ಹಿಟ್ ಆಂಡ್ ರನ್ ಕೇಸಲ್ಲಿ ಮೃತ,ಗಾಯಗೊಂಡವರಿಗೆ ವಿಮಾ ಮೊತ್ತವನ್ನು ಹೆಚ್ಚಿಸಿದೆ.ಆಸ್ಪತ್ರೆಗೆ ದಾಖಲಿಸಿದವರ ಮೇಲೆ ಪ್ರಕರಣ ದಾಖಲಿಸುವಂತಿಲ್ಲ.ಒಂದು ತಾಸಿನೊಳಗೆ ಆಸ್ಪತ್ರೆಗೆ ದಾಖಲಿಸಿದರೆ ಸರಕಾರವೆ ವೆಚ್ಚ ಭರಿಸಬೇಕೆಂದು ತಿಳಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದವರಿಗೆ ಬಿರುದು ನೀಡುವಂತೆ ತಿಳಿಸಿದೆ.ಅಲ್ಲದೆ ವಿಮಾ ಕಂಪನಿಯು ಪರಿಹಾರ ಮೊತ್ತವನ್ನು ಶ್ರೀಘ್ರ ನೀಡುವಂತೆ ತಿಳಿಸಿದೆ
‘ಮೋಟಾರ್ ವಾಹನಗಳ ತಿದ್ದುಪಡಿ ನಿಯಮ-2022’ ವಿಮಾ ಕಂಪನಿ, ಚಾಲಕರು ಮತ್ತು ಸಮಾಜದ ಹೊಣೆಯನ್ನು ಹೆಚ್ಚಿಸಿದೆ ಎಂದು ಹಿರಿಯ ನ್ಯಾಯವಾದಿ ಕೆ ಎಸ್ ಎನ್ ಅಭಿಪ್ರಾಯಪಟ್ಟಿದ್ದಾರೆ.ಮಂಗಳೂರು ನಗರ ಸಂಚಾರ ಪೊಲೀಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ವೆಲೆನ್ಸಿಯಾದ ರೋಶನ್ ನಿಲಯದಲ್ಲಿ ‘ಮೋಟಾರು ವಾಹನಗಳ ಕಾಯ್ದೆ ಮತ್ತು ಮೋಟಾರು ವಾಹನಗಳ ತಿದ್ದುಪಡಿ ನಿಯಮಗಳು-2023’ ರ ಕುರಿತು ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ತಿದ್ದುಪಡಿ ನಿಯಮಗಳು ವಿಮಾ ಕಂಪನಿಗಳಿಗೆ ಅಂಕುಶ ಹಾಕಿದೆ. ಹಿಟ್ ಆಂಡ್ ರನ್ ಕೇಸ್ ನಲ್ಲಿ ಮೃತಪಟ್ಟವರು, ಗಾಯಗೊಂಡವರಿಗೆ ವಿಮಾ ಕಂಪನಿಗಳು ನೀಡಬೇಕಾದ ಮೊತ್ತವನ್ನು ಹೆಚ್ಚಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸುವಂತಿಲ್ಲ ಎಂದು ತಿಳಿಸಿದೆ. ಅಲ್ಲದೆ ಅಪಘಾತವಾದ ಒಂದು ತಾಸಿನೊಳಗೆ ಆಸ್ಪತ್ರೆಗೆ ದಾಖಲಿಸಿದರೆ ಸರಕಾರವೆ ವೆಚ್ಚ ಭರಿಸಬೇಕೆಂದು ತಿಳಿಸಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದವರಿಗೆ ಬಿರುದು ನೀಡುವಂತೆ ತಿಳಿಸಿದೆ. ಅಲ್ಲದೆ ವಿಮಾ ಕಂಪನಿಯು ಪರಿಹಾರ ಮೊತ್ತವನ್ನು ಶ್ರೀಘ್ರ ನೀಡುವಂತೆ ತಿಳಿಸಿದೆ.
ಎಲ್ಲ ಸಂಚಾರ ಪೊಲೀಸ್ ಠಾಣೆಗಳಲ್ಲಿಯೂ ಕಾನೂನು ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದು.ಪೊಲೀಸರಿಗೆ ಕಾಯ್ದೆ ತಿದ್ದುಪಡಿಯ ಬಗ್ಗೆ ಅಗತ್ಯ ಮಾಹಿತಿ ಇದ್ದರೆ ಅನುಷ್ಠಾನ ಪರಿಣಾಮಕಾರಿಯಾಗಲು ಸಾಧ್ಯವಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಹೇಳಿದ್ದಾರೆ.