ಆರ್.ಎಸ್.ಎಸ್ ರಾಷ್ಟ್ರ ನಾಯಕನೊಬ್ಬರ ಕುಮ್ಮಕ್ಕಿನಿಂದ ತಮ್ಮದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದ ಹೋರಾಟದ ಕುತಂತ್ರ: ವೈ.ಬಿ.ಚಂದ್ರಕಾಂತ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರನಾಯಕರೊಬ್ಬರ ಕುಮ್ಮಕ್ಕಿನಿಂದ ರಾಜ್ಯದಲ್ಲಿ ತನ್ನದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದ ವಕ್ಫ್ ಆಸ್ತಿಯ ನೆಪದಲ್ಲಿ ಹೋರಾಟಕ್ಕೆ ಇಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ. ವಕ್ಫ್ ಆಸ್ತಿಯ ವಿಷಯದಲ್ಲಿ ಹಲವರಿಗೆ ನೋಟೀಸ್ ನೀಡಿರುವುದು ಆಡಳಿತದ ಭಾಗವೆನ್ನುವುದು ಆರ್.ಎಸ್.ಎಸ್ ನಾಯಕರಿಗೂ ಗೊತ್ತಿರದ ವಿಷಯವೇನಲ್ಲ. ರಾಜ್ಯದಲ್ಲಿ ಈ ಹಿಂದೆ 2019 ರಿಂದ 2022 ರ ಅವಧಿಯಲ್ಲೂ ಬಿ.ಜೆ.ಪಿ. ಸರ್ಕಾರವಿದ್ದಾಗ ವಿವಿಧ ಜಿಲ್ಲೆಗಳ ಹಲವರಿಗೆ ವಕ್ಫ್ ಆಸ್ತಿಯ ವಿಷಯದಲ್ಲಿ 200 ಕ್ಕೂ […]

Continue Reading

ಕೆಐಎಡಿಬಿ ಹಗರಣದ ಸುಳಿಯಲ್ಲಿ ರಾಜ್ಯ ಸರ್ಕಾರ; ಸಿದ್ದು, ಪಾಟೀಲ್, ಹಂದಿಗುಂದ ವಿರುದ್ಧ ಪ್ರಧಾನಿ, EDಗೆ ದೂರು

ಮುಡಾ, ವಾಲ್ಮೀಕಿ ನಿಗಮದ ಕರ್ಮಕಾಂಡದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ KIADB ಬಹುಕೋಟಿ ಹಗರಣವೂ ಸಂಕಷ್ಟ.! ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮುಡಾ ನಿವೇಶನ ಅಕ್ರಮ, ವಾಲ್ಮೀಕಿ ನಿಗಮದ ಕರ್ಮಕಾಂಡದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ KIADB ಬಹುಕೋಟಿ ಹಗರಣವೂ ಸಂಕಷ್ಟ ತಂದೊಡ್ಡಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ‘ದೇವನಹಳ್ಳಿ KIADB ಭೂಸ್ವಾಧೀನ ಅವ್ಯವಹಾರ’ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ಜಾರಿ ನಿರ್ದೇಶನಾಲಯ (ED)ದ ನಿರ್ದೇಶಕರಿಗೆ ದೂರು ಸಲ್ಲಿಕೆಯಾಗಿದೆ. […]

Continue Reading

ಕೇಂದ್ರ ಸರ್ಕಾರದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗ್ಯಾರಂಟಿ ಭಾಗ್ಯ.. ಪಿಎಂ -ವಿದ್ಯಾಲಕ್ಷ್ಮೀ ಯೋಜನೆಗೆ ಸಂಪುಟ ಅಸ್ತು

ಕಡಿಮೆ ಬಡ್ಡಿ ದರದಲ್ಲಿ ಸಾಲ.. ವರ್ಷಕ್ಕೆ 22 ಲಕ್ಷ ವಿದ್ಯಾರ್ಥಿಗಳಿಗೆ ಲಾಭ..! ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಪ್ರಧಾನಮಂತ್ರಿ -ವಿದ್ಯಾಲಕ್ಷ್ಮೀ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಅನ್ವಯ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಯಾವುದೇ ಮೇಲಾಧಾರ ಇಲ್ಲದೆ ಗ್ಯಾರಂಟಿ ರಹಿತವಾಗಿ ಸಾಲ ನೀಡಲಾಗುತ್ತದೆ. ಕುಟುಂಬದ ಆದಾಯ 8 ಲಕ್ಷ ರೂಪಾಯಿ ಗಿಂತ ಕಡಿಮೆ ಇದ್ದವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಏಳೂವರೆ ಲಕ್ಷದವರೆಗಿನ ಸಾಲಕ್ಕೆ ಕೇಂದ್ರ ಸರಕಾರ ಶೇಕಡಾ 75 ರಷ್ಟು ಖಾತರಿಯನ್ನು […]

Continue Reading

ಮುಂಬೈ: ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ, ಕರ್ನಾಟಕ ಮೂಲದ ವಿಕ್ರಮ್‌ ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ಸಹೋದರ ಎಂದು ಹೇಳಿಕೊಂಡು ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ಕಿಡಿಗೇಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿ ಕರ್ನಾಟಕ ಮೂಲದ ವಿಕ್ರಮ್‌ ಎಂದು ಗುರುತಿಸಲಾಗಿದೆ. ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಐದು ಕೋಟಿ ಬೇಡಿಕೆ ಹಾಗೂ ದೇವಸ್ಥಾನಕ್ಕೆ ಬಂದು ಸಲ್ಮಾನ್‌ ಕ್ಷಮೆ ಕೇಳಬೇಕೆಂದು ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ ಇತ್ತೀಚೆಗೆ ಸಂದೇಶ ಕಳುಹಿಸಿದ್ದ. ಸಲ್ಮಾನ್‌ ಜೀವಂತವಾಗಿರಬೇಕೆಂದರೆ ಆತ ನಮಗೆ ಐದು ಕೋಟಿ ನೀಡಬೇಕು ಹಾಗೂ ದೇವಸ್ಥಾನಕ್ಕೆ […]

Continue Reading

ದೂರವಾಣಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಹಿಮಾಚಲ ಪ್ರದೇಶ ಹೈಕೋರ್ಟ್

ಖಾಸಗಿ ಮಾತುಕತೆಯನ್ನು ಸಾಕ್ಷಿಯಾಗಿ ಪರಿಗಣಿಸುವುದು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ವೈವಾಹಿಕ ಪ್ರಕರಣವೊಂದರಲ್ಲಿ, ದೂರವಾಣಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ. ಖಾಸಗಿ ಮಾತುಕತೆಯನ್ನು ಸಾಕ್ಷಿಯಾಗಿ ಪರಿಗಣಿಸುವುದು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ದೂರವಾಣಿಯಲ್ಲಿ ನಡೆದ ಖಾಸಗಿ ಮಾತುಕತೆಯು ಖಾಸಗಿತನ ಹಕ್ಕಿನಡಿ ಬರುತ್ತದೆ ಎಂದು ನ್ಯಾಯಮೂರ್ತಿ ಬಿಪಿನ್ ಚಂದರ್ ನೇಗಿ ತೀರ್ಪು ನೀಡುವಾಗ ಹೇಳಿದ್ದಾರೆ. ವ್ಯಕ್ತಿಯೊಬ್ಬನ ಖಾಸಗಿ ಜೀವನದಲ್ಲಿ ದೂರವಾಣಿ ಸಂಭಾಷಣೆ […]

Continue Reading

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಪ್ರಕರಣ: ಮಾನಸಿಕ ರೋಗಿ ಪಾತಿಮಾ ಖಾನ್ ಬಂಧನ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಹಾಕಿದ್ದು ಹತ್ತು ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಬಾಬಾ ಸಿದ್ಧಿಕಿ ಕೊಲೆ ಮಾಡಿದ ರೀತಿಯಲ್ಲಿ ನಿಮ್ಮನ್ನೂ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವತಿಯನ್ನು ಬಂಧಿಸಲಾಗಿದೆ.ಬಂಧಿತ ಮಹಿಳೆಯನ್ನು ಫಾತಿಮಾ ಖಾನ್‌ ಎಂದು ಗುರುತಿಸಲಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಮಾಡಿರುವ ಫಾತಿಮಾ ಖಾನ್ ತನ್ನ ಕುಟುಂಬ ಸದಸ್ಯರೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ಪ್ರದೇಶದಲ್ಲಿ ನೆಲೆಸಿದ್ದಾಳೆ ಎಂಬುದು ತಿಳಿದಿದೆ. ತನಿಖೆಯಲ್ಲಿ ಆಕೆ ಮಾನಸಿಕ ರೋಗದಿಂದ […]

Continue Reading

ಕಾಸರಗೋಡು: ತೆಯ್ಯಂ ಕೆಟ್ಟ್ ಮಹೋತ್ಸವದ ವೇಳೆ ಪಟಾಕಿ ಸಿಡಿದು ಬೆಂಕಿ ಹತ್ತಿದ ಪರಿಣಾಮ 150 ಮಂದಿಗೆ ಗಾಯ; ಎಂಟು ಮಂದಿಯ ಸ್ಥಿತಿ ಗಂಭೀರ

ಬೆಳಕಿನ ಹಬ್ಬಕ್ಕೆ ಮುನ್ನವೇ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ನಡೆದಿದೆ. ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕೆಟ್ಟ್ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150 ಕ್ಕೂ ಮಿಕ್ಕ ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಈ ಅವಘಡ […]

Continue Reading

ಮಾವ ಅಳಿಯನ ಹೆಸರಿಗೆ ಆಸ್ತಿ ಬರೆದಿದ್ದರೆ ಮಾತ್ರ ಅಳಿಯ ಕೂಡಾ ಆಸ್ತಿಯಲ್ಲಿ ಹಕ್ಕು ಸಾಧಿಸಬಹುದು: ಕೇರಳ ಹೈಕೋರ್ಟ್

ಮಾವ ಸಂಪಾದಿಸಿದ ಆಸ್ತಿಯನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಕೂಡ ಮಾವನ ಆಸ್ತಿಗೆ ಹಕ್ಕು ಸಾಧಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇರಳ ಹೈಕೋರ್ಟಿನ ಪ್ರಕಾರ, ಯಾವುದೇ ಅಳಿಯ ತನ್ನ ಮಾವನ ಆಸ್ತಿಯನ್ನು ಪಡೆದುಕೊಳ್ಳಬಹುದು. ಆದರೆ, ಇದರ ಹಿಂದೆ ವಿಶೇಷ ಕಾರಣವಿರಬೇಕು. ಮಾವ ತಾನು ಸಂಪಾದಿಸಿದ ಆಸ್ತಿಯಲ್ಲಿ ಒಂದಿಷ್ಟು ಅಥವಾ ಎಲ್ಲವನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಆಸ್ತಿಗೆ ಹಕ್ಕು ಸಾಧಿಸಬಹುದು. ಅಳಿಯನು ಮಾವನ ಆಸ್ತಿಯ ಮೇಲೆ ಹಕ್ಕು ಕೇಳುತ್ತಿರುವಾಗ, ಮಾವ […]

Continue Reading

ಚೆಕ್ ಅಮಾನ್ಯ ಪ್ರಕರಣ: ದೂರುದಾರ ಒಪ್ಪಿದರೆ ಮಾತ್ರ ರಾಜಿ; ಏಕಪಕ್ಷೀಯವಾಗಿ ಕೇಸ್ ರದ್ದುಪಡಿಸಲಾಗದು: ಸುಪ್ರೀಂ ಕೋರ್ಟ್

ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ತೀರ್ಪೊಂದರಲ್ಲಿ, ದೂರುದಾರ ಒಪ್ಪಿದರೆ ಮಾತ್ರ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಹಾಗೂ ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಚೆಕ್ ಅಮಾನ್ಯ ಪ್ರಕರಣದ ಫಿರ್ಯಾದಿ ರಾಜಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸದೇ ಇದ್ದಾಗ ಹೈಕೋರ್ಟ್‌ ಸಿಆರ್‌ಪಿಸಿ ಸೆಕ್ಷನ್ 482 ಪ್ರಕಾರ ತನ್ನ ಅಂತರ್ಗತ ಅಧಿಕಾರ ಬಳಸಿ ಚೆಕ್ ಅಮಾನ್ಯ ಪ್ರಕರಣವನ್ನು ರದ್ದುಗೊಳಿಸಲಾಗದು […]

Continue Reading

ಜಗನ್‌ಮೋಹನ್ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ

ಬೆಂಗಳೂರಿನ ಯಲಹಂಕದಲ್ಲಿರುವ 20 ಎಕರೆ, ಸರಸ್ವತಿ ಪವರ್‌ ಹಾಗೂ ಇತರ ಕಂಪನಿಗಳಲ್ಲಿರುವ ಷೇರುಗಳ ಹಂಚಿಕೆ ಕುರಿತಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಮಕ್ಕಳಾದ ಈ ಇಬ್ಬರ ನಡುವಿನ ಪತ್ರ ಸಮರದಲ್ಲಿ, ತಂದೆಯ ನೆನಪುಗಳೊಂದಿಗೆ, ವೈಯಕ್ತಿ ಆರೋಪ ಹಾಗೂ ಪ್ರತ್ಯಾರೋಪಗಳು ಚರ್ಚೆಗೆ ಗ್ರಾಸವಾಗಿದೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಜಗನ್‌ ಗೆಲುವಿಗೆ ಶರ್ಮಿಳಾ […]

Continue Reading