ಕರಾವಳಿ
ಜಿಲ್ಲೆಯಲ್ಲಿ ಮತ್ತೆ ಚಿಗಿತುಕೊಳ್ಳುತ್ತಿರುವ ಅನೈತಿಕ ಪೊಲೀಸ್ ಗಿರಿ.!
ಗಂಜಿಮಠ ಗೂಡಂಗಡಿಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ ದುರ್ಷ್ಕರ್ಮಿಗಳು; ಎಫ್ ಐ ಆರ್ ದಾಖಲು ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಚಿಗಿತುಕೊಳ್ಳುತ್ತಿದ್ದು, ಬಾಲ ಬಿಚ್ಚುವ ದುರ್ಷ್ಕರ್ಮಿಗಳ ಬಾಲ ಕಟ್ ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಖಡಕ್ ಆಫೀಸರ್ಸ್ ಇಲ್ಲದೇ ಇದ್ದರೆ ಇಂತಹ ಕ್ಷುಲ್ಲಕ ಘಟನೆಗಳು ಕೋಮು ಗಲಭೆಗಳಿಗೆ ಕಾರಣವಾಗುತ್ತಿತ್ತು. ಆ ಮಟ್ಟಿಗೆ ಇಲ್ಲಿನ ಪೊಲೀಸ್ ಇಲಾಖೆಯ ಸ್ಥೈರ್ಯವನ್ನು ಮೆಚ್ಚಲೇಬೇಕು. ಗಂಜಿಮಠ ಗಾಂಧಿನಗರ ಬಳಿಯಲ್ಲಿ ಗೂಡಂಗಡಿ ಇಟ್ಟು ವ್ಯಾಪಾರ ಮಾಡುವ, ಜಾತ್ರೆ, ಕಾರ್ಯಕ್ರಮಗಳಿಗೆ […]
ಬುದ್ದಿವಂತರ ಜಿಲ್ಲೆಯಲ್ಲಿ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳು; ಬೀದಿ ವಿಚಾರಣೆ, ನ್ಯಾಯ ತೀರ್ಮಾನ ಅತೀ ಅಪಾಯಕಾರಿ: ಸಿಪಿಐಎಂ ಖಂಡನೆ
ಮಂಗಳೂರು ನಗರದ ಕೂಳೂರು ಬಳಿ ಜಾರ್ಖಂಡ್ ನ ವಲಸೆ ಕಾರ್ಮಿಕ ದಿಲ್ ಜಾನ್ ಅನ್ಸಾರಿಯನ್ನು “ಬಾಂಗ್ಲಾ ನುಸುಳುಕೋರ” ಎಂದು ಆಪಾದಿಸಿ ಹಲ್ಲೆ ನಡೆಸಿರುವುದು, ಈ ಸಂದರ್ಭ ಆತನಿಂದ ಹಲವು ಬಾರಿ “ಜೈ ಶ್ರೀರಾಮ್” ಘೋಷಣೆ ಹಾಕಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಕಟುವಾಗಿ ಖಂಡಿಸುತ್ತದೆ. ಈ ಹಲ್ಲೆಕೋರರು ಸಂಘಪರಿವಾರದ “ಹಿಂದು ಜಾಗರಣ ವೇದಿಕೆ” ಗುಂಪಿಗೆ ಸೇರಿದವರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಈ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳ ಮೇಲೆ ಕೊಲೆಯತ್ನ ಸಹಿತ ಗಂಭೀರ ಸೆಕ್ಷನ್ […]
ರಾಜ್ಯ
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ, ರಾಜ್ಯ ಸರ್ಕಾರ ಆದೇಶ
2025-26ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು ಎಂದಿದ್ದಾರೆ. ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ), ಯಶಸ್ವಿನಿ ಟ್ರಸ್ಟ್ ಇವರ ಪತ್ರದಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ […]
ರಾಜ್ಯದ ಪೊಲೀಸರಿಗೆ ಶುಭ ಶುದ್ದಿ; ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಕಡ್ಡಾಯ
ಪೊಲೀಸರಿಗೆ ಶುಭ ಶುದ್ದಿ, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಗಳ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡುವಂತೆ ಕರ್ನಾಟಕ ಸರ್ಕಾರ ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಿಗೆ ಪತ್ರದಲ್ಲಿ ಸೂಕ್ತ ಕ್ರಮಕ್ಕೆ ಸೂಚಿಸಿದೆ. ಈ ಕುರಿತಂತೆ ರಾಜ್ಯ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ರಾಜ್ಯದ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ನಾಗರೀಕ ಸಮಾಜದ ಸದಸ್ಯರಾದಂತ ಮೋಹನ್ ಕುಮಾರ್ […]
ರಾಷ್ಟ್ರೀಯ
ನಾಯಿ ಕಚ್ಚಿದರೆ ರಾಜ್ಯ ಸರಕಾರವೇ ಹೊಣೆ, ಪರಿಹಾರ ನೀಡಲಿ; ಬೀದಿ ನಾಯಿಗಳ ಬಗ್ಗೆ ಪ್ರೀತಿ, ಕಾಳಜಿ ಇದ್ದರೆ ಮನೆಗೊಯ್ದು ಸಾಕಿ: ಸುಪ್ರೀಂ ಕೋರ್ಟ್
ದೇಶಾದ್ಯಂತ ಅನೇಕ ನಗರಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿ ಹೆಚ್ಚುತ್ತಿದೆ. ಜನವರಿ 13ರಂದು ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಾಗರಿಕರು ನಾಯಿ ಕಡಿತದಿಂದ ಸತ್ತರೆ ಅಥವಾ ಗಾಯಗೊಂಡರೆ, ರಾಜ್ಯ ಸರ್ಕಾರಗಳು ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಿತು. 75 ವರ್ಷಗಳಿಂದ ಸರ್ಕಾರಗಳು ಬೀದಿ ನಾಯಿ ಸಮಸ್ಯೆಯನ್ನು ನಿಭಾಯಿಸಲು ಏನೂ […]
ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಹಿರಿಯ ತಂತ್ರಿ ಕಂಠರರ್ ರಾಜೀವರ್ ಬಂಧನ
ಶಬರಿಮಲೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಮೂಲ್ಯ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆಯ ದೇವಾಲಯದ ಪ್ರಧಾನ ಅರ್ಚಕ ಕಂದರಾರು ರಾಜೀವರಾರು ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದು, ದೇವಾಲಯದ ಆವರಣದಿಂದ ನಾಪತ್ತೆಯಾಗಿರುವ ಬೆಲೆಬಾಳುವ ಆಭರಣಗಳ ಕುರಿತು ತನಿಖೆ ನಡೆಸುತ್ತಿದೆ. ಕೆಲವು ದಿನಗಳ ಹಿಂದಷ್ಟೇ ದೇವಾಲಯದ ಒಳಗಿನ ಚಿನ್ನಾಭರಣಗಳು ಕಳುವಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಈ ಗಂಭೀರ ಪ್ರಕರಣದ ಬೆನ್ನಲ್ಲೇ ತನಿಖೆಯನ್ನು ಆರಂಭಿಸಲಾಗಿತ್ತು. ಇದೀಗ ತನಿಖಾ ತಂಡವು ಮುಖ್ಯ ಅರ್ಚಕರನ್ನೇ ವಿಚಾರಣೆಗೆ ಒಳಪಡಿಸಿರುವುದು ಭಕ್ತರಲ್ಲಿ ಮತ್ತು […]
ಅಂತಾರಾಷ್ಟ್ರೀಯ
ಲಾಗೋಸ್: 31.5 ಕೆ.ಜಿ ಕೊಕೇನ್ ವಶಪಡಿಸಿಕೊಂಡ ನೈಜೀರಿಯಾ ಪೊಲೀಸರು, 22 ಭಾರತೀಯರ ಬಂಧನ
ಲಾಗೋಸ್: ಹಡಗಿನಲ್ಲಿದ್ದ 31.5 ಕೆ.ಜಿ ಕೊಕೇನ್ ವಶಪಡಿಸಿಕೊಂಡ ನೈಜೀರಿಯಾ ಪೊಲೀಸರು, 22 ಭಾರತೀಯರನ್ನು ಬಂಧಿಸಿದ್ದಾರೆ. ಲಾಗೋಸ್‌ನ ಅಪಾಪಾ ಬಂದರಿನ ಜಿಡಿಎನ್‌ಎಲ್ ಟರ್ಮಿನಲ್‌ನಲ್ಲಿದ್ದ ‘ಎಂವಿ ಅರುಣ ಹುಲ್ಯ’ ಎಂಬ ವ್ಯಾಪಾರಿ ಹಡಗನ್ನು ಶೋಧಿಸಿದ ನೈಜೀರಿಯಾದ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳಿಗೆ ಕೊಕೇನ್ ದೊರೆತಿದೆ. ಎಂದು ವೆಬ್ ಪೋರ್ಟಲ್ ‘ಪಂಚ್’ ವರದಿ ಮಾಡಿದೆ. ಕೊಕೇನ್ ಪತ್ತೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವರಲ್ಲಿ ಹಡಗಿನ ಮಾಸ್ಟರ್ ಶರ್ಮಾ ಶಶಿ ಭೂಷಣ್ ಮತ್ತು 21 ಸಿಬ್ಬಂದಿ ಇದ್ದಾರೆ ಎಂದು ಮಾಧ್ಯಮ ಮತ್ತು ವಕಾಲತ್ತು ನಿರ್ದೇಶಕ ಫೆಮಿ […]
‘ದುಬೈ ರನ್’ ನಲ್ಲಿ ಮಿಂಚಿದ ಬ್ಯಾರಿಗಳು; ಅತೀ ಉದ್ದನೆಯ ಯುಎಇ ಧ್ವಜದ ದೃಶ್ಯವನ್ನು ಹಂಚಿಕೊಂಡ ದುಬೈ ರಾಜಕುಮಾರ ಶೇಖ್ ಹಮ್ದಾನ್
ದುಬೈ: ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರವಿವಾರ ದುಬೈಯ ಶೇಖ್ ಝಾಯೆದ್ ರಸ್ತೆಯಲ್ಲಿ ನಡೆದ ಐತಿಹಾಸಿಕ ‘ದುಬೈ ರನ್–2025’ ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಅದ್ಭುತ ಹಾಜರಾತಿ ನೀಡಿ ಎಲ್ಲರ ಗಮನ ಸೆಳೆದಿದೆ. ಲಕ್ಷಾಂತರ ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ, ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ಅವರ ನೇತೃತ್ವದಲ್ಲಿ ಸಾವಿರಾರು ಬ್ಯಾರಿಗಳು ‘ದುಬೈ ಬ್ಯಾರೀಸ್’ ಎಂದು ಮುದ್ರಿತ ಟೀ–ಶರ್ಟ್‌ಗಳನ್ನು ಧರಿಸಿ, […]
