ಅದಾನಿ ಸಮೂಹದ ಮೇಲೆ ಮತ್ತೊಂದು ಭಾರೀ ಆರೋಪ.! ವಿದ್ಯುತ್‌ ಬಳಸುವ ಭಾರತೀಯರ ಮೇಲೆ ಹೊರೆ ಹಾಕಿದೆ: ಫಿನಾನ್ಷಿಯಲ್‌ ಟೈಮ್ಸ್‌

ಹಿಡನ್‌ಬರ್ಗ್‌ ವರದಿ ನಂತರ ಅದಾನಿ ಸಮೂಹದ ಮೇಲೆ ಮತ್ತೊಂದು ಭಾರೀ ಆರೋಪ ಕೇಳಿ ಬಂದಿದೆ. ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಅದಾನಿ ಸಮೂಹ ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚಿನ ಬೆಲೆಯನ್ನು ತೋರಿಸಿ ಅದರ ಹೊರೆಯನ್ನು ವಿದ್ಯುತ್‌ ಬಳಸುವ ಭಾರತೀಯರ ತಲೆ ಮೇಲೆ ಹಾಕಿದೆ ಅಂತ ಬ್ರಿಟನ್‌ ಮೂಲದ ಫಿನಾನ್ಷಿಯಲ್‌ ಟೈಮ್ಸ್‌ ವರದಿ ಮಾಡಿದೆ. ಅದರ ಪ್ರಕಾರ, ದೇಶದ ಅತಿದೊಡ್ಡ ಖಾಸಗಿ ಕಲ್ಲಿದ್ದಲು ಆಮದುದಾರ ಕಂಪನಿಯಾದ ಅದಾನಿ ಸಮೂಹ, 2019ರಿಂದ 2021ರ ನಡುವೆ, ಇಂಡೋನೇಷ್ಯಾದಿಂದ 30 ಬಾರಿ ಕಲ್ಲಿದ್ದಲು ತರಿಸಿಕೊಂಡಿದ್ದು, ಪ್ರತಿ […]

Continue Reading

ಜಾಗತಿಕ ಹಸಿವಿನ ಸೂಚ್ಯಂಕ 2023 ರಲ್ಲಿ ಭಾರತ ಜಗತ್ತಿನ 125 ದೇಶಗಳ ಪೈಕಿ 111ನೇ ಸ್ಥಾನ ಪಡೆದಿದೆ.

ನವದೆಹಲಿ : ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ 2023 ರಲ್ಲಿ ಭಾರತ ಜಗತ್ತಿನ 125 ದೇಶಗಳ ಪೈಕಿ 111ನೇ ಸ್ಥಾನ ಪಡೆದಿದೆ. ಆದರೆರ್. ರಾಕಿಂಗ್ ಬಗ್ಗೆ ಆಕ್ಷೇಪಿಸಿರುವ ಭಾರತ ಸರ್ಕಾರ ಅದು ದೋಷದಿಂದ ಕೂಡಿದೆ ಮತ್ತು ದುರುದ್ದೇಶ ಹೊಂದಿದೆ ಎಂದು ಹೇಳಿದೆ. ಗುರುವಾರ ಬಿಡುಗಡೆಗೊಂಡ ಸೂಚ್ಯಂಕದಲ್ಲಿ ಭಾರತಕ್ಕೆ 28.7 ಅಂಕಗಳು ದೊರಕಿದ್ದು ದೇಶದಲ್ಲಿ ಹಸಿವಿನ ಪ್ರಮಾಣದ ಗಂಭೀರತೆಯನ್ನು ಇದು ಸೂಚಿಸಿದೆ. ಈ ಸೂಚ್ಯಂಕದಲ್ಲಿ ನೆರೆಯ ದೇಶಗಳಾದ ಪಾಕಿಸ್ತಾನ 102ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 81ನೇ ಸ್ಥಾನದಲ್ಲಿ, ನೇಪಾಳ […]

Continue Reading

ವಾಹನದ ದಾಖಲೆ ಪತ್ರಕ್ಕೆ ಆಧಾರ್ ಲಿಂಕ್ ಖಡ್ಡಾಯ, ಮತ್ತೊಂದು ಹೊಸ ನಿಯಮ

ಹೊಸ ವಾಹನಗಳ ನೋಂದಣಿ ಸೇರಿದಂತೆ 2021 ರಿಂದ ಎಲ್ಲಾ ವಾಹನ ಸಂಬಂಧಿತ ವಹಿವಾಟುಗಳಿಗೆ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ವಾಹನ ನೋಂದಣಿ ಮತ್ತು ಇತರ ಪ್ರಕ್ರಿಯೆಗಳಲ್ಲಿ ನಕಲಿ ವಹಿವಾಟುಗಳನ್ನು ತಡೆಯಲು ಸರ್ಕಾರ ಮುಂದಾಗಿದೆ. ಈ ಹಿಂದೆ ಪಡೆಯಲಾದ ಆಧಾರ್‌ ಕಾರ್ಡ್‌ನಲ್ಲಿ ಹಾಗು RC ಅಲ್ಲಿ ಹೆಸರು ಮತ್ತು ಮೊಬೈಲ್‌ ಫೋನ್‌ ಸಂಖ್ಯೆ ಬೇರೆ ಬೇರೆಯಾಗಿದ್ದರೆ ವಾಹನಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಾಗಲಿದೆ. ಆಧಾರ್ ಲಿಂಕ್ ಮಾಡಲಾದ ಫೋನ್ ಸಂಖ್ಯೆಯನ್ನು ಸೇರಿಸುವ […]

Continue Reading

ಮತ್ತೊಬ್ಬ ಸ್ವಯಂ ಘೋಷಿತ ದೇವಮಾನವ ಅಂದರ್.! ಸಮಸ್ಯೆ ಹೇಳಿಕೊಂಡು ಬಂದವರನ್ನು ಬೆತ್ತಲೆಗೊಳಿಸುತ್ತಿದ್ದ ಅಸಾಮಿ.!

ಇದು ಫೇಕ್ ದುನಿಯಾ.. ಅಂತಾರಲ್ಲ.. ಅದು ನಿಜ ಅಂತ ತೋರುತ್ತದೆ. ಕೆಲವರ ವೀಕ್ ನೆಸ್ ಯೂಸ್ ಮಾಡಿಕೊಂಡು ತಮ್ಮ ಹೊಟ್ಟೆ ತುಂಬಿಸುವ ಜೊತೆಗೆ ದೇವರು, ಧರ್ಮದ ಹೆಸರಿನಲ್ಲಿ ತಮ್ಮ ಕಳ್ಳಾಟ ನಡೆಸುತ್ತಿರುವ ಅನೇಕ ಸ್ವಯಂ ಘೋಷಿತ ದೇವಮಾನವರು ಕಂಬಿ ಹಿಂದೆ ಮುದ್ಧೆ ಮುರಿಯುತ್ತಿದ್ದಾರೆ. ಇಷ್ಟಾದರೂ ಜನರಿಗೆ ಬುದ್ಧಿ ಬಂದಿದೆಯಾ? ಇಲ್ಲ..ಫೇಕ್ ಸ್ವಯಂ ಘೋಷಿತ ದೇವಮಾನವರು ಹುಟ್ಟಿ ಕೊಳ್ಳುತ್ತಲೇ ಇದ್ದಾರೆ. ಜನ ಮೋಸ ಹೋಗುತ್ತಲೇ ಇದ್ದಾರೆ. ಇದೀಗ ದೆಹಲಿಯ ಸ್ವಯಂ ಘೋಷಿತ ದೇವಮಾನವ ಕಂ ಯೂಟ್ಯೂಬರ್ ವಿನೋದ್ ಕಶ್ಯಪ್ […]

Continue Reading

ಮುಸ್ಲಿಂ ಪುರುಷರಿಗೆ ಸಾರ್ವಜನಿಕವಾಗಿ ಗುಜರಾತ್‌ ಪೊಲೀಸರು ಥಳಿಸಿದ ಪ್ರಕರಣ

ಶಿಕ್ಷಿಸುವ ಬದಲು ಪರಿಹಾರ ನೀಡಲು ಅವಕಾಶ ಮಾಡಿಕೊಡಿ; ಗುಜರಾತ್ ಹೈಕೋರ್ಟಿಗೆ ಪೊಲೀಸರ ಮನವಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಮ್ಮನ್ನು ಶಿಕ್ಷಿಸುವ ಬದಲು ಸಂತ್ರಸ್ತರಿಗೆ ಪರಿಹಾರ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಸ್ಲಿಂ ಪುರುಷರಿಗೆ ಸಾರ್ವಜನಿಕವಾಗಿ ಥಳಿಸಿದ್ದ ನಾಲ್ವರು ಪೊಲೀಸರು ಗುಜರಾತ್‌ ಹೈಕೋರ್ಟ್‌ಗೆ ಬುಧವಾರ ಅಂಗಲಾಚಿದ್ದಾರೆ. ನ್ಯಾಯಾಂಗ ನಿಂದನೆ ಆರೋಪ ಕುರಿತಂತೆ ತೀರ್ಪು ನೀಡುವ ಮೊದಲು ತಾವು ಸಲ್ಲಿಸಿರುವ ಸೇವಾವಧಿಯನ್ನು ಪರಿಗಣಿಸುವಂತೆ ನಾಲ್ವರು ಪೊಲೀಸ್‌ ಸಿಬ್ಬಂದಿಗಳಾದ ಎ ವಿ ಪರ್ಮಾರ್, ಡಿ ಬಿ ಕುಮಾವರ್, […]

Continue Reading

ಸಾಲ ಮಾಡಿ ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್.! ರಿಸರ್ವ್ ಬ್ಯಾಂಕಿನಿಂದ ಮಹತ್ವದ ನಿರ್ಧಾರ.

ದೇಶದಲ್ಲಿ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ಸಲ ಸೌಲಭ್ಯವನ್ನು ನೀಡುತ್ತದೆ. ಬ್ಯಾಂಕುಗಳು ಗ್ರಾಹಕರಿಗೆ ವೈಯಕ್ತಿಕ ಸಾಲ, ಗೃಹ ಸಲ ಸೇರಿದಂತೆ ವಾಹನ ಸಾಲಗಳನ್ನು ನೀಡುತ್ತದೆ.ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಸಾಲಗಳ ಬಗ್ಗೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಸಾಲ ನೀಡುವ ಬ್ಯಾಂಕುಗಳಿಗೆ ಹೊಸ ಹೊಸ ನಿಯಮವನ್ನು ನೀಡುತ್ತಿದೆ. ಬ್ಯಾಂಕುಗಳಲ್ಲಿ ಸಾಲ ಪಡೆದವರು ಹೆಚ್ಚಿನ ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ. ಬ್ಯಾಂಕುಗಳು ನೀಡುವ ವಾಹನ ಸಾಲಸಾಮಾನ್ಯವಾಗಿ ವಾಹನಗಳನ್ನು ಖರೀದಿಸುವಾಗ ಆರ್ಥಿಕ ಸಮಸ್ಯೆ ಎದುರಾಗುವುದು ಸಹಜ. ಈ ಸಮಯದಲ್ಲಿ ಜನರು […]

Continue Reading

`ಸಪ್ತಪದಿ’ ಶಾಸ್ತ್ರ ನಡೆಯದಿದ್ದರೆ ವಿವಾಹ ಅಸಿಂಧು: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

“ಹಿಂದೂಗಳಲ್ಲಿ ಸಪ್ತಪದಿ ತುಳಿಯುವ ಶಾಸ್ತ್ರ ಮಾಡಿಲ್ಲವೆಂದಾದರೆ ಆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ನನ್ನಿಂದ ವಿಚ್ಛೇದನ ಪಡೆಯದೆಯೇ ನನ್ನ ಪತ್ನಿಯು ಎರಡನೇ ವಿವಾಹವಾಗಿದ್ದು, ಆಕೆಗೆ ಶಿಕ್ಷೆಯಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೇ ಹೈಕೋರ್ಟ್‌ ರದ್ದು ಮಾಡಿ ಈ ತೀರ್ಪು ನೀಡಿದೆ. ಸ್ಮತಿ ಸಿಂಗ್‌ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ನ್ಯಾ.ಸಂಜಯ್‌ ಕುಮಾರ್‌ ಸಿಂಗ್‌ ಅವರು, “ಶಾಸ್ತ್ರೋಕ್ತ ವಿವಾಹ ಎಂದರೆ, ಸೂಕ್ತ ರೀತಿಯಲ್ಲಿ […]

Continue Reading

ಬಿಟ್ ಕಾಯಿನ್ ಕಿಂಗ್​ಪಿನ್ ರಾಜೇಂದ್ರ ಸಿಂಗ್ ಬಂಧನ; ಮಹತ್ವದ ಯಶಸ್ಸು ಸಾಧಿಸಿದ ಎಸ್ಐಟಿ ತನಿಖಾ ತಂಡ

ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿ, ರಾಜ್ಯ ರಾಜಕೀಯ ನಾಯಕರು ಹಾಗೂ ಐಪಿಎಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವ ‘ಬಿಟ್ ಕಾಯಿನ್’ ಹಗರಣದ ದಿಕ್ಕನ್ನೇ ಬದಲಿಸುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಗೂ ಮುನ್ನವೇ ಬಿಟ್ ಕಾಯಿನ್ ಹ್ಯಾಕಿಂಗ್​ನಲ್ಲಿ ಕೈಚಳಕ ತೋರಿ ಭೂಗತನಾಗಿದ್ದ ಇನ್ನೊಬ್ಬ ಅಂತಾರಾಷ್ಟ್ರೀಯ ಹ್ಯಾಕರ್​ನನ್ನು ವಿಶೇಷ ತನಿಖಾ ದಳ ಬಂಧಿಸಿದೆ.ಇದೇ ವೇಳೆ ಹಗರಣ ಸಾಬೀತುಪಡಿಸುವ ಸಾಕ್ಷ್ಯ ಸಂಗ್ರಹಕ್ಕಾಗಿ ಎಸ್​ಐಟಿ ತಂಡವು ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೋರಿರುವುದರಿಂದ ಶೀಘ್ರದಲ್ಲೇ ತನಿಖೆ […]

Continue Reading

ಮಸೀದಿಯಲ್ಲಿ ಇಮಾಮರಾಗಿದ್ದ ಮೌಲ್ವಿ ಇದೀಗ ನಿಶಾ ಫಾತಿಮಾ..!ದೇವರ ನಾಡಲ್ಲಿ ಇದೆಂತಹ ವಿಚಿತ್ರ.!

ಬೆಚ್ಚಿಬೀಳಿಸುವ ಸುದ್ದಿಯೊಂದು ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ವರದಿಯಾಗಿದೆ. 6-7 ವರ್ಷಗಳ ಕಾಲ ದರ್ಸ್ ನಲ್ಲಿ ಮುತಅಲ್ಲಿಂ ಕಲಿತು ಮಸೀದಿಯೊಂದರಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸರ್ಜರಿ ನಡೆಸಿ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ನಾವು ಈವರೆಗೂ ಸಿನಿಮಾ ನಟರು, ಕೆಲ ಯುವಕರು ಲಿಂಗ ಬದಲಾಯಿಸಿ ಹೆಣ್ಣಾಗಿ ಪರಿವರ್ತನೆಯಾದ ಕಹಾನಿಗಳನ್ನೆಲ್ಲಾ ಕೇಳಿದ್ದೇವೆ. ಇತ್ತೀಚೆಗೆ ಮಂಗಳೂರಿನ ಆಸುಪಾಸಿನ ಯುವಕನೊಬ್ಬ ಹೆಣ್ಣಾಗಿ ಬದಲಾದ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಎಂಬಂತೆ ಮುತಅಲ್ಲಿಂ ಆಗಿ, ಧಾರ್ಮಿಕ […]

Continue Reading

ನಿಯಮ ಉಲ್ಲಂಘಿಸಿದರೆ ವೈದ್ಯಕೀಯ ಕಾಲೇಜುಗಳಿಗೆ ಕೋಟಿ ರೂಪಾಯಿ ದಂಡ: ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅಧಿಸೂಚನೆ

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಗಳು ಹಾಗೂ ಶಾಸನಬದ್ಧ ನಿಯಮಗಳನ್ನು ಪಾಲಿಸದಿರುವ ವೈದ್ಯಕೀಯ ಕಾಲೇಜುಗಳಿಗೆ, ಇನ್ನು ಮುಂದೆ ಪ್ರತಿ ನಿಯಮ ಉಲ್ಲಂಘನೆಗೆ ರೂಪಾಯಿ ಒಂದು ಕೋಟಿ ವರೆಗೂ ದಂಡ ವಿಧಿಸಬಹುದಾಗಿದೆ. ವಿವಿಧ ನಿಯಮಗಳ ಕುರಿತು ಆಯೋಗವು ಸೆ.27ರಂದು ಅಧಿಸೂಚನೆ ಹೊರಡಿಸಿದೆ. ರೋಗಿಗಳ ಕುರಿತ ಸುಳ್ಳುದಾಖಲೆ ಮತ್ತು ಕಡತವನ್ನು ಒದಗಿಸುವ ವೈದ್ಯಕೀಯ ಕಾಲೇಜುಗಳ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ನಿರ್ದೇಶಕರು, ವೈದ್ಯರಿಗೆ ತಲ ರೂಪಾಯಿ 5 ಲಕ್ಷದ ವರೆಗೂ ದಂಡ ವಿಧಿಸಲು ಅವಕಾಶವಿದೆ. ದುರ್ನಡತೆಗಾಗಿ ನೋಂದಾಯಿತ ವೈದ್ಯರುಗಳಿಗೆ ನಿಯಮಗಳು ಹಾಗೂ […]

Continue Reading