ಮಹಾರಾಷ್ಟ್ರದ ರಾಜಕೀಯ ಧುರೀಣ, ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ

ಮಹಾರಾಷ್ಟ್ರದ ರಾಜಕೀಯ ಧುರೀಣ, ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕಿರವರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆಯಲ್ಲಿ ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮುಂಬೈನ ಬಾಂದ್ರಾದ ಪೂರ್ವ ವಲಯದ ನಿರ್ಮಲ್ ನಗರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ದಸರಾ ಪ್ರಯುಕ್ತ ಬಾಬಾ ಅವರು ತಮ್ಮ ಮಗ ಹಾಗೂ ಶಾಸಕ ಜಿಶಾನ್ ಸಿದ್ಧಿಕಿ ಅವರ ಮನೆಗೆ ತೆರಳಿದ್ದರು. ಮನೆಯಿಂದ ಹೊರಗೆ ಬರುವಾಗ ಶನಿವಾರ ರಾತ್ರಿ 9.30 […]

Continue Reading

ಹರ್ಯಾಣ: ಚೌಕಾಸಿಗೆ ಇಳಿದ ಕಾಂಗ್ರೆಸ್ ಗೆ ಗುದ್ದು ಕೊಟ್ಟ ಆಮ್ ಆದ್ಮಿ.. ಮೋದಿ ಮೋಡಿ ಇಲ್ಲದಿದ್ದರೂ ಗೆದ್ದ ಬಿಜೆಪಿ!

ದೇಶದ ಶ್ರೀಮಂತ ಮಹಿಳೆ ಇನ್ನು ಎಂಎಲ್ಎ.! ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧ್ಯವೇ ಇಲ್ಲ. ಆಡಳಿತ ವಿರೋಧಿ ಅಲೆಗೆ ಸಿಲುಕಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕನ್ಫರ್ಮ್ ಆಗುತ್ತಲೇ ಬಿಜೆಪಿ ಹೈಕಮಾಂಡ್ ತನ್ನ ಸ್ಟ್ರಾಟಜಿ ಎಲ್ಲವನ್ನೂ ಜಮ್ಮು ಕಾಶ್ಮೀರದತ್ತ ತಿರುಗಿಸಿತ್ತು. ನರೇಂದ್ರ ಮೋದಿ ಕೇವಲ ನಾಲ್ಕು ರೋಡ್ ಶೋ ಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ ಬಿಜೆಪಿ ಘಟಾನುಘಟಿಗಳು ಹರಿಯಾಣದತ್ತ ಮುಖವೇ ಹಾಕಲಿಲ್ಲ. ಸೋಲುವ ರಾಜ್ಯದಲ್ಲಿ ತಮ್ಮ ಹೆಸರು, ಖ್ಯಾತಿ ಎಲ್ಲವನ್ನೂ ಕಳೆದುಕೊಳ್ಳಲು ಅವರು ಇಷ್ಟ ಪಡಲಿಲ್ಲ. ಎಲ್ಲಾ ಸಮೀಕ್ಷೆಗಳು […]

Continue Reading

ಜಮ್ಮು ಕಾಶ್ಮೀರ: ಡರೋ ಮತ್..ಡರೋ ಮತ್..ರಾಗಾ ಮ್ಯಾಜಿಕ್ ವರ್ಕ್ ಔಟ್..ಬಿಜೆಪಿ, ಪಿಡಿಪಿ ಕಿಕ್ ಔಟ್..!

ಭಾರತದ ನೆತ್ತಿಯ ಮೇಲಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ – ಪಿಡಿಪಿ ಕಿಕ್ ಔಟ್ ಆಗಿದೆ. ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ ಲಭಿಸಿದೆ. ಈ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ರಾಜ್ಯಕ್ಕೆ ಸಂವಿಧಾನದ 370 ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಪಡಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು. ಈ ನಿರ್ಧಾರ ಐತಿಹಾಸಿಕ ಅಂತ ಹೇಳಿ ಬೀಗುತ್ತಿದ್ದ ಬಿಜೆಪಿಗೆ ಅಲ್ಲಿನ […]

Continue Reading

ದಾಸನ್ ದೇವಿ ದೇವಸ್ಥಾನದ ಪ್ರಧಾನ ಅರ್ಚಕನಿಂದ ಪ್ರವಾದಿ ನಿಂದನೆ, ಸೌದಿಯ ಹರಮ್ ಮಂತ್ರಾಲಯ ಖಂಡನೆ.

ಸೆಪ್ಟೆಂಬರ್ 29 ರಂದು ಗಾಜಿಯಾಬಾದ್‌ನ ಲೋಹಿಯಾ ನಗರದ ಹಿಂದಿ ಭವನದಲ್ಲಿ ದಾಸನ್ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಅವರು ಮಾಡಿದ ಭಾಷಣದಲ್ಲಿ ಪ್ರವಾದಿ ಮುಹಮ್ಮದ್ ಸ.ಅ ಅವರನ್ನು ಅವಮಾನಿಸಿರುವುದನ್ನು ಸೌದಿಯ ಹರಮ್ ಕಚೇರಿ ಖಂಡಿಸಿದೆ. ಪ್ರತಿ ದಸರಾದಲ್ಲಿ ನೀವು ಪ್ರತಿಕೃತಿಯನ್ನು ಸುಡಬೇಕಾದರೆ ಮುಹಮ್ಮದ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿ ಎಂದು ಈ ಅರ್ಚಕ ಕಾಮೆಂಟ್ ಮಾಡಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಯತಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ […]

Continue Reading

ಸರಕಾರವನ್ನು ಟೀಕಿಸಿದ ಮಾತ್ರಕ್ಕೆ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಕೇಸ್ ಸಲ್ಲದು

ಉತ್ತರ ಪ್ರದೇಶ ಸರಕಾರಕ್ಕೆ ಟಾಂಗ್ ಕೊಟ್ಟ ಸುಪ್ರೀಂ ಕೋರ್ಟ್ ಸರಕಾರವನ್ನು ಟೀಕಿಸಿ ವರದಿ ಮಾಡಿದ ಪತ್ರಕರ್ತರ ವಿರುದ್ಧ ಸರಕಾರಗಳು ಕ್ರಿಮಿನಲ್ ಕೇಸ್ ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಖಡಕ್ ಸೂಚನೆ ನೀಡಿದೆ. ಉತ್ತರ ಪ್ರದೇಶ ಸರಕಾರದ ಆಡಳಿತ ನೀತಿ ಪ್ರಶ್ನಿಸಿ ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದು ಕೋರಿ ಪತ್ರಕರ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಎಸ್.ವಿ.ಎನ್ ಭಟ್ ಅವರಿದ್ದ ನ್ಯಾಯಪೀಠ ಪ್ರಜಾಸತ್ತಾತ್ಮಕ […]

Continue Reading

ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಶೂನ್ಯ ಪ್ರಗತಿ ಸಾಧಿಸಿರುವ 318 ಮಂದಿ ಪಿಡಿಓಗಳ ಅಮಾನತಿಗೆ ಬ್ರೇಕ್

ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಶೂನ್ಯ ಪ್ರಗತಿ ಸಾಧಿಸಿರುವ 318 ಗ್ರಾಪಂ ನೌಕರರ ಅಮಾನತಿಗೆ ಬ್ರೇಕ್ ಹಾಕಲಾಗಿದೆ. ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿದ್ದರೂ ಸಹ ವೆಚ್ಚ ಮಾಡದೇ ಹೆಚ್ಚು ಅನುದಾನ ಬಾಕಿ ಉಳಿಸಿಕೊಂಡಿರುವ ಹಾಗೂ ಅನುದಾನವನ್ನು ಬಿಡುಗಡೆಗೊಳಿಸಲು ತಡೆ ನೀಡಿರುವ ಗ್ರಾಮ ಪಂಚಾಯಿತಿಗಳ ಪಿಡಿಒ ಮತ್ತು ಜಿಲ್ಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರು 30 ಜಿಲ್ಲೆಗಳ ಸಿಇಒಗಳಿಗೆ ಸೂಚಿಸಿದ್ದರು. 30 ಜಿಲ್ಲೆಗಳ 318 ಗ್ರಾಮ ಪಂಚಾಯಿತಿಗಳಿಗೆ […]

Continue Reading

ಖೈರ್ಲಂಜಿಯ ಘನ-ಘೋರ ದಲಿತ ಹತ್ಯಾಕಾಂಡ.!

29-09-20೦6 ರ ಅ ಕರಾಳ ದಿನ ತಮ್ಮ ಅಂತಿಮ ವಿಧಿ ಬರೆಯುವ ದಿನ ಎಂದು ಆ ಅಮಾಯಕ ಕುಟುಂಬದ ಗಮನಕ್ಕೆ ಬರಲೇ ಇಲ್ಲ. ✍️. ಪದರಂಗಿ 20೦6 ಸೆಪ್ಟೆಂಬರ್ 29 ಆ ದಿನ ಸಂಜೆ ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲೂಕಿನ ಖೈರ್ಲಂಜಿ ಗ್ರಾಮದಲ್ಲಿ ಅತೀ ಭೀಕರವಾದ ಮನುಷ್ಯತ್ವವೇ ಇಲ್ಲದ, ಕ್ರೂರ ಮೃಗೀಯ ಕಹಿ ಘಟನೆಯೊಂದು ನಡೆದೇ ಹೋಗುತ್ತದೆ. ​ಬಯ್ಯಲಾಲ್ ಎಂಬ ವಿದ್ಯಾವಂತ ದಲಿತ ಕುಟುಂಬದ ಸದಸ್ಯರ ಭೀಕರ ಹತ್ಯಾಕಾಂಡವೇ ನಡೆಯುತ್ತದೆ. ಆ ಕುಟುಂಬದ ಮುಖ್ಯಸ್ಥನೇ ಬಯ್ಯಲಾಲ್ […]

Continue Reading

ಎಷ್ಟೇ ದೊಡ್ಡ ಉನ್ನತ ಸ್ಥಾನದಲ್ಲಿದ್ದರೂ ಆತನೊಬ್ಬ ಆರೋಪಿ; ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ನಮ್ಮ ಕರ್ತವ್ಯ ನಿರ್ವಹಿಸೋಣ, ಭರವಸೆಯನ್ನು ಕಳೆದುಕೊಳ್ಳದಿರಿ

ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಎಂದಿಗೂ ಭರವಸೆಯನ್ನು ಕಳೆದುಕೊಳ್ಳದಿರಿ. ನಿಷ್ಠಾವಂತ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ಅವರ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದು, ಕುಮಾರ ಸ್ವಾಮಿಯ ಒಂದು ಆರೋಪಕ್ಕೆ ಎಡಿಜಿಪಿ ಚಂದ್ರಶೇಖರ್ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಅವನು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಆತನೊಬ್ಬ ಆರೋಪಿ ಎಂದು ವಾಗ್ದಾಳಿ ನಡೆಸಿದ್ದಾರೆ. ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕುಮಾರಸ್ವಾಮಿ ಗಂಭೀರವಾದಂತಹ ಆರೋಪ ಮಾಡಿದ್ದರು. ಕುಮಾರಸ್ವಾಮಿಯ ಆರೋಪಕ್ಕೆ ಇದೀಗ […]

Continue Reading

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿರುವ ಆರೋಪ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶ ನೀಡಿ, ತಿಲಕ್ ನಗರ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಆದೇಶದ ಸ್ವರೂಪದಲ್ಲೇ ಕೋರ್ಟ್ ಸೀತಾರಾಮನ್ ಅವರ ವಿಚಾರದಲ್ಲೂ ಆದೇಶ ಕೊಟ್ಟಿದೆ. ಚುನಾವಣಾ ಬಾಂಡ್​​​ ಗಳ ಮೂಲಕ ಬೆದರಿಸಿ ಹಣವನ್ನು ಸುಲಿಗೆ ಮಾಡಲಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ವಿರುದ್ಧ ಸೂಕ್ತ […]

Continue Reading

ಬಿಲ್ಕಿಸ್‌ ಬಾನು ಪ್ರಕರಣ; ಗುಜರಾತ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ; ಗುಜರಾತ್ ಸರ್ಕಾರ ಮಾಡಿದ ಮನವಿ ಆಧಾರರಹಿತವಾಗಿದೆ: ಸುಪ್ರೀಂ ಕೋರ್ಟ್

ಬಿಲ್ಕಿಸ್‌ ಬಾನು ಪ್ರಕರಣದಲ್ಲಿ ಗುಜರಾತ್ ಸರ್ಕಾರದ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹನ್ನೊಂದು ಆರೋಪಿಗಳನ್ನು ಬಿಡುಗಡೆ ಮಾಡಿರುವ ವಿಷಯವೂ ಅರ್ಜಿಯಲ್ಲಿ ಒಳಗೊಂಡಿತ್ತು. ಇದರೊಂದಿಗೆ ಗುಜರಾತ್ ಸರ್ಕಾರಕ್ಕೆ ಮತ್ತೊಂದು ಬಾರಿ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್‌ ಈ ಪ್ರಕರಣ ಕುರಿತು ನೀಡಿರುವ ತೀರ್ಪಿನಲ್ಲಿ ಕೆಲವು ಅಂಶಗಳನ್ನು ತೆಗೆದುಹಾಕುವಂತೆ ಗುಜರಾತ್ ಸರ್ಕಾರ ಮಾಡಿದ ಮನವಿ ಆಧಾರರಹಿತವಾಗಿದೆ ಎಂದು ಕೋರ್ಟ್ […]

Continue Reading