ಉಳಾಯಿಬೆಟ್ಟಲ್ಲಿ ಉಳಾಯಿ-ಪಿದಾಯಿ,ಅಂದು ‘ನಿಗೂಢ’.! ಇಂದು ‘ಮಮತಾ’.. ಕೈ ಕೊಟ್ಟವರಾರು.! ಸೇಡಿಗೆ ಸೇಡು.. ಮುಯ್ಯಿಗೆ ಮುಯ್ಯಿ..!

ಕರಾವಳಿ

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಇಂದು ನಡೆದಿದ್ದು, ನಿರೀಕ್ಷಿತ ಎಂಬಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರಿಕೇಶ್ ಶೆಟ್ಟಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಥಳೀಯವಾಗಿ ಕಾಂಗ್ರೆಸ್-ಎಸ್.ಡಿ.ಪಿ.ಐ ನಡುವೆ ಮೈತ್ರಿ ನಡೆದಿತ್ತು. ಕಾಂಗ್ರೆಸ್ ಬೆಂಬಲಿತರಾಗಿ ಮಮತಾ ಸನಿಲ್ ಅಭ್ಯರ್ಥಿಯಾಗಿದ್ದರು. ಆದರೆ ಆ ಚುನಾವಣೆಯಲ್ಲಿ ಒಂದು ಅಡ್ಡ ಮತದ ಪರಿಣಾಮ ಬಿಜೆಪಿಯ ಹರಿಕೇಶ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಡ್ಡ ಮತದ ಬಗ್ಗೆ ಕಾಂಗ್ರೆಸ್ ಎಸ್ ಡಿ ಪಿಐ ಮಧ್ಯೆ ಸ್ಥಳೀಯವಾಗಿ ವಾಕ್ಸಮರ ಭರ್ಜರಿಯಾಗಿ ನಡೆಯುತ್ತಲೇ ಇತ್ತು. ಕೊನೆಗೂ ಈ ಅಡ್ಡಮತ ಹಾಕಿದ್ದು ಯಾರು.?ಎಂಬುದು ಉಳಾಯಿಬೆಟ್ಟುನಾದ್ಯಾಂತ ನಿಗೂಢವಾಗಿಯೇ ಉಳಿಯಿತು.

ಆದರೆ ಈ ಬಾರಿಯೂ ಕಾಂಗ್ರೆಸ್ ನಿಂದ ಮಮತಾ ಸನೀಲ್ ಆಕಾಂಕ್ಷಿಯಾಗಿದ್ದರು. ಆದರೆ ಕೆಲವು ದಿನಗಳಿಂದ ಸರಣಿ ಸಭೆಗಳು ನಡೆದು ‘ಉಮ್ಮರ್’ ರನ್ನು ಈ ಬಾರಿ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಆದರೆ ಈ ಬಾರಿ ಕಾಂಗ್ರೆಸ್ ಎಸ್ ಡಿ ಪಿಐ ಮಧ್ಯೆ ಯಾವುದೇ ಹೊಂದಾಣಿಕೆ ನಡೆಯಲಿಲ್ಲ. ಅಧ್ಯಕ್ಷ ಅಭ್ಯರ್ಥಿಯಾಗಿ ಎಸ್ ಡಿ ಪಿಐ ಸೈನಾಝ್ ರನ್ನು ಕಣಕ್ಕಿಳಿಸಿತ್ತು.

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಒಟ್ಟು 11 ಸ್ಥಾನಗಳಿದ್ದು ಬಿಜೆಪಿ 5, ಕಾಂಗ್ರೆಸ್ 3, ಎಸ್ ಡಿ ಪಿಐ 3 ಸದಸ್ಯರಿದ್ದಾರೆ. ಕಾಂಗ್ರೆಸ್-ಎಸ್ ಡಿಪಿಐ ಪ್ರತ್ಯೇಕವಾಗಿ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಅನಾಯಾಸವಾಗಿ ಬಿಜೆಪಿಗೆ ಗೆಲುವು ಖಚಿತವಾಗಿತ್ತು.

ಆದರೆ ಬಿಜೆಪಿ ಸದ್ದಿಲ್ಲದೆ ಕಾಂಗ್ರೆಸ್-ಎಸ್ ಡಿಪಿಐ ಮಧ್ಯೆ ಒಳಗೊಳಗೆ ಮೈತ್ರಿ ನಡೆದಿರಬಹುದು. ದಾರಿ ತಪ್ಪಿಸಲು ಅಭ್ಯರ್ಥಿ ಹಾಕಿರಬಹುದು ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬರನ್ನು ಮೊದಲೇ ಸೆಟ್ ಮಾಡಿಕೊಂಡಿತ್ತು.

ಚುನಾವಣಾ ನಡೆದಾಗ ಬಿಜೆಪಿ-6, ಎಸ್ ಡಿ ಪಿಐ-3, ಕಾಂಗ್ರೆಸ್-2 ಮತ ಪಡೆದಿತ್ತು. ಕಾಂಗ್ರೆಸ್ ನ ಒಬ್ಬರು ಅಡ್ಡ ಮತದಾನ ನಡೆಸಿದ್ದರು. ಆದರೆ ಈ ಬಾರಿ ಅಡ್ಡ ಮತದಾನ ನಡೆಸಿದ್ದು ಮಮತಾ ಸನೀಲ್ ಎಂದು ತಿಳಿಯಲು ಯಾವ ತನಿಖೆಯೂ ಬೇಕಾಗಿರಲಿಲ್ಲ.ಈ ಬಾರಿ ‘ಮಮತಾ ಸನೀಲ್’ ಕೈ ಕೊಟ್ಟಿದ್ದಾರೆ ಅನ್ನುವ ಮಾತು ಜಗಜ್ಜಾಹೀರವಾಗಿದೆ. ಮಮತಾ ಸನೀಲ್ ಮೂರು ಬಾರಿ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದವರು. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡೆ, ಮಂಗಳೂರು ಉತ್ತರದ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದ, ಬಿಲ್ಲವ ಮುಖಂಡೆ, ಮಾಜಿ ಮೇಯರ್ ವೊಬ್ಬರ ಸಹೋದರಿಯಾಗಿದ್ದಾರೆ.! ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರ ಸಹೋದರಿಯೇ ಬಿಜೆಪಿಗೆ ಹೋಲ್ ಸೇಲ್ ಆಗಿ ಮಾರಾಟವಾಗುವುದಾದರೆ ಇಂತಹ ನಾಯಕರನ್ನು ಹೇಗೆ ನಂಬುವುದು ಎನ್ನುವುದು ಸ್ಥಳೀಯವಾಗಿ ಹರಿದಾಡುತ್ತಿರುವ ಮಾತು.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರಿಕೇಶ್ ಶೆಟ್ಟಿ ಬಗ್ಗೆ ಉಳಾಯಿಬೆಟ್ಟುವಿನಾದ್ಯಂತ ಒಳ್ಳೆಯ ಅಭಿಪ್ರಾಯವಿದೆ. ಕಳೆದ ಅವಧಿಯಲ್ಲಿ ಯಾವುದೇ ಭೇದ-ಭಾವ ನಡೆಸದೆ ಸಮಾನವಾಗಿ ಕೆಲಸ ಮಾಡಿಕೊಟ್ಟಿದ್ದಾರೆ ಎನ್ನುವ ಹೆಗ್ಗಳಿಕೆ ಇದೆ. ಪಕ್ಷ ಸಿದ್ಧಾಂತ ಏನೇ ಇದ್ದರೂ ವೈಯಕ್ತಿಕವಾಗಿ ಒಳ್ಳೆಯವರು ಎಂಬ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿದೆ.