ವರ್ಷಕ್ಕೆ ಎರಡು ಲಕ್ಷಕ್ಕೂ ಅಧಿಕ ಭಾರತೀಯರು ಶಾಶ್ವತವಾಗಿ ದೇಶ ಬಿಟ್ಟು, ತಮ್ಮ ಪೌರತ್ವವನ್ನು ತ್ಯಜಿಸುತ್ತಿದ್ದಾರೆ: ವಿದೇಶಾಂಗ ಸಚಿವಾಲಯ

ವರ್ಷಕ್ಕೆ ಎರಡು ಲಕ್ಷಕ್ಕೂ ಅಧಿಕ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. 2022ರಿಂದ ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚು ಭಾರತೀಯರು ದೇಶ ಬಿಟ್ಟು ಹೋಗುತ್ತಿದ್ದಾರೆ ಎಂದು ಚಳಿಗಾಲದ ಅಧಿವೇಶನದಲ್ಲಿ ವಿದೇಶಾಂಗ ಸಚಿವಾಲಯವು ಅಂಕಿ ಅಂಶಗಳ ಸಹಿತ ಸಂಸತ್ತಿಗೆ ಮಾಹಿತಿ ನೀಡಿದೆ. ಇದರಲ್ಲಿ ಹಲವಾರು ಮಂದಿ ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಹುಟ್ಟಿ ಬೆಳೆದ ಊರು ಬಿಟ್ಟು ಬರುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ […]

Continue Reading

ವಿಪರೀತ ರಸ್ತೆ ಅಪಘಾತ: ಹೈವೇ ಬದಿಯ ಅಕ್ರಮ ಢಾಬಾಗಳ ತೆರವಿಗೆ ಸುಪ್ರೀಂ ಕೋರ್ಟ್ ಸೂಚನೆ

ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್ ಪ್ರೆಸ್ ವೇಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅಖಿಲ ಭಾರತ ಮಾರ್ಗಸೂಚಿ ರೂಪಿಸುವ ಬಗ್ಗೆ ಒಲವು ತೋರಿದೆ. ಇದರ ಪರಿಣಾಮ ಹೆದ್ದಾರಿ ಪಕ್ಕದ ಅಕ್ರಮ ಢಾಬಾಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇ ಗಳ ಎರಡೂ ಬದಿಗಳಲ್ಲಿ ಅಕ್ರಮ ಢಾಬಾಗಳ ನಿರ್ಮಾಣವು ರಸ್ತೆ ಅಪಘಾತಗಳಿಗೆ ಸಂಭವನೀಯ ಕಾರಣ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಹೇಳಿದೆ. ಅಲ್ಲದೆ […]

Continue Reading

ಪಂಚಾಯತ್ ರಾಜ್ ವ್ಯವಸ್ಥೆಗೆ ಕೇಂದ್ರ ಸರ್ಕಾರದಿಂದ ಗಧಾಪ್ರಹಾರ; ತಕ್ಷಣ ಸರಿಪಡಿಸುವಂತೆ ಆಗ್ರಹ..

ರಾಷ್ಟ್ರಪಿತ ಮಹಾತ್ಮ ಗಾಂಧಿಜೀವರ ಕನಸಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ನಿರ್ಜೀವಗೊಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಅತ್ಯಂತ ಖಂಡನೀಯವೆಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಷ್‌ಚಂದ್ರ ಶೆಟ್ಟಿ ತಿಳಿಸಿದ್ದಾರೆ. 2020–25 ನೇ ಸಾಲಿನ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜನಪ್ರತಿನಿಧಿಗಳು “ಪ್ರತಿ ಪಂಚಾಯತಿಗೂ ಕನಿಷ್ಠ ಒಂದು ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೇರವಾಗಿ ಬಿಡುಗಡೆ ಮಾಡಲಿದೆ” ಎಂಬ ಭರವಸೆಯನ್ನು ನೀಡಿದ್ದರು. ಆದರೆ ವಾಸ್ತವದಲ್ಲಿ, ಕಾಂಗ್ರೆಸ್ […]

Continue Reading

ದೇಶದ ಒಟ್ಟು 8 ಲಕ್ಷ ವಕ್ಫ್ ಆಸ್ತಿಗಳ ಪೈಕಿ ಕೇವಲ 2.16 ಲಕ್ಷ ಆಸ್ತಿಗಳು ಮಾತ್ರ ನೋಂದಣಿಯಾಗಿವೆ

ಕರ್ನಾಟಕ ಮೊದಲ ಸ್ಥಾನ. ಶನಿವಾರ ಗಡುವು ಮುಕ್ತಾಯ, ವಕ್ಫ್ ಅಧಿಕಾರಿಗಳು ನ್ಯಾಯಮಂಡಳಿಗಳನ್ನು ಸಂಪರ್ಕಿಸಲು ಸಿದ್ಧತೆ ಕೇಂದ್ರ ಸರ್ಕಾರವು ಜೂನ್ 6 ರಂದು ಪ್ರಾರಂಭಿಸಿದ ಉಮೀದ್ ಪೋರ್ಟಲ್‌ನಲ್ಲಿ ದೇಶದ ಒಟ್ಟು 8 ಲಕ್ಷ ವಕ್ಫ್ ಆಸ್ತಿಗಳ ಪೈಕಿ ಕೇವಲ 2.16 ಲಕ್ಷ ಆಸ್ತಿಗಳು ಮಾತ್ರ ನೋಂದಣಿಯಾಗಿವೆ. ನೋಂದಣಿಗೆ ನಿಗದಿಪಡಿಸಿದ್ದ ಅಂತಿಮ ಗಡುವು ಶನಿವಾರ ಮುಗಿದಿದ್ದು, ವಕ್ಫ್ ಮಂಡಳಿ ಅಧಿಕಾರಿಗಳು ಈಗ ನ್ಯಾಯಮಂಡಳಿಗಳನ್ನು ಸಂಪರ್ಕಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಒಟ್ಟು 5.17 ಲಕ್ಷ ನೋಂದಣಿ ಅರ್ಜಿಗಳಲ್ಲಿ 10,872 ಅರ್ಜಿಗಳು ತಿರಸ್ಕೃತಗೊಂಡಿವೆ. ಕರ್ನಾಟಕವು […]

Continue Reading

ಭಾರತದ ಜೇಮ್ಸ್ ಬಾಂಡ್ ದೋವಲ್ ಹೇಳಿಕೆ ಸಿಕ್ರೇಟ್ ರಿವೀಲ್.!

ಪಾಕಿಸ್ತಾನ ಪರ ಗೂಢಾಚಾರಿಕೆ ಯಲ್ಲಿ ಹಿಂದುಗಳ ಸಂಖ್ಯೆಯೇ ಅಧಿಕ.! ಪಾಕಿಸ್ತಾನದ ಗುಪ್ತಚಾರ ಸಂಸ್ಥೆ ಐ.ಎಸ್.ಐ ಪರವಾಗಿ ಭಾರತದಲ್ಲಿ ಕೆಲಸ ಮಾಡಿದವರ ಪೈಕಿ 80 ಪರ್ಸೆಂಟ್ ಹಿಂದುಗಳಿದ್ದಾರೆ, ಕೇವಲ 20 ಪರ್ಸೆಂಟ್ ಮುಸ್ಲಿಮರಿದ್ದಾರೆ ಎಂದು ಹೇಳಿದ ಅಜಿತ್ ದೋವಲ್ ರವರ ಒಂದು ಹಳೆಯ ವೀಡಿಯೊ ತುಣುಕು ಸಾಮಾಜಿನ ಜಾಲತಾಣದಲ್ಲಿ ಹರಿದಾಡಿತ್ತು. ಇದು ಎಡಿಟಿಂಗ್ ವಿಡಿಯೋ ಎಂದು ಸೃಷ್ಟೀಕರಣ ನೀಡಿದ್ದಾರೆ. ಆದರೆ ಇದರ ಸತ್ಯಾಸತ್ಯತೆಯನ್ನು ಮಾಧ್ಯಮದ ಪ್ರತಿನಿಧಿರೊಬ್ಬರು ಬೆನ್ನು ಹತ್ತಿದಾಗ ವಿಡಿಯೋ ಎಡಿಟಿಂಗ್ ಮಾಡಿದ್ದಲ್ಲ, ವಿಡಿಯೋ ಮಾಡಿರುವ ಸಮಯದಲ್ಲಿ ಎಐ […]

Continue Reading

ಹನ್ನೆರಡು ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಒಂದು ವಾರ ವಿಸ್ತರಿಸಿದ ಚುನಾವಣಾ ಆಯೋಗ

ಭಾರತದ ಚುನಾವಣಾ ಆಯೋಗ 12 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಒಂದು ವಾರ ವಿಸ್ತರಿಸಿದೆ. ಮುಂಬರುವ ಚುನಾವಣೆಗಳಿಗೆ ಮೊದಲು ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ನವೀಕರಿಸಲು ಮತದಾರರಿಗೆ ಹೆಚ್ಚುವರಿ ಸಮಯವನ್ನು ನೀಡಿದೆ. ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 9 ರಂದು ಪ್ರಕಟಿಸಲಾಗುತ್ತಿದ್ದು, ಡಿಸೆಂಬರ್ 16 ರ ಅಂತಿಮ ಮತದಾರರ ಪಟ್ಟಿ ಫೆಬ್ರವರಿ 7 ರಂದು ಪ್ರಕಟವಾಗಲಿದ್ದು, ಫೆಬ್ರವರಿ 14, 2026 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ. ಭಾರತದ […]

Continue Reading

ಅಬಲೆಯರ ಗಟ್ಟಿ ಧ್ವನಿ ಈ ಮಂಡ್ಯದ ಹೆಣ್ಣು.!, ಸಕ್ಕರೆ ನಾಡಿನಲ್ಲಿ ಮಹಿಳಾ ಪರ ಹೋರಾಟದ ಮುಂಚೂಣಿ ನಾಯಕಿ ರಜನಿರಾಜ್

ಮಣಿಪುರಕ್ಕೆ ದಾವಿಸಿ ಗಡಿ ಕಾಯುವ ಯೋಧನಿಂದ ವಂಚನೆಗೊಳಗಾದ ಹೆಣ್ಣಿಗೆ ನ್ಯಾಯ ಒದಗಿಸಿದ ಗಟ್ಟಿಗಿತ್ತಿ.! ಹೆಣ್ಣು ಅಬಲೆಯಲ್ಲ..ಈ ಮಾತನ್ನು ಪ್ರತಿ ನಿತ್ಯ ಕೇಳುತ್ತಿದ್ದೇವೆ. ಆದರೆ ಭಾರತದಂತಹ ದೇಶದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಹೆಣ್ಣು ಲೈಂಗಿಕ ಶೋಷಣೆ, ಅನ್ಯಾಯಕ್ಕೆ ಒಳಗಾಗುತ್ತಿದ್ದಾಳೆ. ಮಧ್ಯರಾತ್ರಿ ಹೆಣ್ಣೊಬ್ಬಳು ನಿರ್ಭೀತಿಯಿಂದ ಓಡಾಡುವ ಗಳಿಗೆ ಬಂದಾಗಲಷ್ಟೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿದಂತಾಗುತ್ತದೆ ಎಂದು ಮಹಾತ್ಮರು ಹೇಳಿದ್ದರು. ಮಧ್ಯರಾತ್ರಿ ಬಿಡಿ ಮಟ ಮಟ ಮಧ್ಯಾಹ್ನ ಹೊತ್ತಿನಲ್ಲೇ ಮಹಿಳೆಯರು ಓಡಾಡುತ್ತಿದ್ದರೆ ಕೀಚಕರ ಗುಂಪು ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ಅನೇಕ ಸಂಗತಿಗಳು ನಡೆದಿದೆ. […]

Continue Reading

ಕೋಟ್ಯಾಂತರ ರೂಪಾಯಿ ಸೈಬರ್ ವಂಚನೆ ಪ್ರಕರಣ: ಪುದುಚೇರಿಯ ಮೂವರು ಎಂಜಿನಿಯರ್ ವಿದ್ಯಾರ್ಥಿಗಳ ಬಂಧನ

ಸೈಬರ್‌ ವಂಚನೆ ಜಾಲ: 14 ಮಂದಿ ಸೈಬರ್ ವಂಚಕರನ್ನು ಬಂಧಿಸಿದ ಆಂಧ್ರ ಪ್ರದೇಶ ಪೊಲೀಸರು 90 ಕೋಟಿ ರೂಪಾಯಿ ಮೌಲ್ಯದ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸೈಬರ್ ವಂಚಕರ ಜಾಲವೂ ಎಂಜಿನಿಯರಿಂಗ್ ಕಾಲೇಜಿನೊಳಗಿನಿಂದಲೇ ಕಾರ್ಯಾಚರಿಸುತ್ತಿತ್ತು. ಪುದುಚೇರಿ ಸೈಬರ್ ಕ್ರೈಂ ಪೊಲೀಸರು ಈ ಬೃಹತ್ ಜಾಲವನ್ನು ಬೇಧಿಸಿದ್ದು, ಆರೋಪಿ ವಿದ್ಯಾರ್ಥಿಗಳು ಸೈಬರ್ ಅಪರಾಧಿಗಳಿಗೆ ತಮ್ಮ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳ ಬ್ಯಾಂಕ್‌ ಡಿಟೇಲ್‌ಳನ್ನು ಮಾರಾಟ ಮಾಡುತ್ತಿದ್ದರು. ನಂತರ ಸೈಬರ್ ವಂಚಕರು ಅವರ […]

Continue Reading

15 ವರ್ಷಗಳ ಹಳೆಯ ವಾಹನ ಮಾಲಕರಿಗೆ ಕೇಂದ್ರ ಸರಕಾರದಿಂದ ಭಾರೀ ಶಾಕ್, ಇಂದಿನಿಂದ ಭಾರೀ ಶುಲ್ಕ

ವಾಹನ ಫಿಟ್ ಆಗಿದ್ರೂ, 15 ವರ್ಷಗಳ ನಂತರವೂ ರಸ್ತೆಗಳಲ್ಲಿ ಓಡಾಟ ಮುಂದುವರಿಸಿದರೆ, ಇಂದಿನಿಂದ ಭಾರೀ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕೇಂದ್ರದ ಇತ್ತೀಚಿನ ನಿರ್ಧಾರದೊಂದಿಗೆ, ಹಳೆಯ ವಾಹನಗಳನ್ನು ರಸ್ತೆಗಳಲ್ಲಿ ಓಡಿಸುವುದು ಹೊರೆಯಾಗಲಿದೆ. 15 ವರ್ಷಗಳವರೆಗಿನ ನಾಲ್ಕು ಚಕ್ರಗಳ ವಾಹನಗಳಿಗೆ ಫಿಟ್‌ನೆಸ್ ಶುಲ್ಕ ಕೇವಲ 944 ರೂ. ಹದಿನೈದು ವರ್ಷಗಳನ್ನು ಮೀರಿದರೆ, ಅದು ವರ್ಷಕ್ಕೆ 5,310 ರೂ. ಪಾವತಿಸಬೇಕಾಗುತ್ತದೆ. 20 ವರ್ಷಗಳನ್ನು ಮೀರಿದರೆ, ಅದು ವಾರ್ಷಿಕವಾಗಿ 10,620 ರೂ. ಪಾವತಿಸಬೇಕಾಗುತ್ತದೆ. ಅದೇ ನಾಲ್ಕು ಚಕ್ರಗಳ ಕೋಟಾದಲ್ಲಿರುವ ಲಘು ವಾಹನಗಳಿಗೆ ಹದಿನೈದು ವರ್ಷಗಳವರೆಗೆ […]

Continue Reading

ಒಬ್ಬರ ಹೆಸರಿನಲ್ಲಿ ಖರೀದಿಯಾದ ಸಿಮ್‌ ಕಾರ್ಡ್‌ ನಂತರದಲ್ಲಿ ದುರ್ಬಳಕೆ ಆದರೆ, ಮೂಲ ವ್ಯಕ್ತಿಯನ್ನು ಕೂಡ ಅಪರಾಧಿ ಎಂದು ಪರಿಗಣಿಸಬಹುದು: ಕೇಂದ್ರ ಸರಕಾರ

ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಸೈಬರ್‌ ಅಪರಾಧ ಚಟುವಟಿಕೆಗಳಿಗೆ ಅಥವಾ ಇತರ ಅಪರಾಧ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಂಡರೆ, ಆ ಸಿಮ್‌ ಕಾರ್ಡ್ ಯಾರ ಹೆಸರಿನಲ್ಲಿದೆಯೋ ಅವರನ್ನೇ ಹೊಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ನಾಗರಿಕರು ಎಚ್ಚರಿಕೆಯಿಂದ ಇರಬೇಕು, ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆಯನ್ನು ಬದಲಾಯಿಸಿದ್ದರೆ ಅಂತಹ ಮೊಬೈಲ್‌ ಫೋನ್‌ ಬಳಕೆ ಸೂಕ್ತವಲ್ಲ ಎಂದು ಕೇಂದ್ರ ದೂರಸಂಪರ್ಕ ಇಲಾಖೆಯ ಪ್ರಕಟಣೆ ಹೇಳಿದೆ. ನಕಲಿ ದಾಖಲೆಗಳನ್ನು ಬಳಸಿ ಸಿಮ್‌ ಕಾರ್ಡ್‌ ಖರೀದಿಸಬಾರದು, ಗ್ರಾಹಕರು ತಮ್ಮ ಹೆಸರಿನಲ್ಲಿ […]

Continue Reading