ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ; ಮನೆ ಕಳ್ಳತನ ಪ್ರಕರಣದ ಆರೋಪಿಯ ಬಂಧನ, ಸೊತ್ತುಗಳ ವಶ.

ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆ ಎಂಬಲ್ಲಿ ಆಗಸ್ಟ್ 30ರಂದು ನಡೆದ ಮನೆ ಕಳ್ಳತನ ಪ್ರಕರಣದ ಖದೀಮನ ಬಂಧಿಸಿ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಳ ನಿವಾಸಿ ಸಂತೋಷ್ ಟಿ.( 32)ಬಂಧಿತ ಆರೋಪಿ. ಮನೆಯವರೆಲ್ಲ ನಿದ್ರಿಸುತ್ತಿದ್ಜ ಕೋಣೆಯ ಒಳಗೆ ನುಗ್ಗಿದ್ದ ಕಳ್ಳ ಕಪಾಟಿನ ಬೀಗ ಮುರಿದು ಸುಮಾರು 10.05 ಲಕ್ಷ ಮೌಲ್ಯದ 33 ಪವನ್ ತೂಕದ ಚಿನ್ನಾಭರಣ ಲಪಟಾಯಿಸಿದ್ಜನು. ಈ ಬಗ್ಗೆ ಮನೆ ಮಾಲಿಕರು ನೀಡಿದ ದೂರಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ […]

Continue Reading

ಅತ್ಯಾಚಾರ ಆರೋಪ ಪ್ರಕರಣ: ಆರೋಪಿ ಖುಲಾಸೆ, ವಾದ ಮಂಡಿಸಿದ ನ್ಯಾಯವಾದಿ ಅರುಣ್ ಬಂಗೇರ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ರವರನ್ನು ಖುಲಾಸೆಗೊಳಿಸಿ, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2019ರಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ಎಂಬುವರು ಬಸ್ಸಿನಲ್ಲಿ ಚಾಲಕ ಮಾಡಿಕೊಂಡಿರುವಾಗ ಪಿರ್ಯಾದಿದಾರರನ್ನು ಪರಿಚಯಿಸಿಕೊಂಡು ಆತ್ಮೀಯತೆಯಿಂದಿದ್ದು, ನಂತರದ ದಿನಗಳಲ್ಲಿ ತನ್ನ ತಂದೆಯ ಶಸ್ತ್ರಚಿಕಿತ್ಸೆಗೆ ಹಣಬೇಕು ಎಂದು ಒಂದು ಲಕ್ಷ ಹಣವನ್ನು ಪಿರ್ಯಾಧಿದಾರರಿಂದ ಪಡೆದುಕೊಂಡು, ಸದ್ರಿ ಹಣವನ್ನು 2 ತಿಂಗಳಲ್ಲಿ ಕೊಡುತ್ತೇನೆಂದು ಹೇಳಿ, ನಂತರ ಪಿದ್ಯಾಧಿದಾರರು ಆರೋಪಿಯಲ್ಲಿ ಹಣ ಕೇಳಿದಾಗ ಆರೋಪಿಯು ಹಣ ಕೊಡದೇ ಸತಾಯಿಸುತ್ತಿದ್ದು, […]

Continue Reading

ಬೀದಿ ವ್ಯಾಪಾರ ವಲಯ ಗುರುತಿಸುವಿಕೆ ಅವೈಜ್ಞಾನಿಕ, ಬೀದಿ ವ್ಯಾಪಾರಿಗಳನ್ನು ಅತಂತ್ರಗೊಳಿಸುವ ಹುನ್ನಾರ: ಸಿಐಟಿಯು ಆರೋಪ

ಮಂಗಳೂರು: ಟೈಗರ್ ಕಾರ್ಯಾಚರಣೆ ನಡೆಸಿ ಬಡ ಬೀದಿ ವ್ಯಾಪಾರಿಗಳ ಬದುಕನ್ನೇ ನಾಶ ಮಾಡಿರುವ ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ವ್ಯಾಪಾರ ವಲಯಗಳನ್ನು ಗುರುತು ಮಾಡಿ ಬೀದಿ ವ್ಯಾಪಾರಿಗಳನ್ನು ಬಾಣಲೆಯಿಂದ ಬೆಂಕಿಗೆ ದೂಡಿದೆ ಎಂದು ದಕ್ಷಿಣಕನ್ನಡ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಆರೋಪಿಸಿದೆ. ಪರ್ಯಾಯ ವ್ಯವಸ್ಥೆಗಳಿಲ್ಲದೇ, ಪೂರ್ವ ಯೋಜನೆಗಳಿಲ್ಲದೆ ಏಕಾಏಕಿ ಟೈಗರ್ ಕಾರ್ಯಾಚರಣೆ ನಡೆಸಿ, ಕೈ ಸುಟ್ಟುಕೊಂಡಿರುವ ನಗರಪಾಲಿಕೆ ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸಲು ಹೆಣಗಾಡುತ್ತಿದೆ. ಅದಕ್ಕಾಗಿ ಅವೈಜ್ಞಾನಿಕವಾಗಿ ವ್ಯಾಪಾರ ವಲಯ ಗುರುತು ಮಾಡಿ ಪ್ರಚಾರ ಪಡೆಯುತ್ತಿದೆ ಹೊರತು ಸಮಸ್ಯೆ […]

Continue Reading

ಅಂಬ್ಯುಲೆನ್ಸ್-ಕಂಟೈನರ್ ಲಾರಿ ಆಕ್ಸಿಡೆಂಟ್..ಐವರಿಗೆ ಗಾಯ.ಮಾಣಿ-ಮೈಸೂರು ಹೆದ್ದಾರಿಯ ಕುಂಬ್ರ ಬಳಿ ಅಪಘಾತ.

ಮಗುವನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್ ಗೆ ಇಂದು ಸಂಜೆ ಮಾಣಿ-ಮೈಸೂರು ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಬಳಿ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ಆಂಬ್ಯುಲೆನ್ಸ್‌ನಲ್ಲಿದ್ದ ಐವರು ಗಾಯಗೊಂಡಿದ್ಜಾರೆ. ಜಯಪ್ರಕಾಶ್ ಎಂಬವರು ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್(ಕೆಎ 21, ಬಿ 1971) ಗೆ ಪುತ್ತೂರು ಕಡೆಯಿಂದ ಮೈಸೂರಿನತ್ತ ಸಂಚರಿಸುತ್ತಿದ್ದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ ಗಾಯವಾಗಿದ್ದು ಅವರನ್ನು ಇನ್ನೊಂದು ಆಂಬ್ಯುಲೆನ್ಸ್‌ ಮೂಲಕ […]

Continue Reading

ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್ ನಿಧನ

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (RDPR) ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ, ಪಡುಪೆರಾರ ಗ್ರಾಮ ಪಂಚಾಯತ್ ಸಹಾಯಕ ಪ್ರದೀಪ್ ಕುಮಾರ್ ನಿನ್ನೆ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷರಾಗಿ ಕ್ರಿಯಾಶೀಲರಾಗಿದ್ದು, ಸಂಘದ ಬೆಳವಣಿಗೆಗೆ ಆಹೋರಾತ್ರಿ ಸ್ಪಂದಿಸುತ್ತಿದ್ದರು.

Continue Reading

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆಯಾಗಿ ಸಂಗೀತಾ ಜಗದೀಶ್ ಆಯ್ಕೆ.

ಚುನಾವಣೆ ಮುಗಿದು ಮೂರು ವರ್ಷಗಳ ಬಳಿಕ ವಿಟ್ಲ ಪಟ್ಟಣ ಪಂಚಾಯತಿನ ಆಡಳಿತ ನಡೆಸುವ ಭಾಗ್ಯ ಬಿಜೆಪಿಗೆ ಒಲಿಯಿತು. 18 ಸದಸ್ಯ ಬಲದ ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ-12, ಕಾಂಗ್ರೆಸ್-5, ಎಸ್ಡಿಪಿಐ ಒಬ್ಬ ಸದಸ್ಯರನ್ನು ಹೊಂದಿದೆ. ಮೀಸಲಾತಿ ಪಟ್ಟಿ ಆಧಾರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸಂಗೀತಾ ಜಗದೀಶ್ ಪನೆಮಜಲು ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಾರ ಅಭ್ಯರ್ಥಿಯಿಲ್ಲದ ಕಾರಣ ಚುನಾವಣೆಯಿಂದ ಹಿಂದೆ ಸರಿದಿದೆ. ಚುನಾವಣಾ ಅಧಿಕಾರಿಯಾಗಿ […]

Continue Reading

ಮಗು ಅಪಹರಣ ಪ್ರಕರಣ: ದೂರು ಬಂದ ಕೆಲವೇ ಗಂಟೆಯೊಳಗೆ ಪ್ರಕರಣ ಭೇದಿಸಿ, ಮಗುವನ್ನು ಹೆತ್ತವರ ಮಡಿಲು ಸೇರಿಸಿದ ಮಂಗಳೂರು ಪೊಲೀಸರು

ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗು ಅಪಹರಣ ಪ್ರಕರಣವನ್ನು ದೂರು ಬಂದ ಕೆಲವೇ ಗಂಟೆಯೊಳಗೆ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ‘ಆರೋಪಿಯನ್ನು ಕೇರಳ ಎರ್ನಾಕುಳಂ ಜಿಲ್ಲೆಯ ಪರವೂರ್‌ನ ಅನೀಶ್ ಕುಮಾರ್ ( 49) ಎಂದು ಗುರುತಿಸಲಾಗಿದೆ. ಮೂರು ಗಂಡು ಮಕ್ಕಳನ್ನು ಹೊಂದಿರುವ ಆತ ಹೆಣ್ಣು ಮಗು ಸಾಕಬೇಕೆಂಬ ಉದ್ದೇಶದಿಂದ ಮಗುವನ್ನು ಕರೆದುಕೊಂಡು ಹೋಗಿದ್ದೇನೆ’ ಎಂದು ತಿಳಿಸಿದ್ದಾನೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ‘ಅಳಪೆ […]

Continue Reading

ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ನಂಬಿಕೆ ದ್ರೋಹ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ಪುತ್ತಿಲ ಪರಿವಾರ ಸಂಘಟನೆಯ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ನಂಬಿಕೆ ದ್ರೋಹ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಸಾಮೆತ್ತಡ್ಕದ ನಿವಾಸಿ 47 ವರ್ಷದ ಮಹಿಳೆ ಪುತ್ತಿಲ ವಿರುದ್ದ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಿದ್ದಾರೆ. ಕಳೆದ ವರ್ಷ 2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಹೋಟೆಲ್ ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆ ಬಳಿಕ ಬ್ಲಾಕ್ ಮೇಲ್ ಮಾಡಿಕೊಂಡು ಅವರಿರುವ ಪ್ರದೇಶಕ್ಕೆ ಕರೆಸಿಕೊಂಡು ಅವರ ಕೆಲಸ ಮಾಡುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ. […]

Continue Reading

ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೆ

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಉದ್ಯಮ, ಬ್ಯಾಂಕಿಂಗ್ ಕ್ಷೇತ್ರ, ವ್ಯಾಪಾರಿ ಸಂಸ್ಥೆಗಳಲ್ಲಿ ಸ್ಥಳೀಯ ಯುವಜನತೆಯನ್ನು ಹೊರಗಿಡುತ್ತಿರುವ ವಿದ್ಯಮಾನಗಳು ಹಾಗೂ ಈ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಕಡ್ಡಾಯ ಅವಕಾಶಗಳಿಗೆ ನಡೆಸ ಬೇಕಾದ ಪ್ರಯತ್ನಗಳಿಗೆ ಸಂಬಂಧಿಸಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೋ. ಪುರುಷೋತ್ತಮೆ ಬಿಳಿಮಲೆಯವರೊಂದಿಗೆ ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ಚರ್ಚಾಗೋಷ್ಟಿ ನಡೆಸಲಾಯಿತು. ತುಳುನಾಡಿನ ಉದ್ಯಮಗಳಲ್ಲಿ ಸ್ಥಳೀಯರ ಉದ್ಯೋಗದ ಸ್ಥಿತಿಗತಿಗಳ ಕುರಿತಾದ ಆಗ್ರಹ ಪತ್ರವನ್ನು ಪ್ರಾಧಿಕಾರದ ಅಧ್ಯಕ್ಷರಿಗೆ ಸಲ್ಲಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಲವು […]

Continue Reading

ಗುರುಪುರ ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋರಾಟ ಸಮಿತಿ ನಿಯೋಗ ಭೇಟಿ, ಸ್ಥಿತಿಗತಿಗಳ ಮಾಹಿತಿ ಸಂಗ್ರಹ

” ಸರಕಾರಿ ಆಸ್ಪತ್ರೆಗಳನ್ನು ಉಳಿಸಿ ಹೋರಾಟ ಸಮಿತಿ, ಗುರುಪುರ ಹೋಬಳಿ” ಇದರ ಪ್ರಮುಖರ ನಿಯೋಗ ಹೋಬಳಿ ವ್ಯಾಪ್ತಿಯ ಕುಪ್ಪೆಪದವು, ಕೊಂಪದವು, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ಕೇಂದ್ರಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿತು. ಮಂಜೂರಾಗಿರುವ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ನಡೆಯದಿರುವುದು, ಇರುವ ಸಿಬ್ಬಂದಿಗಳಿಗೆ ಒಂದಕ್ಕಿಂತ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ನಿಯೋಜನೆ ಹೊಂದಿರುವುದು, ಕೊರತೆ, ವೈದ್ಯರ ಕೊರತೆಗಳು ಸಮಿತಿಯ ಗಮನಕ್ಕೆ ಬಂದವು. ಇದು ಈಗಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಒತ್ತಡ ಉಂಟುಮಾಡಿರುವುದನ್ನು ಸಮಿತಿ […]

Continue Reading