ಗುರುಪುರ ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋರಾಟ ಸಮಿತಿ ನಿಯೋಗ ಭೇಟಿ, ಸ್ಥಿತಿಗತಿಗಳ ಮಾಹಿತಿ ಸಂಗ್ರಹ

” ಸರಕಾರಿ ಆಸ್ಪತ್ರೆಗಳನ್ನು ಉಳಿಸಿ ಹೋರಾಟ ಸಮಿತಿ, ಗುರುಪುರ ಹೋಬಳಿ” ಇದರ ಪ್ರಮುಖರ ನಿಯೋಗ ಹೋಬಳಿ ವ್ಯಾಪ್ತಿಯ ಕುಪ್ಪೆಪದವು, ಕೊಂಪದವು, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ಕೇಂದ್ರಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿತು. ಮಂಜೂರಾಗಿರುವ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ನಡೆಯದಿರುವುದು, ಇರುವ ಸಿಬ್ಬಂದಿಗಳಿಗೆ ಒಂದಕ್ಕಿಂತ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ನಿಯೋಜನೆ ಹೊಂದಿರುವುದು, ಕೊರತೆ, ವೈದ್ಯರ ಕೊರತೆಗಳು ಸಮಿತಿಯ ಗಮನಕ್ಕೆ ಬಂದವು. ಇದು ಈಗಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಒತ್ತಡ ಉಂಟುಮಾಡಿರುವುದನ್ನು ಸಮಿತಿ […]

Continue Reading

ಮೆಲ್ಕಾರ್-ಮುಡಿಪು ಹೆದ್ದಾರಿಯ ಮಾರ್ನಬೈಲು ಬಳಿ ಲಾರಿ ಮತ್ತು ಕಾರು ಮುಖಾಮುಖಿಯಾಗಿ; ಚಾಲಕನ ಸ್ಥಿತಿ ಗಂಭೀರ

ಮೆಲ್ಕಾರ್-ಮುಡಿಪು ಹೆದ್ದಾರಿಯ ಮಾರ್ನಬೈಲು ಬಳಿ ಲಾರಿ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಗುರುತು ಹಚ್ಚಲಾರದಷ್ಟು ಜಖಂಗೊಂಡ ಕಾರು ಚಾಲಕನ ಸ್ಥಿತಿ ಗಂಭೀರ. ಸಜಿಪ ಎಂಬಲ್ಲಿ ಅಂಗಡಿ ಹೊಂದಿರುವ ಬೋಳಂಗಡಿ ಮುಸ್ತಫಾ ಎಂಬವರು ಚಲಾಯಿಸುತ್ತಿದ್ದ ಕ್ರೆಟಾ ಕಾರಿಗೆ ಮಾರ್ನಬೈಲು ಎಂಬಲ್ಲಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು ಗಾಯಾಳುವನ್ನು ತಕ್ಷಣವೇ ಸ್ಥಳೀಯರು ಮಂಗಳೂರಿನ ಹೈಲೇಂಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

Continue Reading

ವಿದ್ಯಾಭ್ಯಾಸದ ನೆಪವೊಡ್ಡಿ, ಮನೆಯವರನ್ನು ನಂಬಿಸಿ ವಿದೇಶ ನಾಟಕ.! ಅನ್ಯಕೋಮಿನ ಯುವಕನೊಂದಿಗೆ ಸಿಕ್ಕಿಬಿದ್ದ ಯುವತಿ

ಸವಣೂರಿನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಹರೆಯದ ಯುವತಿ ದೀಕ್ಷಾ ಮನೆಯವರನ್ನು ನಂಬಿಸಿ ಕಳೆದ ಆಗಸ್ಟ್ 25 ರಂದು ಮನೆ ಬಿಟ್ಟಿದ್ದಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನನ್ನು ಹೊಂದಿರುವ ಮೂರು ಮಕ್ಕಳ ಪೋಷಕರಾಗಿರುವ ದೀಕ್ಷಾ ತಂದೆ ತಾಯಿ ಅವಿದ್ಯಾವಂತರಾದ ಕಾರಣ ಮಗಳು ಹೇಳುವ ಕತೆಯನ್ನು ನಿಜವೆಂದೇ ನಂಬಿದ್ದರು. ತನ್ನ ಜೊತೆ ಕಲಿತ ಇಬ್ಬರು ಸ್ನೇಹಿತೆಯರು ಬೆಂಗಳೂರಿನಲ್ಲಿದ್ದು, ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತನ್ನನ್ನು ಬೀಳ್ಕೊಡಲು ಬಂದಿರುವುದಾಗಿಯೂ […]

Continue Reading

ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ನೀಡಿಯೇ ಸ್ವಾಧೀನ ಮಾಡಿ; ಸರಕಾರಕ್ಕೆ ಹೈಕೋರ್ಟ್ ಖಡಕ್ ತಾಕೀತು

ಏಕ ನಿವೇಶನಕ್ಕೆ ಅನುಮೋದನೆ ನೀಡುವಾಗ ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ನೀಡಿಯೇ ಸ್ವಾಧೀನ ಮಾಡಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಖಡಕ್ ತಾಕೀತು ಮಾಡಿದೆ. ಏಕ ನಿವೇಶನವನ್ನು ಮಂಜೂರು ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಇಲಾಖೆಗಳು ರಸ್ತೆ ವಿಸ್ತರಣೆಗೆ ಉಚಿತವಾಗಿ ಜಮೀನು ಕೊಡಬೇಕು ಎಂದು ಆದೇಶ ನೀಡುವುದು ಸಮರ್ಪಕವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಅವರಿದ್ದ ಏಕಸದಸ್ಯ ಪೀಠದಿಂದ ತೀರ್ಪು ನೀಡಲಾಗಿದೆ. ರಸ್ತೆ ವಿಸ್ತರಣೆಗಾಗಿ ನಿಗದಿಪಡಿಸಲಾದ ಜಮೀನನ್ನು ಸೂಕ್ತ ಪರಿಹಾರ ನೀಡಿ […]

Continue Reading

ಉಪ್ಪಿನಂಗಡಿ: ಇಂದ್ರಪ್ರಸ್ಥ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್‌ ಮುಝಾಮಿಲ್‌ ಕರ್ವೇಲ್ ರಾಷ್ಟ್ರೀಯ ಆಹಾರ ತಂತ್ರಜ್ಞಾನ (NIFTEM) ಸಂಸ್ಥೆಗೆ ಆಯ್ಕೆ

ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಬ್ಯಾಸ ಮಾಡಿರುವ ಕರ್ವೇಲ್ ನಿವಾಸಿ ಮಹಮ್ಮದ್‌ ಮುಝಾಮಿಲ್‌ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಗೆ (NIFTEM) ಆಯ್ಕೆಯಾಗಿದ್ದಾರೆ. ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮ ಶೀಲತೆ ಮತ್ತು ಉದ್ಯೋಗ (NIFT) ದೇಶದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಇದು ಭಾರತ ಸರಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿರುವ ಪ್ರಮುಖ ಸಂಸ್ಥೆಯಾಗಿದೆ. ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ದೇಶದ ಹಲವಾರು ಪ್ರತಿಷ್ಠಿತ ಶಿಕ್ಷಣ […]

Continue Reading

ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಒದೆ ತಿಂದ ಡ್ರಗ್ಸ್ ಪೆಡ್ಲರ್ ಸಮದ್ ಪರಾರಿ.!

ವಿಟ್ಲ ಠಾಣಾ ವ್ಯಾಪ್ತಿಯ ಉರಿಮಜಲು ಪರಿಸರದಲ್ಲಿ ಕಳೆದ ಕೆಲ ಸಮಯಗಳಿಂದ ಗಾಂಜಾ, ಎಂಡಿಎಂಎ ಮಾದಕ ದ್ರವ್ಯಗಳ ನಶೆಯಲ್ಲಿ ತೂರಾಡುತ್ತಿರುವ ಕೆಲ ಪುಂಡರು ಹಲ್ಲೆ-ಗಲಾಟೆ ನಡೆಸುತ್ತಾ ಸಾರ್ವಜನಿಕರ ಪಾಲಿಗೆ ಕಂಠಕರಾಗಿದ್ದರು. ಅಶಾಂತಿಗೆ ಕಾರಣವಾಗುವ ಯುವಕರಿಗೆ ಡ್ರಗ್ಸ್ ವಿತರಣೆ ಮಾಡುವುದು ಯಾರೆಂಬ ಬಗ್ಗೆ ಸ್ಥಳೀಯರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಳಕೆಮಜಲು ಫ್ಲ್ಯಾಟ್ ನಲ್ಲಿರುವ ಮಾಜಿ ಬಸ್ ಚಾಲಕ ಸಮದ್ ಎಂಬವನನ್ನು ಗುರುವಾರ ಮುಸ್ಸಂಜೆ ಸ್ಥಳೀಯ ಯುವಕರ ತಂಡ ಉರಿಮಜಲು ಜಂಕ್ಷನ್ ಗೆ ಆಕ್ಟಿವಾದಲ್ಲಿ […]

Continue Reading

ವ್ಯಾಪಾರದಲ್ಲಿ ಲಾಭ ನೀಡುತ್ತೇನೆ ಎಂದು ನಂಬಿಸಿ, ಲಕ್ಷಾಂತರ ರೂ. ಪಡೆದು ಮುಡಿಪು ನಿವಾಸಿ ಸಿದ್ದೀಕ್ ಪರಾರಿ. ದೂರು ದಾಖಲು

ವಿಟ್ಲ: ಬಿಸಿನೆಸ್ ನಲ್ಲಿ ಲಾಭ ನೀಡುತ್ತೇನೆ ಎಂದು ಅಮಾಯಕ ಯುವಕನನ್ನು ನಂಬಿಸಿ ಆತನಿಂತ ಲಕ್ಷಾಂತರ ರೂ. ಪಡೆದು ಇದೀಗ ಅಸಾಮಿ ಪರಾರಿಯಾಗಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಾಲೆತ್ತೂರು ನಿವಾಸಿ ಆಸೀಫ್ ಎಂಬಾತನಿಗೆ ಈ ಹಿಂದೆ ವಿದೇಶದಲ್ಲಿದ್ದ ವೇಳೆ ಸಿದ್ದೀಕ್ ವಿದ್ಯಾನಗರ ಮುಡಿಪು ಎಂಬಾತನ ಪರಿಚಯವಾಗುತ್ತದೆ. ಬಳಿಕ ಆತನ ಜತೆ ಆತ್ಮೀಯತೆಯಿಂದ ಒಡನಾಟ ಇಟ್ಟುಕೊಂಡಿರುತ್ತಾನೆ. ಬಳಿಕ ಆಸೀಫ್ ಊರಿಗೆ ಬಂದಿದ್ದು, ತದ ಬಳಿಕ ಅಸಾಮಿ ಸಿದ್ದೀಕ್ ವಿದ್ಯಾ ನಗರ ಕೂಡ ಊರಿಗೆ ಬಂದು, […]

Continue Reading

ಮಠಂದೂರು ಶಿಷ್ಯ ಫುಲ್ ಟೈಮ್ ರಾಜಕಾರಣಕ್ಕೆ..ಪುತ್ತಿಲ ಪರಿವಾರದಲ್ಲಿ ಶುರುವಾಯ್ತು ಢವ ಢವ..!

ವಿರೋಧಿಗಳ ಸೈಲೆಂಟ್ ಗೇಮ್ ಗೆ ಬಲಿಯಾದ್ರ ಪುತ್ತಿಲ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಇಮೇಜ್, ಶಕ್ತಿ ಇರುವುದು ಪುತ್ತೂರಿನಲ್ಲಿ. ಕಾರ್ಯಕರ್ತರ ದೊಡ್ಡ ದಂಡೇ ಇದೆ. ಅಂತಹ ಪುತ್ತೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಕಾಂಗ್ರೆಸ್ ವಿಜಯ ದುಂದುಭಿ ಬಾರಿಸಿತ್ತು. ಅದಕ್ಕೆಲ್ಲ ಕಾರಣವಾಗಿದ್ದು ಒಂದೇ ಒಂದು ಹೆಸರು. ಡೈನಾಮಿಕ್ ಇಮೇಜಿನ ಅರುಣ್ ಕುಮಾರ್ ಪುತ್ತಿಲ. ಒಂದು ಕಾರು ಅಲುಗಾಟದಿಂದ ರಾಜ್ಯಾಧ್ಯಕ್ಷ, ಸಂಸದ ಸ್ಥಾನವೂ ಹೊರಟು ಹೋಗಿತ್ತು. ಪುತ್ತಿಲ ಪರಿವಾರದ ಕಾರ್ಯಕರ್ತರ ಹವಾ ಆ […]

Continue Reading

ಎಂ.ಎಲ್.ಸಿ.ಐವನ್ ಡಿಸೋಜಾ ಮನೆಗೆ ಕಲ್ಲುತೂರಾಟ ಪ್ರಕರಣ; ಇಬ್ಬರು ಬಜರಂಗಿಗಳು ಅಂದರ್.

ರಾಜ್ಯಪಾಲರ ಮನೆಗೆ ನುಗ್ಗಿ ಬೇಕಾದೀತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ, ಎಂ.ಎಲ್.ಸಿ.ಐವನ್ ಡಿಸೋಜಾ ಮನೆಗೆ ತಡರಾತ್ರಿ ಕಲ್ಲುತೂರಾಟ ನಡೆಸಿ ಹಾನಿಗೊಳಿಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರಾಯಣ ಕೋಡಿ ನಿವಾಸಿ ರಾಘವ ಭಂಡಾರಿ ಪುತ್ರ ಭರತ್ ಯಾನೆ ರಕ್ಷಿತ್ ಮತ್ತು ಕೊಳ್ನಾಡು ಗ್ರಾಮದ ಕುಡ್ತಮುಗೇರು ಪರ್ತಿಪ್ಪಾಡಿ ನಿವಾಸಿ ಆನಂದ ಪೂಜಾರಿ ಪುತ್ರ ದಿನೇಶ್ ಬಂಧಿತ ಆರೋಪಿಗಳು. ರಾಜ್ಯಪಾಲರ ಮನೆಗೆ ನುಗ್ಗುತ್ತೇವೆಂದು ಐವಾನ್ ನೀಡಿರುವ ಹೇಳಿಕೆಯಿಂದ ಆಕ್ರೋಶಗೊಂಡು ರಾತ್ರಿ […]

Continue Reading

ಮಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆ ಡರೋಡೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನ; ಚಿನ್ನ, ನಗದು ವಶ

ಬಂಧಿತರ ಸಂಖ್ಯೆ 13 ಕ್ಕೆ ಏರಿಕೆ.. ಇನ್ನು ಮೂವರ ಬಂಧನ ಬಾಕಿಯಿದೆ ಜೂನ್ 21 ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟುವಿನಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ರ ಮನೆಗೆ ರಾತ್ರಿ 8 ಗಂಟೆಯ ಸುಮಾರಿಗೆ ಮುಸುಕುಧಾರಿಗಳು ಮನೆಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ನಡೆಸಿ ನಗದು, ಚಿನ್ನ ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೇರಿದೆ. ಕೇರಳ ತ್ರಿಶೂರ್ ನಿವಾಸಿಗಳಾದ ಡೆವಿನ್, ಗಾಡ್ವಿನ್, […]

Continue Reading