ವಿದಾನ ಸಭಾ ಚುನಾವಣೆ, ಮೊದಲ ಹಂತದ ಕೈ ಟಿಕೆಟ್ ಪಟ್ಟಿ ಹೈಕಮಾಂಡಿಗೆ ರವಾನೆ?

ರಾಜ್ಯ

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ನಗರದ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಕೆಪಿಸಿಸಿ ಚುನಾವಣಾ ಸಮಿತಿ ಸಭೆ ನಡೆಯಲಿದೆ.

100 ರಿಂದ 130 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಇಂದಿನ ಸಭೆಯಲ್ಲಿ ಮೊದಲ ಪಟ್ಟಿ ಅಂತಿಮಗೊಳಿಸಿ ಎಐಸಿಸಿ ಚುನಾವಣಾ ಸಮಿತಿಯ ಅನುಮೋದನೆಗೆ ರವಾನಿಸುವ ನಿರೀಕ್ಷೆ ಇದೆ. 54 ಸದಸ್ಯರ ಜಂಬೋ ತಂಡದ ಚುನಾವಣಾ ಸಮಿತಿ ಸಭೆಗೆ ಮುನ್ನ ರಣದೀಪ್ ಸಿಂಗ್ ಸುರ್ಜೇವಾಲ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬುಧವಾರ ತಡರಾತ್ರಿವರೆಗೆ ಹೋಟೆಲೊಂದರಲ್ಲಿ ಸಭೆ ನಡೆಸಿದರು. ಪಕ್ಷ ಗೆಲ್ಲುವ ವಿಶ್ವಾಸವಿರುವ ಹಾಗೂ ಅಭ್ಯರ್ಥಿಗೆ ವಿರೋಧ ಇಲ್ಲದ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಲಿದ್ದು, ಈ ಪಟ್ಟಿ ಕುರಿತಂತೆ ಮೂವರು ನಾಯಕರು ಸಮಾಲೋಚನೆ ನಡೆಸಿದರು.