ಪಂಕ್ಚರ್ ಹೆಸರಲ್ಲಿ ಭಾರತದ ಸಂವಿಧಾನವನ್ನು ಪಂಕ್ಚರ್ ಮಾಡಲು ಹೊರಟವರು –ದ್ವೇಷದ ಹಿನ್ನೆಲೆಯ ವಿಶ್ಲೇಷಣೆ

“ಸಂವಿಧಾನದ ಶಕ್ತಿ ಕಾನೂನಿನಲ್ಲಿ ಮಾತ್ರವಲ್ಲ – ಜನರ ನಂಬಿಕೆಯಲ್ಲಿ ಇರುತ್ತದೆ. ಆ ನಂಬಿಕೆಯನ್ನು ಪಂಕ್ಚರ್ ಮಾಡುವವರನ್ನು ನಾವು ನಿರ್ಬಂಧಿಸಲೇಬೇಕು”. ✍️. ಇಸ್ಮಾಯಿಲ್ ಸುನಾಲ್ ವಕೀಲರು, ಮಂಗಳೂರು ಭಾರತದ ಸಂವಿಧಾನ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ, ಧರ್ಮನಿರಪೇಕ್ಷತೆ, ಸಮಾನತೆ, ನ್ಯಾಯ, ಮತ್ತು ವ್ಯಕ್ತಿಸ್ವಾತಂತ್ರ್ಯದ ಆದರ್ಶಗಳ ತಾಳೆಗಂಬವಾಗಿ ದೇಶವನ್ನು ನಿಲ್ಲಿಸಿದೆ. ಆದರೆ ಇತ್ತೀಚಿನ ಕಾಲದಲ್ಲಿ, ಕೆಲ ರಾಜಕೀಯ ನಾಯಕರ ಹೇಳಿಕೆಗಳು ಮತ್ತು ನಡವಳಿಕೆಗಳು ಈ ತತ್ವಗಳಿಗೆ ಬಿರುಕು ತರುವಂತದ್ದಾಗಿವೆ. ಈ ಹೇಳಿಕೆಗಳು ಕೇವಲ ನಿಲ್ಲದ ವಾಗ್ದಾಳಿ ಅಲ್ಲ, […]

Continue Reading

‘ಮುಲ್ಲಾ’ ಗಳೆಂದು ತೆಗಳಿದರು.. ದೇಶಕ್ಕೆ ಮಾದರಿಯಾಯ್ತು ಉಲಮಾ ಹೋರಾಟ..

ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿ ಬರೆದದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಖಿಲಾಫತ್ ಚಳವಳಿಗೆ ಮುಂಚೂಣಿ ನಾಯಕತ್ವ ನೀಡಿದ್ದೇ ಉಲಮಾಗಳು. ಸಮುದಾಯಕ್ಕೆ ನೇತೃತ್ವ ನೀಡುವ ಉಲಮಾಗಳು ಕರೆದರೆ ಇಲ್ಲಿನ ಮುಸ್ಲಿಂ ಸಮುದಾಯ ಯಾವತ್ತಿಗೂ ಅವರ ಬೆನ್ನಿಗೆ ನಿಂತುಕೊಳ್ಳುತ್ತದೆ. ಏಪ್ರಿಲ್ 18 ರಂದು ಅಡ್ಯಾರ್ ಷಾ ಮೈದಾನದಲ್ಲಿ ಉಲಮಾ ಕೋರ್ಡಿನೇಷನ್ ನೇತೃತ್ವದಲ್ಲಿ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಜರುಗಿದ ಬೃಹತ್ ಪ್ರತಿಭಟನಾ ಹೋರಾಟ ಹಲವಾರು ಪಾಠಗಳನ್ನು ಕರಾವಳಿಗೆ ನೀಡಿದ್ದಂತೂ ಸತ್ಯ. ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ […]

Continue Reading

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಬಿಡದಿಯಲ್ಲಿ ಗುಂಡಿನ ದಾಳಿ

ಘಟನೆ ಹಿಂದೆ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಬಗ್ಗೆ ಅನುಮಾನ. ಪ್ರಕರಣ ದಾಖಲು ಭೂಗತ ದೊರೆ ಮಾಜಿ ಡಾನ್‌ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಬಿಡದಿಯಲ್ಲಿ ರಾತ್ರಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತರಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ […]

Continue Reading

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ 80,000 ಕ್ಕೂ ಅಧಿಕ ‘ರಾಜ್ಯೇತರ ವಿಷಯಗಳಿ’ಗೆ ನಿವಾಸ ಪ್ರಮಾಣಪತ್ರ ನೀಡಲಾಗಿದೆ

ಕಳೆದ ಎರಡು ವರ್ಷಗಳಲ್ಲಿ 83,000 ಕ್ಕೂ ಹೆಚ್ಚು ಜನರು “ರಾಜ್ಯೇತರ ವಿಷಯಗಳಿಗೆ” ನಿವಾಸ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹೇಳಿದೆ. ಪಿಡಿಪಿ ಯ ವಹೀದ್ ಉರ್ ರೆಹಮಾನ್ ಪ್ಯಾರಾಗೆ ನೀಡಿದ ಲಿಖಿತ ಉತ್ತರದಲ್ಲಿ, ಜಮ್ಮು ಮತ್ತು ಕಾಶ್ಮೀರ ದ ಕಂದಾಯ ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ ಇಲಾಖೆಯ ಮೂಲಕ ನೀಡಲಾದ 35,12,184 ನಿವಾಸ ಪ್ರಮಾಣಪತ್ರಗಳಲ್ಲಿ 83,742 ಖಾಯಂ ನಿವಾಸಿಗಳಾಗಿ ಅರ್ಹತೆ ಪಡೆಯದವರಿಗೆ ನೀಡಲಾಗಿದೆ ಎಂದು ಹೇಳಿದೆ. ಗಮನಾರ್ಹವಾಗಿ, ರಾಜ್ಯ-ವಿಷಯಗಳು ಎಂಬ ಪದವು ಜಮ್ಮು […]

Continue Reading

ಭೂ ಸುಧಾರಣೆ ಕಾಯ್ದೆ ಮತ್ತು ಇನಾಂ ರದ್ದತಿ ಕಾಯ್ದೆಯಿಂದಾಗಿ ವಕ್ಫ್ ಕಳೆದು ಕೊಂಡ ಜಾಗವೆಷ್ಟು..? 1.20 ಲಕ್ಷ ಎಕರೆಯಿಂದ 22 ಸಾವಿರ ಎಕರೆಗೆ ಇಳಿದ ವಕ್ಫ್ ಜಾಗ.!

‘ವಕ್ಫ್’ ಷಡ್ಯಂತ್ರ..! ಭಾರತ ಸಂವಿಧಾನದ 25-28 ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದೇಶದ ಪ್ರಜೆಗಳಿಗೆ ಖಾತರಿಪಡಿಸುತ್ತದೆ. ಇದು ದೇಶದ ಎಲ್ಲ ನಾಗರಿಕರಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಹಕ್ಕನ್ನು, ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕನ್ನು, ತಮ್ಮದೇ ಆದ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೀಡುತ್ತದೆ. ಇದರಲ್ಲಿ ’ವಕ್ಫ್’ ಕೂಡ ಸೇರಿದೆ. ಸರಳವಾಗಿ ಹೇಳಬಹುದಾದರೆ ’ವಕ್ಪ್’ ಎಂಬುವುದು ಕೂಡಾ ಮುಸ್ಲಿಮರ ಒಂದು ಧಾರ್ಮಿಕ ಆಚರಣೆ. ’ವಕ್ಫ್’ ಎಂದರೆ, ಒಬ್ಬ ಮುಸ್ಲಿಂ ಅಥವಾ ಒಂದು ಮುಸ್ಲಿಂ ಗುಂಪು […]

Continue Reading

ವಕ್ಫ್ ತಿದ್ದುಪಡಿ ಕಾಯ್ದೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ – ಮುಸ್ಲಿಮರ ನೈತಿಕ ಜಯ

ಸಂವಿಧಾನ, ನ್ಯಾಯ ಹಾಗೂ ನ್ಯಾಯಾಲಗಳ ಮೇಲೆ ಮುಸ್ಲಿಂ ಸಮುದಾಯದ ನಂಬಿಕೆ ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತದ ಸುಪ್ರೀಂ ಕೋರ್ಟ್ ವಕ್ಫ್ (ತಿದ್ದುಪಡಿ) ಕಾಯ್ದೆ, 2023–2025ರ ವಿರುದ್ಧ ಸಲ್ಲಿಸಲಾದ ಹಲವು ವೃತ್ತಿ ಅರ್ಜಿಗಳ ವಿಚಾರಣೆಯಲ್ಲಿ ನೀಡಿರುವ ಮಧ್ಯಂತರ ತಡೆಯಾಜ್ಞೆವು ಭಾರತದಲ್ಲಿನ ಮುಸ್ಲಿಂ ಸಮುದಾಯಕ್ಕೆ ಒಂದು ನೈತಿಕ ಜಯ ಹಾಗೂ ನ್ಯಾಯದತ್ತ ನಂಬಿಕೆಗೆ ಹೊಸ ಬೆಳಕು ಮೂಡಿಸಿದೆ. ಈ ಆದೇಶವು ಕೇವಲ ಕಾನೂನು ತಾತ್ಕಾಲಿಕ ತಡೆಯಾಗಿ ಮಾತ್ರವಲ್ಲದೆ, ಧಾರ್ಮಿಕ ಸ್ವಾತಂತ್ರ್ಯ, ಆಸ್ತಿಯ ರಕ್ಷಣಾ ಹಕ್ಕುಗಳು ಮತ್ತು ಸಂಸ್ಥೆಗಳ […]

Continue Reading

ವಾಹನಗಳ ಮೇಲೆ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುವುದು ನಿಷಿದ್ಧ – ಕಾನೂನು ಮಾಹಿತಿ

ರಾಷ್ಟ್ರಧ್ವಜವನ್ನು ಅವಮಾನಿಸುವ, ಅಥವಾ ಅದರ ಬಳಕೆಯಲ್ಲಿ ತಪ್ಪು ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತೀಯ ರಾಷ್ಟ್ರಧ್ವಜ — ತ್ರಿವರ್ಣ ಧ್ವಜ — ದೇಶದ ಸ್ವಾಭಿಮಾನ, ಅಖಂಡತೆ ಮತ್ತು ಗೌರವವನ್ನು ಪ್ರತಿನಿಧಿಸುವ ಅತ್ಯುನ್ನತ ಚಿಹ್ನೆ. ಈ ಧ್ವಜವನ್ನು ಗೌರವದಿಂದ ಬಳಸುವ ನಿಯಮಗಳನ್ನು ರೂಪಿಸಲು ಭಾರತ ಸರ್ಕಾರ 2002ರಲ್ಲಿ ಭಾರತೀಯ ಧ್ವಜ ಸಂಹಿತೆ (Flag Code of India) ಅನ್ನು ಜಾರಿಗೆ ತಂದಿದೆ. ಈ ಸಂಹಿತೆ, ಧ್ವಜದ ಸರಿಯಾದ ಬಳಕೆ, ಪ್ರದರ್ಶನ ಮತ್ತು […]

Continue Reading

ರಾಜ್ಯಗಳು ವಕ್ಫ್ ಕಾನೂನನ್ನು ಜಾರಿಗೆ ತರಲು ನಿರಾಕರಿಸುವಂತಿಲ್ಲ.

ಕೇಂದ್ರದ ಯಾವುದೇ ಕಾನೂನನ್ನು ಪಾಲಿಸದಿರುವುದು ಸಂವಿಧಾನದ ವೈಫಲ್ಯವೆಂದು ಪರಿಗಣಿಸಲಾಗುತ್ತದೆ. ಭಾರತಾದ್ಯಂತ ವಕ್ಫ್ ಕಾಯಿದೆಯ ಬಗ್ಗೆ ಬಹಳ ಜೋರಾದ ಚರ್ಚೆ ನಡೆಯುತ್ತಿದೆ. ಸಮಾಜದ ವಿವಿಧ ಸಮುದಾಯಗಳ ಒಳಗೆ ವಾದ-ವಿವಾದಗಳು ಜೋರಾಗಿವೆ. ಕಾರಣ, ಕೇಂದ್ರ ಸರ್ಕಾರ 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು. ಈಗಾಗಲೇ ತಿದ್ದುಪಡಿಯೂ ಆಗಿ, ಲೋಕಸಭೆ, ರಾಜ್ಯಸಭೆಯಲ್ಲಿ ಅಂಗಿಕಾರಗೊಂಡು, ರಾಷ್ಟ್ರಪತಿಗಳ ಅಂಕಿತವೂ ಆಗಿ ಕಾಯ್ದೆಯಾಗಿ ಜಾರಿಯಾಗಿದೆ. ಕಳೆದ ಏಪ್ರಿಲ್ 3ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಏ. 4ರಂದು ರಾಜ್ಯಸಭೆಯಲ್ಲಿ ಪಾಸ್‌ ಆಗಿದೆ. ಬಳಿಕ ರಾಷ್ಟ್ರಪತಿ […]

Continue Reading

ಸಿವಿಲ್‌ ಪ್ರಕರಣಗಳಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ತಪ್ಪು, ಈ ನಡೆ ಸ್ವೀಕಾರಾರ್ಹವಲ್ಲ

ಉ.ಪ್ರದೇಶ ಪೊಲೀಸರಿಗೆ 50 ಸಾವಿರ ದಂಡ ವಿಧಿಸಿದ ಸುಪ್ರೀಂಕೋರ್ಟ್ ಸಿವಿಲ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ ಕಾರಣಕ್ಕೆ ಉತ್ತರ ಪ್ರದೇಶದ ಇಬ್ಬರು ‍ಪೊಲೀಸ್‌ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ರೂಪಾಯಿ 50 ಸಾವಿರ ದಂಡ ವಿಧಿಸಿದೆ. ಸಿಜೆಐ ಸಂಜೀವ್‌ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದ್ದು, ಸಿವಿಲ್‌ ಪ್ರಕರಣಗಳಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ತಪ್ಪು, ಈ ನಡೆ ಸ್ವೀಕಾರಾರ್ಹವಲ್ಲ ಎಂದಿದೆ. ಅಲ್ಲದೇ, ಸಿವಿಲ್‌ ಪ್ರಕರಣಗಳನ್ನು ಕ್ರಿಮಿನಲ್‌ ಪ್ರಕರಣಗಳನ್ನಾಗಿ […]

Continue Reading

ಯೋಗಿ ನಾಡಿನಲ್ಲಿ ಭಾವಿ ಪತಿಯೆದುರೇ ಎಂಟು ಮಂದಿ ದುಷ್ಕರ್ಮಿಗಳಿಂದ ಯುವತಿಯ ಸಾಮೂಹಿಕ ಅತ್ಯಾಚಾರ

ಬಿಜೆಪಿ ಮುಖಂಡ ಸೇರಿ ಎಂಟು ಮಂದಿ ಆರೋಪಿಗಳ ಬಂಧನ ಯುವತಿಯೊಬ್ಬಳನ್ನು ಆಕೆಯ ಭಾವಿ ಪತಿಯೆದುರೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ಯೋಗಿ ಅಧಿತ್ಯನಾಥ್ ರಾಜ್ಯಭಾರ ಮಾಡುತ್ತಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಭಾವಿ ಗಂಡನ ಎದುರೇ ಯುವತಿಯನ್ನು ಬಿಜೆಪಿ ಮುಖಂಡನ ಸಹಿತ ಎಂಟು ಮಂದಿಯ ದುಷ್ಕರ್ಮಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ಥ ಯುವತಿ ಮತ್ತು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ […]

Continue Reading