ ಪರಿಣಾಮ, ಸಂಭವಿಸಬಹುದಾದ ಭಾರೀ ಅನಾಹುತದಿಂದ ನ್ಯಾಯವಾದಿ ಜೀಶನ್ ಅಲಿ ಅವರು ಪಾರಾಗಿದ್ದಾರೆ.

ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯಿದೆಯ ವಿವಿಧ ಕಲಂ ಗಳ ಹಾಗೂ ಕರ್ನಾಟಕ ವಕೀಲರ ರಕ್ಷಣಾ ಕಾಯಿದೆ 2023ರ ಅಡಿಯಲ್ಲಿ ಅಕ್ರಮ ಸಂಖ್ಯೆ: 87/2026 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.