ಹಿಂದೂ- ಮುಸ್ಲಿಂ ನಡುವಿನ ವಿವಾಹವನ್ನು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾದರೂ ಮುಸ್ಲಿಂ ಕಾನೂನಿನ ಅಡಿಯಲ್ಲಿ “ಅನಿಯಮಿತ” ಮದುವೆ: ಮದ್ಯಪ್ರದೇಶ ಹೈಕೋರ್ಟ್

ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವನ್ನು ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾದರೂ ಮುಸ್ಲಿಂ ಕಾನೂನಿನ ಅಡಿಯಲ್ಲಿ “ಅನಿಯಮಿತ” ಮದುವೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ. ಮಹಮ್ಮದೀಯ ಕಾನೂನಿನ ಪ್ರಕಾರ, ಮುಸ್ಲಿಂ ಹುಡುಗನು ವಿಗ್ರಹಾರಾಧಕ ಅಥವಾ ಅಗ್ನಿ ಆರಾಧಕಳಾಗಿರುವ ಹುಡುಗಿಯನ್ನು ಮದುವೆಯಾಗುವುದು ಮಾನ್ಯ ವಿವಾಹವಲ್ಲ. ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಿದರೂ, ವಿವಾಹವು ಇನ್ನು ಮುಂದೆ ಮಾನ್ಯ ವಿವಾಹವಾಗುವುದಿಲ್ಲ ಮತ್ತು ಇದು ಅನಿಯಮಿತ (ಫಾಸಿದ್) ವಿವಾಹವಾಗಿರುತ್ತದೆ ” ಎಂದು ಹೈಕೋರ್ಟ್ […]

Continue Reading

ಮೋದಿ ನೇತ್ರತ್ವದ ಬಿಜೆಪಿ ಆಡಳಿತದ ಗುಜರಾತ್ ಸರ್ಕಾರದ ಆಡಳಿತವನ್ನು ನಂಬಲು ಸಾಧ್ಯವಿಲ್ಲ ಹೈಕೋರ್ಟ್

ನೀವು ಏನು ಕಣ್ಮುಚ್ಚಿ ಕುಳಿತಿದ್ದಿರಾ.? ಅಥವಾ ನಿದ್ದೆ ಮಾಡುತ್ತಿದ್ದಿರಾ.? ನಿಮ್ಮ ಆಡಳಿತ ವ್ಯವಸ್ಥೆಯ ಮೇಲೆ ಯಾರೂ ನಂಬಿಕೆ ಇಟ್ಟುಕೊಳ್ಳುವಂತಿಲ್ಲ: ಗುಜರಾತ್ ಹೈಕೋರ್ಟ್ ಗುಜರಾತ್ ಸರ್ಕಾರವನ್ನು ನಾವು ಈಗ ನಂಬಲು ಸಾಧ್ಯವಿಲ್ಲ ಎಂದು ರಾಜ್ ಕೋಟ್ ನ ಕ್ರೀಡಾ ವಲಯದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜ್ ಕೋಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 9 ಮಕ್ಕಳು ಸೇರಿದಂತೆ 28 ಮಂದಿ ಮೃತಪಟ್ಟಿದ್ದು, ಹಲವು ದೇಹಗಳನ್ನು ಗುರುತಿಸಲಾಗದಷ್ಟು ಕರಕಲಾಗಿವೆ. ಗುಜರಾತಿನಲ್ಲಿ […]

Continue Reading

ಟಿವಿ ಶೋನಲ್ಲಿ ಅವಕಾಶ ನೀಡುವ ನೆಪದಲ್ಲಿ ಯುವತಿಯೊಬ್ಬಳ ಅತ್ಯಾಚಾರ

ಟಿವಿ ಪ್ರೋಗಾಮಿನಲ್ಲಿ ಅವಕಾಶ ಮಾಡಿ ಕೊಡಿಸುತ್ತೇನೆ ಎಂದು ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ. 26 ವರ್ಷ ಪ್ರಾಯದ ಯುವತಿಗೆ ಆನ್‌ಲೈನ್‌ನಲ್ಲಿ ಆನಂದ್‌ ಎನ್ನುವವನ ಪರಿಚಯವಾಗಿದೆ. ಟಿವಿ ಉದ್ಯಮದ ಪ್ರಮುಖ ವ್ಯಕ್ತಿಗಳೊಂದಿಗೆ ತನಗೆ ಸಂಪರ್ಕವಿದೆ ಮತ್ತು ಕಪಿಲ್ ಶರ್ಮಾ ಶೋನಲ್ಲಿ ಕೆಲಸ ಕೊಡಿಸುವುದಾಗಿ ಆನಂದ್ ಯುವತಿಯನ್ನು ತನ್ನ ಬಣ್ಣಬಣ್ಣದ ಮಾತುಗಳಿಂದ ನಂಬಿಸಿದ್ದ. ಇದನ್ನು ನಂಬಿದ್ದ ಯುವತಿ ಅಡಿಷನ್‌ ನೀಡಲು ಆನಂದ್‌ ಹೇಳಿದ್ದ ವಿಳಾಸಕ್ಕೆ ಹೋಗಿದ್ದಾರೆ. ಅಡಿಷನ್‌ ಉತ್ತಮವಾದರೆ ಮುಂದೆ ಕಾಸ್ಟಿಂಗ್‌ ಡೈರೆಕ್ಟರ್‌ ಬಳಿ ಕರೆದುಕೊಂಡು […]

Continue Reading

ಮೋದಿಗೆ ಸಂಕಷ್ಟ.! ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮೋದಿ ವಿರುದ್ದ ಖಾಸಾಗಿ ದೂರು

2024ರ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿ ಮಾಡಲಾಗಿದ್ದ ಭಾಷಣ ಸಂಬಂಧ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಅವರ ವಿರುದ್ಧ ಖಾಸಗಿ ದೂರು ದಾಖಲಾಗಿದೆ.ಹೆಬ್ಬಾಳದ ನಿವಾಸಿಯಾಗಿರುವ ಜಿಯಾವುರ್​ ರಹಮಾನ್​​ ನೊಮಾನಿ ಎಂಬುವವರು ಸ್ಪೆಷಲ್​​​ ಮ್ಯಾಜಿಸ್ಟ್ರೇಟ್​​​​​ ಕೋರ್ಟ್​​​​ನಲ್ಲಿ ಖಾಸಗಿ ದೂರನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಾರಿ ಕಾಂಗ್ರೆಸ್​​​​ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು ಮುಸ್ಲಿಂ ಸಮುದಾಯಕ್ಕೆ, ನುಸುಳುಕೋರರಿಗೆ ಹಂಚಲಿದೆ ಎಂದು ಮೋದಿ ಅವರು ಕಾಂಗ್ರೆಸ್​​ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ […]

Continue Reading

ಭಾರತದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದೆ

ಆಗ್ನೇಯ ಏಷ್ಯಾ ದೇಶಗಳಲ್ಲಿ ಸೃಷ್ಟಿಯಾದ ಸೈಬರ್ ವಂಚನೆ ಪ್ರಕರಣಗಳು ಭಾರತದಲ್ಲಿ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿವೆ. ವಂಚನೆ ಪ್ರಕರಣದಲ್ಲಿ ಅರ್ಧದಷ್ಟು ಹಣ ಹೂಡಿಕೆ, ವ್ಯಾಪಾರ, ಡಿಜಿಟಲ್ ಫ್ರಾಡ್, ಡೇಟಿಂಗ್ ವಂಚನೆಗಳಲ್ಲಿ ಕಂಡು ಬಂದಿದೆ. ದೇಶವ್ಯಾಪಿ ಮಿತಿಮೀರಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳು ಜಾರ್ಖಂಡ್ ನ ಜಮ್ತಾರಾ ಹಾಗೂ ರಾಜಸ್ಥಾನದ ಮೇವತ್ ಗಳಂತ ಹಾಟ್ ಸ್ಪಾಟ್ ಕೇಂದ್ರಗಳನ್ನು ಮೀರಿಸುವಷ್ಟರ ಮಟ್ಟಿಗೆ ಹೆಚ್ಚಳವಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಇಂತಹ 85 ಸಾವಿರ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ […]

Continue Reading

ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಜಮೀನು ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು

‘ಸಾರ್ವಜನಿಕ ಉದ್ದೇಶ’ ಗಳಿಗಾಗಿ ರಾಜ್ಯ ಸರಕಾರ ಏಕಪಕ್ಷೀಯವಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೋಲ್ಕತ್ತಾ ಮುನ್ಸಿಪಾಲಿಟಿ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಖಾಸಗಿ ಭೂ ಸ್ವಾಧೀನಕ್ಕೆ ಸರಕಾರಗಳು ಏಳು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದೆ. ಜತೆಗೆ, “ಸಾರ್ವಜನಿಕ ಉದ್ದೇಶದ ಹೆಸರಿನಲ್ಲಿ ಖಾಸಗಿಯವರ ಆಸ್ತಿ ಹಕ್ಕನ್ನು ಮೊಟಕುಗೊಳಿಸಲಾಗದು. ಆಸ್ತಿಯ ಹಕ್ಕು ಸಾಂವಿಧಾನಿಕ ಹಕ್ಕು ಆಗಿರುವುದರಿಂದ ಅದನ್ನು […]

Continue Reading

ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಈ ಬಾರಿ ಗೆಲುವು ದಕ್ಕಲಿದೆ: ರಾಹುಲ್ ಗಾಂಧಿ, ಭವಿಷ್ಯ

ಸಾರ್ವತ್ರಿಕ ಚುನಾವಣೆಯ ಏಳೂ ಹಂತಗಳಲ್ಲಿ ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ 8, ಮೂರನೇ 10, ನಾಲ್ಕನೇ 13, ಐದನೇ ಮತ್ತು ಆರನೇ ತಲಾ 14 ಮತ್ತು ಕೊನೆಯ ಹಂತದಲ್ಲಿ 13 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲು ಉತ್ತರ ಪ್ರದೇಶದ ಫಲಿತಾಂಶ ಬಹಳ ನಿರ್ಣಾಯಕ, ಕಾರಣ ಅಲ್ಲಿರುವುದು 80 ಲೋಕಸಭಾ ಕ್ಷೇತ್ರಗಳು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ 64, ಮಹಾಘಟಬಂಧನ್ 15 ಮತ್ತು ಕಾಂಗ್ರೆಸ್ […]

Continue Reading

ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆ ಬದಲಾಗಿ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಸಂಹಿತೆ, ಜುಲೈ ಒಂದರಿಂದ ಅನುಷ್ಠಾನಗೊಳ್ಳಲಿವೆ

ಜು.1 ರಿಂದ ನೂತನ ಕಾನೂನು ಮೂಲಕವೇ ಪೊಲೀಸರು ಪ್ರಕರಣ ದಾಖಲಿಸಬೇಕು ಐಪಿಸಿ, ಸಿಆರ್‌ಪಿಸಿ ಸೇರಿದಂತೆ ದೇಶದ ಕಾನೂನುಗಳು ಬದಲಾವಣೆಯಾಗಿದ್ದು, ಜುಲೈ 1 ರಿಂದ ಜಾರಿಯಾಗಲಿರುವ ನೂತನ ಕಾನೂನುಗಳ ಅನುಷ್ಠಾನಕ್ಕೆ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಿದ್ಧರಾಗಬೇಕೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ನಗರದ ಆಡುಗೋಡಿಯಲ್ಲಿನ ಸಿಎಆರ್‌ ಸೌತ್‌ ಕವಾಯತು ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಮಾಸಿಕ ಕವಾಯತಿನಲ್ಲಿ ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವದಿಂದಲೂ ಜಾರಿಯಲ್ಲಿದ್ದ ಐಪಿಸಿ, ಸಿಆರ್‌ಪಿಸಿ ಮತ್ತು ಸಾಕ್ಷ್ಯ ಕಾಯ್ದೆ […]

Continue Reading

ಎನ್‌ಡಿಎ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆಯುವ ಸಾಧ್ಯತೆ; ಹೂಡಿಕೆದಾರರು ಆತಂಕ.!

ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳ ಬಗ್ಗೆ ಹೆಚ್ಚು ನಿರಾಸೆ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಚುನಾವಣಾ ಆಯೋಗದ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಮತದಾನದ ಶೇಕಡಾವಾರು ಕುಸಿತದಿಂದಾಗಿ ಷೇರು ಮಾರುಕಟ್ಟೆ ಹೂಡಿಕೆದಾರರು ಅಲರ್ಟ್ ಮೂಡ್‌ನಲ್ಲಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ವಿದೇಶಿ ಹೂಡಿಕೆದಾರರ ಚಿತ್ತ ವಿಶೇಷವಾಗಿ ಹುಳಿಯಾಗಿದೆ.ಇದರಿಂದಾಗಿ ಷೇರುಪೇಟೆಯ ವಾತಾವರಣವೂ ಬದಲಾದಂತಿದೆ. ಕಳೆದೊಂದು ದಶಕವನ್ನು ನೋಡಿದರೆ, ಹೂಡಿಕೆದಾರರು ಈಗ ಅತ್ಯಂತ ನಿರಾಸೆಗೊಂಡಿದ್ದಾರೆ. ಪತ್ರಿಕೆಯೊಂದರ ವರದಿಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಲೋಕಸಭೆ ಚುನಾವಣೆಯಲ್ಲಿ […]

Continue Reading

ಬಿಜೆಪಿ ಸಂವಿಧಾನವನ್ನು ನಾಶಪಡಿಸಲು, ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ: ರಾಹುಲ್ ಗಾಂಧಿ

ಬೋಲಂಗಿರ್: ಬಿಜೆಪಿಯು ಸಂವಿಧಾನವನ್ನು “ನಾಶ” ಮಾಡಲು ಮತ್ತು ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಮೀಸಲಾತಿಯನ್ನು ರದ್ದುಗೊಳಿಸಲು ಬಯಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. ಒಡಿಶಾದ ಬೋಲಂಗಿರ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತದೆ ಮತ್ತು ದೇಶವನ್ನು 22 ಬಿಲಿಯನೇರ್‌ಗಳು ನಡೆಸುತ್ತಾರೆ ಎಂದು ಪ್ರತಿಪಾದಿಸಿದರು. “ಬಿಜೆಪಿ ಈ ಪುಸ್ತಕವನ್ನು ಹರಿದು ಹಾಕಲು ಬಯಸುತ್ತದೆ, ಆದರೆ ನಾವು ಕಾಂಗ್ರೆಸ್ ಮತ್ತು ಭಾರತದ […]

Continue Reading