ಗುರುಪುರ ಕೈಕಂಬ: ದುವಾಃ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ; ಸಮಾಜ, ಸಮುದಾಯಕ್ಕೊಂದು ಉತ್ತಮ ಸಂದೇಶ

ಮರ್ಹೂಮ್ ಕೆ. ಹಾಜಿ ಉಮ್ಮರಬ್ಬ ಕೈಕಂಬ (ಅಮ್ಮುಂಜೆ) ಇವರ ಧರ್ಮಪತ್ನಿ ಮರಿಯಮ್ಮ ಇತ್ತೀಚೆಗಷ್ಟೇ ಅಗಲಿದ್ದರು. ಮರ್ಹೂಮ್ ಮರಿಯಮ್ಮ ರ 40 ನೇ ದಿನದ ದುವಾಃ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಹಾಗೂ ಸಮುದಾಯಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಮತ್ತು ಶ್ರೀನಿವಾಸ ಆಸ್ಪತ್ರೆ ರಕ್ತನಿಧಿ ಮುಕ್ಕ ಸುರತ್ಕಲ್ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಇಕ್ಬಾಲ್ ಚಿಕನ್ ಸೆಂಟರ್ ರವರ ರಿಫಾಯಿನಗರ ಕೈಕಂಬದಲ್ಲಿರುವ ಮನೆಯಲ್ಲಿ ದುವಾಃ ಕಾರ್ಯಕ್ರಮದೊಂದಿಗೆ […]

Continue Reading

ಬಿ.ಸಿ.ರೋಡ್ ಪದ್ಮ ಕಾಂಪ್ಲೆಕ್ಸ್ ಅಡಿಭಾಗದಲ್ಲಿ ಮಟ್ಕಾ ದಂಧೆ. ಬಂಟ್ವಾಳ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ದಾಳಿ

ಬಂಟ್ವಾಳ ತಾಲೂಕು ಬಿ ಮೂಡ ಗ್ರಾ,ಮದ ಪದ್ಮಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ, ಅಕ್ರಮವಾಗಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದಾಗ, ವಿಜಯ್ ಪ್ರಸಾದ್ DYSP ಬಂಟ್ವಾಳ ಉಪ-ವಿಭಾಗ ಬಂಟ್ವಾಳರವರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ. ಮಟ್ಕಾ ವ್ಯವಹಾರ ನಡೆಸುತ್ತಿದ್ದ ಸಜೀತ್ .ಕೆ ಪಾವೂರು, ಮಂಜೇಶ್ವರ, ವಿಶಾಲ್ ಸಿ.ಉಚ್ಚಿಲ್, ಕೆಪಿತಾನಿಯೋ ಶಾಲಾ ಬಳಿ, ಮಂಗಳೂರು. ಸುನೀಲ್ ಕುಮಾರ್, ಮಹಾಲಿಂಗೇಶ್ವರ ಹತ್ತಿರ, ಬಡ್ಡಹಿತ್ತಲು, ಮಂಜೇಶ್ವರ, ಕೇರಳ ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ ವಿವಿಧ ಮುಖ ಬೆಲೆಯ ನೋಟುಗಳನ್ನು, ಕ್ಯಾಲ್ಕುಲೇಟರ್, ಪೆನ್ನುಗಳು, ಪುಸ್ತಕಗಳು, […]

Continue Reading

ಸಮೀರ್ ಹತ್ಯೆಯ ಹಿಂದೆ ಪ್ರಭಾವಿ ರೌಡಿಯ ಕರಾಳ ಹಸ್ತ.? ಮತ್ತೆ ಬುಸುಗುಟ್ಟಿದ ಮುಸ್ಲಿಂ ಅಂಡರ್ ವರ್ಲ್ಡ್.!

ಸಮೀರ್ ಹತ್ಯೆಯ ಹಿಂದೆ ಪೊಳಲಿ ಅನಂತು ಹತ್ಯೆ, ಟಾರ್ಗೆಟ್ ಇಲ್ಯಾಸ್ ಹತ್ಯಾ ಆರೋಪಿಯ ಪಾತ್ರ.! ತನಿಖಾಧಿಕಾರಿಯ ವೈಪಲ್ಯ.! ಮಂಗಳೂರಿನಲ್ಲಿ ತಣ್ಣನೆ ಮಲಗಿದ್ದ ಮುಸ್ಲಿಂ ಅಂಡರ್ ವರ್ಲ್ಡ್ ಮತ್ತೆ ಬುಸುಗುಟ್ಟಿದೆ. ಮುಸ್ಲಿಂ ಗ್ಯಾಂಗ್ ನ ಬಲಾಬಲದ ಮಧ್ಯೆ ಉಳ್ಳಾಲದಲ್ಲಿ ನೆತ್ತರ ಕಾಳಗ ನಡೆದಿದೆ. ಪತ್ನಿ, ಮಕ್ಕಳು, ತಾಯಿಯ ಎದುರಲ್ಲೇ ರೌಡಿ ಶೀಟರ್ ಸಮೀರ್ ಕಡಪ್ಪರ ಮರ್ಡರ್ ನಡೆದಿದೆ. ಈ ಹಿಂದೆ ಬಲಾಡ್ಯ ರೌಡಿಗಳ ತಂಡವೇ ಮಂಗಳೂರನ್ನು ಅಳುತ್ತಿತ್ತು. ರೌಡಿಸಂ ಫೀಲ್ಡಿನಲ್ಲಿ ಗುರುತಿಸಿಕೊಂಡವರು ವಿರೋಧಿ ಪಾಳೆಯದವನ ಹತ್ಯೆಗೆ ಬಂದರೆ ಆತ […]

Continue Reading

ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಶಾಸಕ ಪೂಂಜಾ ವಿರುದ್ದ ಪ್ರಕರಣ ದಾಖಲಿಸಬೇಕು: ಶೇಖರ್ ಎಲ್

ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡಿದ ಪೂಂಜಾ ಬೆಳ್ತಂಗಡಿ ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಸಭಾಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಭಾಷಣ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವಂತಿತ್ತು. ಅವರ ಮೇಲೆ ದೇಶದ್ರೋಹಿ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಪುತ್ತೂರು ಉಪ ವಿಭಾಗದ ಜೀತ ಪದ್ಧತಿ ನಿರ್ಮೂಲನ ಸಮಿತಿ ಸದಸ್ಯ ಶೇಖರ್ ಎಲ್ ಒತ್ತಾಯಿಸಿದ್ದಾರೆ. ಶಾಲಾ […]

Continue Reading

ಹದಗೆಟ್ಟ ರಸ್ತೆಯಲ್ಲಿ ಏಕಾಂಗಿಯಾಗಿ ಶ್ರಮದಾನ ಮಾಡಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೊತ್ಸವ ಆಚರಿಸಿದ ವಿಟ್ಲದ ಬಸ್ ಚಾಲಕ ಶಿವಣ್ಣ

ಶಿವಣ್ಣನ ಸೇವಾ ಕಾರ್ಯಕ್ಕೆ ಜನರ ಶಹಬ್ಬಾಸ್. ಜನಪ್ರತಿನಿಧಿಗಳ, ಅಧಿಕಾರಿಗಳ ಅಸಡ್ಡೆಯಿಂದಾಗಿ ಹೊಂಡ-ಗುಂಡಿಗಳಿಂದ ತುಂಬಿರುವ ಸಾಲೆತ್ತೂರು-ಮುಡಿಪು ರಸ್ತೆಯಲ್ಲಿ ಖಾಸಗಿ ಬಸ್ ಚಾಲಕರೊಬ್ಬರು ಏಕಾಂಗಿಯಾಗಿ ತೇಪೆ ಕಾರ್ಯ ನಡೆಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ವಿಟ್ಲ -ಸಾಲೆತ್ತೂರು-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಅದ್ದಾದಿಯಾ ಹೆಸರಿನ ಖಾಸಗಿ ಬಸ್ ಚಾಲಕ ಶಿವಣ್ಣ ಎಂಬವರು ಏಕಾಂಗಿಯಾಗಿ ಶ್ರಮದಾನ ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಾಹನ ಸಂಚಾರ ಬಿಡಿ.. ಕನಿಷ್ಠ ನಡೆದಾಡಲೂ ಅಸಾಧ್ಯವಾದ ಈ ರಸ್ತೆ ದುಸ್ಥಿತಿ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಈವರೆಗೆ ಸ್ಪಂದಿಸಿಲ್ಲ. […]

Continue Reading

ಮಂಗಳೂರು ಸಿಸಿಬಿ ಘಟಕದ ಶರಣಪ್ಪ, ಮೋಹನ್, ನಾಗರಾಜ ರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಗೌರವ

ಮಂಗಳೂರಿನ ಕ್ರೈಂ ಚಟುವಟಿಕೆ ಹತ್ತಿಕ್ಕುವಲ್ಲಿ ಸಿಸಿಬಿ ಘಟಕದ ಪಾತ್ರ ಮಹತ್ವದ್ದು. ಹಲವಾರು ಅಪರಾಧ ಚಟುವಟಿಕೆಗಳನ್ನು ಭೇಧಿಸಿದ ಗರಿಮೆ ಸಿಸಿಬಿಯದ್ದು. ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿ, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಮೋಹನ್ ಕೆ.ವಿ ಮತ್ತು ಹೆಡ್ ಕಾನ್ಸ್ ಟೇಬಲ್ ಆದ ನಾಗರಾಜ ಚಂದರಗಿ ರವರು 2023 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ್ದ ಅತ್ಯುತ್ತಮ ಸೇವೆಗಾಗಿ ಇವರನ್ನು ಗುರುತಿಸಿ, ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Continue Reading

ವಿಟ್ಲ ಪೊಲೀಸರ ಯಶಸ್ವಿ ಕಾರ್ಯಾಚರಣೆ; 16 ಸಬ್ ಮರ್ಸಿಬಲ್ ಪಂಪು ಕದ್ದ ಕುಖ್ಯಾತ ಕಳ್ಳನ ಬಂಧನ.

ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಗುರ್ಮೆ ಗಣೇಶ್ ಗೌಡರ ಮನೆ ಸಮೀಪದ ಕಟ್ಟಡದಿಂದ ಜುಲೈ21ರ ತಡರಾತ್ರಿ ದುರಸ್ತಿಗಾಗಿ ತಂದಿರಿಸಿದ್ದ ಅಂದಾಜು 1,81,000/- ರೂ ಮೌಲ್ಯದ ಒಟ್ಟು 16 ಬೊರ್‌ವೆಲ್‌ ಪಂಪುಗಳನ್ನು ಯಾರೋ ಕಳ್ಳರು ವಾಹನದಲ್ಲಿ ಬಂದು ಕಳ್ಳತನ ನಡೆಸಿದ್ದರು. ಈ ಬಗ್ಗೆ ವಿಟ್ಲ ಠಾಣಾ ಅ.ಕ್ರ.119/2024 ಕಲಂ:303(2) ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡಿದ್ದು 14-08-2024 ರಂದು ಆರೋಪಿಯಾದ ಕಡಬ ತಾಲೂಕು […]

Continue Reading

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಅಂಗಡಿ ಮಾಲಿಕ ಬಂಧನ.

ವಿಟ್ಲ-ಅಡ್ಯನಡ್ಕ ರಸ್ತೆಯ ಕುದ್ದುಪದವು ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಅಂಗಡಿ ಮಾಲಿಕ ಮಹಮ್ಮದ್ ಅಶ್ರಫ್ ಎಂಬಾತನನ್ನು ವಿಟ್ಲ ಪೊಲೀಸರು ಕೇರಳದ ಆನೇಕಲ್ಲು ಸಮೀಪದ ಗುವೆದಪಡ್ಪು ಎಂಬಲ್ಲಿ ಬಂಧಿಸಿದ್ದಾರೆ. ಕುದ್ದುಪದವು ಜಂಕ್ಷನಲ್ಲಿನ ಎ.ಎಂ.ಸ್ಟೋರ್ ಮಾಲಿಕ ಅಂಗಡಿಗೆ ಬಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಂಗಡಿ ಮಾಲಿಕ ಅಶ್ರಫ್ ಪರಾರಿಯಾಗಿದ್ದ. ಘಟನೆ ನಡೆದು 48ಗಂಟೆಯಲ್ಲೇ ಆರೋಪಿ ಅಶ್ರಫ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ […]

Continue Reading

ಆಗಸ್ಟ್ 14 ; ಸ್ವಾತಂತ್ರ್ಯದ ಸಂರಕ್ಷಣೆಗಾಗಿ ಹಾಗೂ ಕಾರ್ಮಿಕ ಹಕ್ಕುಗಳ ಉಳಿವಿಗಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ

ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಈ ಸತ್ಯಾಗ್ರಹ ದೇಶದ ಸ್ವಾತಂತ್ರ್ಯ ,ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ, ಕಾರ್ಮಿಕ ವರ್ಗದ ಹಕ್ಕುಗಳ ಉಳಿವಿಗಾಗಿ ಹಾಗೂ ಕಾರ್ಪೊರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ಆಗಸ್ಟ್ 14 ರಂದು ಸಂಜೆ 5ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಗರದ ಪುರಭವನದ ಮುಖ್ಯ ದ್ವಾರದ ಬಳಿಯಲ್ಲಿ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ನಡೆಸಲು CITU ದ.ಕ.ಜಿಲ್ಲಾ ಸಮಿತಿಯು ನಿರ್ಧರಿಸಿದ್ದು, CITU ಅಖಿಲ ಭಾರತ ತೀರ್ಮಾನದ ಮೇರೆಗೆ ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ […]

Continue Reading

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕೊಣಾಜೆ ಗ್ರಾಮದ ಯುವಕ ಮೃತ್ಯು

ಕೊಣಾಜೆ ಗ್ರಾಮದ ನಡುಪದವು ನಿವಾಸಿ ಉಮ್ಮರ್ ಅವರ ಪುತ್ರ ನೌಫಲ್( 25) ಅಬುಧಾಬಿಯಲ್ಲಿ ಎ.ಸಿ.ಮೆಕ್ಯಾನಿಕ್ ವೃತ್ತಿಯಲ್ಲಿದ್ದರು. ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಕ್ಕೆ ಬಿದ್ದ ನೌಫಲ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತರು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿಯವರ ಸಹೋದರನಾಗಿದ್ದು ಮೃತದೇಹವನ್ನು ಹುಟ್ಟೂರಿಗೆ ತರುವ ವ್ಯವಸ್ಥೆ ಮಾಡಿದ್ದಾರೆ.

Continue Reading