ಧರ್ಮಸ್ಥಳ ಪೊಲೀಸ್ ಠಾಣಾಯ ಅ.ಕ್ರ. ಸಂ: 09/2018ರ ಪ್ರಕರಣದಲ್ಲಿ ಸರಿ ಸುಮಾರು ಏಳು ವರ್ಷಗಳಿಂದ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಎಸ್. ಏನ್ ಕಿಶೋರ್, ಸರಗೂರು ಹೆಚ್. ಡಿ ಕೋಟೆ, ಮೈಸೂರು ಎಂಬಾತನನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಹೆಡ್ ಕಾನ್ಸ್ ಟೇಬಲ್ ವೃಷಭ ಹಾಗೂ ಚರಣ್ ರಾಜ್ ರವರು ಮೈಸೂರ್ ಜಿಲ್ಲೆಯ ಹೆಚ್ ಡಿ ಕೋಟೆಯ ಸರಗೂರು ಎಂಬಲ್ಲಿಂದ ದಸ್ತಗಿರಿ ಮಾಡಿ ತಂದು ದಿನಾಂಕ: 08-05-20260 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
