ಸಿಸಿ, ಒಸಿ ಇಲ್ಲದ ಕಟ್ಟಡ ಮಾಲಕರು ಕತ್ತಲಲ್ಲಿ.! ಸುಪ್ರೀಂಕೋರ್ಟ್‌ನ ಆದೇಶವು ಸರ್ಕಾರದ ಕೈಕಟ್ಟಿ ಹಾಕಿದೆ

ಸ್ವಾಧೀನಾನುಭವ ಪತ್ರ ಮತ್ತು ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರ ಇಲ್ಲದೆ 1,200 ಚದರ ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟು ನಿರ್ಮಿಸಿರುವ 4.30 ಲಕ್ಷಕ್ಕೂ ಹೆಚ್ಚಿನ ಮನೆ ಮಾಲೀಕರು ವಿದ್ಯುತ್ ಸೌಲಭ್ಯ ಸಿಗದೆ ಕತ್ತಲಲ್ಲೇ ಬದುಕು ಸವೆಸುವ ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ, ನೀರಿನ ಸೌಲಭ್ಯವೂ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ತಲೆದೋರಿದೆ. ಈ ನಡುವೆ, ಸರ್ಕಾರವು ಕಾನೂನು ಕಟ್ಟಳೆ ಮೀರದೆ ಸಿಸಿ, ಒಸಿ ಇಲ್ಲದ ಮನೆಗಳಿಗೆ ಯಾವ ರೀತಿಯಲ್ಲಿ ಮೂಲಸೌಲಭ್ಯ ಕಲ್ಪಿಸಬೇಕೆಂಬ ಇಕ್ಕಟ್ಟಿಗೆ ಸಿಲುಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಧಿಕಾರಿಗಳ […]

Continue Reading

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸರಣಿ ಸಾವು ಹಿನ್ನೆಲೆ; ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್, ಎಲ್ಲಾ ಬ್ರ್ಯಾಂಡ್ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಸಂಗ್ರಹ

ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸರಣಿ ಸಾವು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಎಲ್ಲಾ ಬ್ರ್ಯಾಂಡ್ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಸಂಗ್ರಹಕ್ಕೆ ಮುಂದಾಗಿದೆ. ಔಷಧ ನಿಯಂತ್ರಣ ಹಾಗೂ ಸರಬರಾಜು ಇಲಾಖೆ ಕಾಫ್ ಸಿರಪ್ ಗಳ ಟೆಸ್ಟ್ ಮಾಡಲು ಮುಂದಾಗಿದ್ದು, ರಾಜ್ಯದ ಎಲ್ಲೆಡೆ ಕಾಫ್ ಸಿರಪ್ ಗಳ ಸ್ಯಾಂಪಲ್ಸ್ ಪಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಕೆಮ್ಮಿನ ಸಿರಪ್‌ಗಳಿಂದಾಗಿ ಹೊರ ರಾಜ್ಯಗಳ 12 ಮಕ್ಕಳು ಸಾವನ್ನಪ್ಪಿದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ […]

Continue Reading

ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ವರ್ಷಾರಂಭದ ಬಳಿಕ ಚುನಾವಣೆ ಯೋಗ.!

ಜಿ.ಪಂ, ತಾ.ಪಂಗಳಿಗೆ ಜನಪ್ರತಿನಿಧಿಗಳೇ ಇಲ್ಲದೆ ಕಳೆದ ಒಂದು ಅವಧಿ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ವರ್ಷಾರಂಭದ ಬಳಿಕ ಚುನಾವಣೆ ಯೋಗ ಕೂಡಿಬರುವ ಭರವಸೆ ಮೂಡಿದೆ. ಮುಂದಿನ ವರ್ಷ ಸ್ಥಳೀಯ ಚುನಾವಣೆ ಹಬ್ಬದ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ತಯಾರಿ ಶುರುವಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳು, 185 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸರಣಿಯಾಗಿ ಚುನಾವಣೆ ಪರ್ವ ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿವೆ. ಸಕಾಲಕ್ಕೆ ಚುನಾವಣೆ ನಡೆಸಬೇಕಾದ ಸಂವಿಧಾನಿಕ ಹೊಣೆಗಾರಿಕೆ ನಡುವೆಯೂ ನಾನಾ ನೆಪ, […]

Continue Reading

ನಕಲಿ ವೈದ್ಯನ ಯಡವಟ್ಟು, ಹೈ ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಎಂಟು ವರ್ಷದ ಬಾಲಕಿ ಸಾವು, ವೈದ್ಯ ನಾಪತ್ತೆ.

ನಕಲಿ ವೈದ್ಯರ ದಂಧೆ ಮತ್ತು ಅವರ ಅವೈಜ್ಞಾನಿಕ ಚಿಕಿತ್ಸೆಗಳು ಗ್ರಾಮೀಣ ಪ್ರದೇಶದ ಅಮಾಯಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದಕ್ಕೆ ಮತ್ತೊಂದು ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ಮಾಲೂರಿನಲ್ಲಿರುವ ನಕಲಿ ಕ್ಲಿನಿಕ್‌ನ ವೈದ್ಯನ ಯಡವಟ್ಟಿನಿಂದಾಗಿ 8 ವರ್ಷದ ಬಾಲಕಿ ತೀವ್ರವಾಗಿ ನರಳಾಡಿ ಮೃತಪಟ್ಟಿದ್ದಾಳೆ. ಈ ಘಟನೆ ಸಂಬಂಧ ಆಕ್ರೋಶಗೊಂಡಿರುವ ಪೋಷಕರು ನಕಲಿ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಲೂರು ತಾಲೂಕಿನ ದೊಡ್ಡ ಇಗಲೂರು ಗ್ರಾಮದ ನಿವಾಸಿಗಳಾದ ತಾನವಿ (8) ಎಂಬ ಬಾಲಕಿಯೇ ದುರ್ಘಟನೆಯಲ್ಲಿ ಮೃತಪಟ್ಟ […]

Continue Reading

ಅಪ್ರಾಪ್ತೆಯೊಂದಿಗಿನ ಲೈಂಗಿಕ ಸುಖಕ್ಕೆ ಲಕ್ಷ, ಲಕ್ಷ ಡಿಮ್ಯಾಂಡ್. ಪೊಲೀಸರ ಗುಪ್ತ ಕಾರ್ಯಾಚರಣೆ, ವೇಶ್ಯಾವಾಟಿಕೆಗೆ ತಳ್ಳುವ ಗ್ಯಾಂಗ್ ಅಂದರ್

ರಾಜ್ಯವೇ ಬೆಚ್ಚಿ ಬೀಳಿಸುವ ಹೀನಾತಿ ಕೃತ್ಯ. ಅಪ್ರಾಪ್ತೆಯೊಂದಿಗಿನ ಲೈಂಗಿಕ ಸುಖಕ್ಕೆ ಇಪ್ಪತ್ತು ಲಕ್ಷಕ್ಕೆ ಡಿಮ್ಯಾಂಡ್. ಇಡೀ ಪ್ರಕರಣವನ್ನು ಬೇಧಿಸುವಲ್ಲಿ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ಗುಪ್ತ ಕಾರ್ಯಾಚರಣೆ ನಡೆಸಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಂತ ಪಿಂಪ್ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮಹಿಳೆ ಮತ್ತು ಪುರುಷರೊಬ್ಬರನ್ನು ಘಟನೆ ಸಂಬಂಧ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಮೂಲದ ಶೋಭಾ, ತುಳಸಿಕುಮಾರ್ ಎಂಬವರನ್ನು ಬಂಧಿಸಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಠಾಣೆಯ […]

Continue Reading

ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ, ಸಿದ್ದು ಸಂಪುಟಕ್ಕೆ ಇವರೆಲ್ಲ ಸೇರಲಿದ್ದಾರೆ.

ಬಿಜೆಪಿ-ಆರೆಸ್ಸೆಸ್ ನಲ್ಲಿ ಹೊಸ ಕೂಗು ✍️. ಅರ್.ಟಿ.ವಿಠ್ಠಲಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ.ದಿಲ್ಲಿಯಿಂದ ಬರುತ್ತಿರುವ ವರ್ತಮಾನಗಳ ಪ್ರಕಾರ ಸಂಪುಟದಲ್ಲಿರುವ ಹದಿನೈದಕ್ಕೂ ಹೆಚ್ಚು ಮಂತ್ರಿಗಳು ಪಕ್ಷದ ಕೆಲಸಕ್ಕೆ ನಿಯೋಜಿತರಾಗಿ,ಅಷ್ಟೇ ಮಂದಿ ಶಾಸಕರು ಮಂತ್ರಿಗಳಾಗಲಿದ್ದಾರೆ.ಅಂದ ಹಾಗೆ ಇದುವರೆಗೆ ಮಂತ್ರಿ ಮಂಡಲ ಪುನರ್ರಚನೆಯ ವಿಷಯವನ್ನು ಅಧಿಕಾರ ಹಂಚಿಕೆಗೆ ತಳುಕು ಹಾಕಲಾಗುತ್ತಿತ್ತು. ಅರ್ಥಾತ್, ಎರಡೂವರೆ ವರ್ಷ ಕಳೆದ ನಂತರ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.ಅವರ ಜಾಗಕ್ಕೆ ಬೇರೆಯವರು ಬಂದ ಕಾಲಕ್ಕೆ ಸಂಪುಟ ಪುನರ್ರಚನೆ ಕಾರ್ಯ ನಡೆಯಲಿದೆ ಎಂಬ‌ ಮಾತು […]

Continue Reading

‘ಮಾರ್ವಾಡಿ’ ಗೂಂಡಾಗಿರಿ.!

ಸ್ಥಳೀಯ ನಾಗರೀಕರ ಮೇಲೆಯೇ ರೋಷಾ ವೇಷ, ಗೂಂಡಾಗಿರಿ ತೋರ್ಪಡಿಸುವ ಮಾರ್ವಾಡಿಗಳ ದಬ್ಬಾಳಿಕೆಗೆ ಮುಕ್ತಿ ಯಾವಾಗ.? ಇಲ್ಲಿನ ನೆಲ, ಜಲ ಉಪಯೋಗಿಸಿ ಇಲ್ಲಿಯೇ ವ್ಯವಹಾರ ಮಾಡಿ ಇಲ್ಲಿನ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುತ್ತಾ ಗೂಂಡಾಗಿರಿ ಪ್ರದರ್ಶಿಸುವ ಮಾರ್ವಾಡಿಗಳ ಆಟಾಟೋಪ ಜಾಸ್ತಿಯಾಗಿದೆ. ಗುಜರಾತ್, ಉತ್ತರ ಭಾರತ ಮೊದಲಾದ ಕಡೆಯಿಂದ ವ್ಯವಹಾರಕ್ಕೆ ಬಂದು ಇಲ್ಲಿಯೇ ಸೆಟ್ಲ್ ಆಗಿ ಸ್ಥಳೀಯ ನಾಗರೀಕರ ಮೇಲೆಯೇ ರೋಷಾ ವೇಷ ತೋರ್ಪಡಿಸುವ ಮಾರ್ವಾಡಿಗಳ ದಬ್ಬಾಳಿಕೆಗೆ ಮುಕ್ತಿ ಯಾವಾಗ.? ಬೆಂಗಳೂರು, ಮಂಗಳೂರು ನಂತಹ ಮಹಾನಗರಗಳಲ್ಲಿ ವ್ಯಾಪಾರದಲ್ಲಿ ಮಾರ್ವಾಡಿಗಳದ್ದೇ ರಾಜ […]

Continue Reading

ಹೊಸ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸ್ವೀಕಾರ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡುವುದಿಲ್ಲ: ಸಚಿವ ಕೆ.ಎಚ್ ಮುನಿಯಪ್ಪ

ಹೊಸ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸ್ವೀಕಾರ, ವಿತರಣೆ ಪ್ರಕ್ರಿಯೆ ತಿಂಗಳಲ್ಲಿ ಆರಂಭಿಸಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಕೆ. ಎಚ್‌.ಮುನಿಯಪ್ಪ ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ 13 ಲಕ್ಷ ಅನರ್ಹ ಕಾರ್ಡುಗಳನ್ನು ಹುಡುಕಿ, ಪಟ್ಟಿ ಸಿದಪಡಿಸಿದೇವೆ. ಅನರ್ಹ ಬಿಪಿಎಲ್ ಕಾರ್ಡುದಾರರಿದ್ದರೆ ಮುಂದೆ ಬಂದು ಕಾರ್ಡುಗಳನ್ನು ಎಪಿಎಲ್ ಮಾಡಿಸಬೇಕು. ಇದರಿಂದ ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾರ್ಡುಗಳನ್ನು ರದ್ದು ಮಾಡುವುದಿಲ್ಲ. ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್ ಗಳು ರಾಜ್ಯದಲ್ಲಿವೆ. ಈ ಪೈಕಿ […]

Continue Reading

ಬಿಜೆಪಿ ಶೀತಲ ಸಮರಕ್ಕೆ ಬ್ರೇಕ್ ಹಾಕಲು ಮುಂದಾದ ಬಿಜೆಪಿ ಹೈಕಮಾಂಡ್.. ಹಾರ್ಡ್ ಕೋರ್ ಹಿಂದುತ್ವವಾದಿ ಯತ್ನಾಳ್ ಮರಳಿ ಬಿಜೆಪಿ ಸೇರ್ಪಡೆಗೆ ರಂಗ ಸಜ್ಜು.!

ಮೋದಿ -ಶಾ ಕೊಟ್ಟ ಟಾಸ್ಕ್ ಏನಿದು.? ರಾಜ್ಯದಲ್ಲಿ ಬಿಜೆಪಿ ಮೂರು ಹೋಳಾಗಿದೆ. ಮನೆಯೊಂದು ಮೂರು ಬಾಗಿಲು ಅನ್ನುವಂತೆ ಬಿಜೆಪಿ ನಾಯಕರೊಳಗೆ ನಡೆಯುತ್ತಿರುವ ಹಗ್ಗಜಗ್ಗಾಟ ಕೇಂದ್ರದ ಬಿಜೆಪಿ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 2028 ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಬೇಕಾದರೆ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಬಿಜೆಪಿ ಹೈಕಮಾಂಡ್ ಕಸರತ್ತು ಆರಂಭಿಸಿದೆ. ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಚ್ಚಾಟದ ಲಾಭ ಪಡೆಯಲು ಬಿಜೆಪಿ ಯಶಸ್ವಿಯಾಗುತ್ತಿಲ್ಲ ಅನ್ನುವುದು ಕೇಂದ್ರದ […]

Continue Reading

ಬೆಂಗಳೂರಿನೊಳಗೆ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲವೇ.?

ರಾಜಧಾನಿ ಬೆಂಗಳೂರಿನ ರಸ್ತೆಗಳು ಮತ್ತು ವಾಹನ ಸಂಚಾರದಟ್ಟನೆ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದು, ಈ ಸಮಸ್ಯೆಗಳೆಲ್ಲ ಬಗೆಹರಿಯಬೇಕೆಂದರೆ ನಗರದೊಳಗೆ ನಡುವಿನಲ್ಲಿ ಸರ್ಕಾರಿ ಆಡಳಿತ ಇಲಾಖೆಗಳು ಸೇರಿದಂತೆ ಆರೋಗ್ಯ, ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ನಂತಹ ಮಹತ್ವಪೂರ್ಣ ಕ್ಷೇತ್ರಗಳಿಗೆ ಮಾತ್ರ ಅವಕಾಶ ನೀಡುವುದರ ಮೂಲಕ ಬೆಂಗಳೂರಿನ ಕೇವಲ ಎರಡು ಮೂರು ಕಡೆ ಗಡಿಯಲ್ಲಿರುವ infosys, itpl & wipro ಮಾತ್ರವಲ್ಲದೆ ನಗರದೊಳಗಿನ ಎಲ್ಲಾ ಐಟಿ, ಬಿಟಿ ಟೆಕ್ ಪಾರ್ಕ್ ಸೇರಿದಂತೆ ಎಂಎನ್‌ಸಿ ಕಂಪನಿಗಳು, ಇತರೆ ಕೈಗಾರಿಕೆಗಳನ್ನು ಬೆಂಗಳೂರಿನ ಅಷ್ಟದಿಕ್ಕುಗಳ […]

Continue Reading