ಪ್ರತಿ ಭಾರತೀಯನ ಮೇಲೆ 4.8 ಲಕ್ಷ ಸಾಲ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿ

ಕಳೆದೆರಡು ವರ್ಷಗಳಲ್ಲಿ ಭಾರತದ ಪ್ರತಿ ವ್ಯಕ್ತಿ ಮೇಲಿನ ಋಣಭಾರ 4.8 ಲಕ್ಷ ರೂಪಾಯಿ ಗೆ ಬಂದಿದೆ. 2023 ರ ಮಾರ್ಚ್ ನಲ್ಲಿ ಪ್ರತಿ ವ್ಯಕ್ತಿ ಮೇಲೆ ತಲಾ 3.5 ಲಕ್ಷ ರೂಪಾಯಿ ನಷ್ಟು ಸಾಲವಿತ್ತು. 2 ವರ್ಷ ಅಂದರೆ ಮಾರ್ಚ್ 2025 ರ ವೇಳೆಗೆ ಇದು ಶೇಕಡಾ 23 ರಷ್ಟು ಹೆಚ್ಚಳ ಕಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವಿತ್ತೀಯ ಸ್ಥಿರತೆ ವರದಿ ಹೇಳಿದೆ. ವರದಿ ಪ್ರಕಾರ ಪ್ರತಿ ಭಾರತೀಯನ ಮೇಲಿನ ಸಾಲದ […]

Continue Reading

ದೆಹಲಿ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕನಿಂದ ಎಂಬಿಬಿಎಸ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳದ ಆರೋಪ, ದೂರು ದಾಖಲು

ದೆಹಲಿ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಆಸ್ಪತ್ರೆ ಆವರಣದಲ್ಲಿ ಮೌಖಿಕ ಪರೀಕ್ಷೆಯ ಸಮಯದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿದ್ಯಾರ್ಥಿನಿ ದೂರು ದಾಖಲಿಸಿದ ನಂತರ ಪೊಲೀಸರು ಬಂಧನವನ್ನು ದೃಢಪಡಿಸಿದ್ದಾರೆ. ಸೆಪ್ಟೆಂಬರ್ 26 ರಂದು ಎನ್‌ಕ್ಲೇವ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ದಿಲ್ಶಾದ್ ಗಾರ್ಡನ್‌ನಲ್ಲಿರುವ ಜಿಟಿಬಿ ಆಸ್ಪತ್ರೆಯೊಳಗೆ ತನಗೆ ದೈಹಿಕ ಕಿರುಕುಳ ನೀಡಲಾಗಿದೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ದೂರುದಾರರು ಸಹಾಯಕ ಪ್ರಾಧ್ಯಾಪಕ ಡಾ. ಮೊಹಮ್ಮದ್ ಶಕೀರ್ ನಯೀಮ್ ಅವರು ತನಗೆ […]

Continue Reading

ಆರ್‌ಎಸ್‌ಎಸ್ ಕುರಿತ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ: ನಾಚಿಕೆಗೇಡೀ ಪಾತ್ರದ ಚರಿತ್ರೆಯನ್ನು ಸುಳ್ಳಾಗಿಸುವ ಕಸರತ್ತು. ಭಾರತದ ಸಂವಿಧಾನಕ್ಕೆ ಮಾಡಿರುವ ಅವಮಾನ: ಸಿಪಿಐ(ಎಂ) ಖಂಡನೆ

ಆರ್‌ಎಸ್‌ಎಸ್ ಸ್ಥಾಪನೆಯ 100ನೇ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನ ಮಂತ್ರಿಗಳು ಒಂದು ಅಂಚೆ ಚೀಟಿ ಮತ್ತು 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿರುವುದು ಎಂದಿಗೂ ಒಪ್ಪಿಕೊಂಡಿರದ ಭಾರತದ ಸಂವಿಧಾನಕ್ಕೆ ಒಂದು ಗಂಭೀರ ಗಾಯ ಮತ್ತು ಅವಮಾನವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. ಅಧಿಕೃತ ನಾಣ್ಯವೊಂದು ಆರೆಸ್ಸೆಸ್‍ನ ಹಿಂದುತ್ವ ರಾಷ್ಟ್ರ ಎಂಬ ಸಂಕುಚಿತ ಪಂಥವಾದೀ ಪರಿಕಲ್ಪನೆಯ ಸಂಕೇತವಾಗಿರುವ “ಭಾರತ ಮಾತಾ” ಚಿತ್ರವನ್ನು ಆರೆಸ್ಸೆಸ್‍ ಪ್ರಚುರಪಡಿಸಿದ ಒಂದು ಹಿಂದೂ ದೇವತೆಯ “ಭಾರತ ಮಾತಾ” ಚಿತ್ರವನ್ನು ನಕಲಿಸುವುದು ಅತ್ಯಂತ ಆಕ್ಷೇಪಾರ್ಹ ಸಂಗತಿ. ಅಂಚೆ […]

Continue Reading

ಖೈರ್ಲಂಜಿಯ ಘನ-ಘೋರ ದಲಿತ ಹತ್ಯಾಕಾಂಡ. ಖೈರ್ಲಂಜಿ ಹತ್ಯಾಕಾಂಡ ನಡೆದು ಇಂದಿಗೆ 19 ವರ್ಷ

29-09-20೦6 ರ ಅ ಕರಾಳ ದಿನ ತಮ್ಮ ಅಂತಿಮ ವಿಧಿ ಬರೆಯುವ ದಿನ ಎಂದು ಆ ಅಮಾಯಕ ಕುಟುಂಬದ ಗಮನಕ್ಕೆ ಬರಲೇ ಇಲ್ಲ. ✍️. ಪದರಂಗಿ 20೦6 ಸೆಪ್ಟೆಂಬರ್ 29 ಆ ದಿನ ಸಂಜೆ ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲೂಕಿನ ಖೈರ್ಲಂಜಿ ಗ್ರಾಮದಲ್ಲಿ ಅತೀ ಭೀಕರವಾದ ಮನುಷ್ಯತ್ವವೇ ಇಲ್ಲದ, ಕ್ರೂರ ಮೃಗೀಯ ಕಹಿ ಘಟನೆಯೊಂದು ನಡೆದೇ ಹೋಗುತ್ತದೆ. ​ಬಯ್ಯಲಾಲ್ ಎಂಬ ವಿದ್ಯಾವಂತ ದಲಿತ ಕುಟುಂಬದ ಸದಸ್ಯರ ಭೀಕರ ಹತ್ಯಾಕಾಂಡವೇ ನಡೆಯುತ್ತದೆ. ಆ ಕುಟುಂಬದ ಮುಖ್ಯಸ್ಥನೇ ಬಯ್ಯಲಾಲ್ […]

Continue Reading

ಹಿಂದೂ ವಿಧವೆಯ ಮರಣ ನಂತರ, ಆಕೆಯ ಆಸ್ತಿ ಆಕೆಯ ಹೆತ್ತವರ ಬದಲು ಆಕೆಯ ಗಂಡನ ಕುಟುಂಬಕ್ಕೆ ಸಂದುತ್ತದೆ: ಸುಪ್ರೀಂ ಕೋರ್ಟ್

ಮಕ್ಕಳಿಲ್ಲದ ಹಿಂದೂ ವಿಧವೆಯ ಮರಣ ನಂತರ, ಆಕೆಯ ಆಸ್ತಿ ಆಕೆಯ ಹೆತ್ತವರ ಬದಲು ಆಕೆಯ ಗಂಡನ ಕುಟುಂಬಕ್ಕೆ ಸಂದುತ್ತದೆ ಎಂದು ಹೇಳುವ ಹಿಂದೂ ಉತ್ತರಾಧಿಕಾರ ಕಾಯ್ದೆಯ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹಿಂದೂ ಕಾನೂನಿನಡಿಯಲ್ಲಿ ಮಹಿಳೆ ಮದುವೆಯಾದಾಗ, ಆಕೆಯ ಗೋತ್ರವೂ ಬದಲಾಗುತ್ತದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಹಿಂದೂ ಸಮಾಜ ಕನ್ಯಾದಾನ ಎಂಬ ಪರಿಕಲ್ಪನೆಯನ್ನು ಹೊಂದಿದೆ, ಅದರ ಅಡಿಯಲ್ಲಿ ಒಬ್ಬ ಮಹಿಳೆ ಮದುವೆಯಾದಾಗ, ಅವಳ […]

Continue Reading

ಮುಸ್ಲಿಂ ಪುರುಷ ತನ್ನ ಎಲ್ಲಾ ಹೆಂಡತಿಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಹೊರತು, ಆತ ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗಲು ಅವಕಾಶವಿಲ್ಲ: ಕೇರಳ ಹೈಕೋರ್ಟ್

ಕೇರಳ: ಯಾವುದೇ ಮುಸ್ಲಿಂ ಪುರುಷನು ತನ್ನ ಪತ್ನಿಯರನ್ನು ಪೋಷಿಸಲು ಸಾಧ್ಯವಾಗದ ಹೊರತು ಎರಡನೇ ಅಥವಾ ಮೂರನೇ ಪತ್ನಿಯನ್ನು ಮದುವೆಯಾಗುವ ಹಕ್ಕನ್ನು ಹೊಂದಿಲ್ಲ, ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಕೇರಳ ಹೈಕೋರ್ಟ್ ಒತ್ತಿ ಹೇಳಿದೆ. 39 ವರ್ಷದ ಮಹಿಳೆಯೊಬ್ಬರು ತನ್ನ ಪತಿಯಿಂದ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದಾಗ ನ್ಯಾಯಮೂರ್ತಿ ಪಿ.ವಿ. ಕೃಷ್ಣನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮಹಿಳೆಯು ತನ್ನ 46 ವರ್ಷದ ಪತಿ ಕುರುಡನಾಗಿದ್ದು, ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಿದ್ದಾನೆ. ಆತ […]

Continue Reading

ಯೋಗದ ಹೆಸರಲ್ಲಿ ಭೋಗ.!ಯೋಗ ಗುರುವಿನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಆರೋಪಿ ನಿರಂಜನಾ ಮೂರ್ತಿ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಯೋಗ ದ ಹೆಸರಲ್ಲಿ ಯೋಗಗುರುವಿನ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸರಿಂದ ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ಬಂಧನವಾಗಿದೆ.ಆರೋಪಿ ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತಿದ್ದ ಎನ್ನಲಾಗಿದೆ. ಯೋಗ ಸೆಂಟರ್ ಗೆ ಯೋಗದ ಕ್ಲಾಸಿಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಅಡಿಯಲ್ಲಿ ಬಂಧನ ಮಾಡಲಾಗಿದೆ. ಹದಿನೇಳು ವರ್ಷದ ಬಾಲಕಿಗೆ […]

Continue Reading

ಕಾಸರಗೋಡು: 14 ಮಂದಿ ಪುರುಷರಿಂದ 16 ರ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ, ಪ್ರಕರಣ ದಾಖಲು.

ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ನಾಚಿಕೆಗೇಡಿನ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ 16 ವರ್ಷದ ಬಾಲಕನ ಮೇಲೆ 14 ಮಂದಿ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಹಾಯಕ ಶಿಕ್ಷಣ ಅಧಿಕಾರಿ, ರೈಲ್ವೆ ಪೊಲೀಸ್ ಪಡೆಯ ಸದಸ್ಯ ಸೇರಿದಂತೆ ಈ ಪ್ರಕರಣದಲ್ಲಿ ಪೊಲೀಸರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಲಿಪಶು ಬಾಲಕನ ತಾಯಿ ತನ್ನ ಮಗನ ಚಟುವಟಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ತಾಯಿ ಚೈಲ್ಡ್ ಲೈನ್ […]

Continue Reading

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದರೋಡೆ: ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ 8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣ ದೋಚಿಕೊಂಡು ಪರಾರಿ

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ ಹೊತ್ತಿಗೆ ಏಳೆಂಟು ಮುಸುಕುದಾರಿ ದರೋಡೆಕೋರರ ತಂಡ ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿ 8 ಕೋಟಿ ರೂಪಾಯಿ ನಗದು, ಸರಿ ಸುಮಾರು 50 ಕೆ.ಜಿಯಷ್ಟು ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಜನ ನಿಬಿಡ ಪ್ರದೇಶದಲ್ಲಿರುವ ಎಸ್‌ಬಿಐ ಶಾಖೆಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು […]

Continue Reading

‘ಮ್ಯೂಲ್ ಅಕೌಂಟ್’ ದಂಧೆ ಪ್ರಕರಣ: ಹೊಸ ನಮೂನೆಯ ವಂಚನೆ ಬಯಲು; ಬಾಡಿಗೆ ರೂಪದಲ್ಲಿ ಬ್ಯಾಂಕ್ ಖಾತೆ ಪಡೆದು 500 ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಖದೀಮರು

ಕೇರಳದ ವಯನಾಡು ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಜನರು ‘ಮ್ಯೂಲ್ ಅಕೌಂಟ್’ (ಒಂದು ಬಗೆಯಲ್ಲಿ ಬಾಡಿಗೆ ರೂಪದಲ್ಲಿ ಬ್ಯಾಂಕ್ ಖಾತೆ ಪಡೆದು ಅದನ್ನು ಹಣ ಅಕ್ರಮ ವರ್ಗಾವಣೆ ಚಟುವಟಿಕೆಗಳಿಗೆ ಬಳಸುವುದು) ದಂಧೆಗೆ ಬಲಿಯಾಗಿ ಗಂಭೀರ ಕಾನೂನು ಸಂಕಷ್ಟ ಎದುರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರಿಂದ ಹೀಗೆ ಮೋಸ ಹೋದವರಲ್ಲಿ ಮಹಿಳೆಯರು ಹಾಗೂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸೈಬರ್ ಪೊಲೀಸರು ಹೇಳಿದ್ದಾರೆ. ಜಿಲ್ಲೆಯ ಹೊರಗಿನಿಂದ ಬಂದ ವಂಚಕರು ಸ್ಥಳೀಯರಿಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆ ನೀಡುವಂತೆ ಆಮಿಷ […]

Continue Reading