ಬಿಜೆಪಿ ನಡೆಸುವ ಸೌಜನ್ಯ ಪರ ಹೋರಾಟಕ್ಕೆ ಸಂಸದ ಡಾ! ವೀರೇಂದ್ರ ಹೆಗ್ಗಡೆ ಭಾಗವಹಿಸುತ್ತಾರೆಯೇ ಬಿಜೆಪಿಗೆ ಬಿ.ಕೆ ಇಮ್ತಿಯಾಝ್ ಪ್ರಶ್ನೆ

ಕರಾವಳಿ

ಮಂಗಳೂರು : ಸೌಜನ್ಯ ಹೋರಾಟ ರಾಜ್ಯಕ್ಕೆ ಹಬ್ಬಿದ ನಂತರ ಬಿಜೆಪಿ ಹೋರಾಟಕ್ಕಿಳಿದಿದೆ ಬಿಜೆಪಿ ಹೋರಾಟಕ್ಕೆ ಸಂಸದ ಡಾ! ವೀರೇಂದ್ರ ಹೆಗ್ಗಡೆ ಭಾಗವಹಿಸುತ್ತಾರೆಯೇ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಪ್ರಶ್ನಿಸಿದ್ದಾರೆ. ಅವರು ಇಂದು (24-8-2023) ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆಗಸ್ಟ್ 28ರಂದು ಸೌಜನ್ಯ ಸಾವಿಗೆ ನ್ಯಾಯಕ್ಕೆ ಒತ್ತಾಯಿಸಿ ನಡೆಯಲಿರುವ ಬೆಳ್ತಂಗಡಿ ಚಲೋ ಬೆಂಬಲಿಸಿ ನಗರದಲ್ಲಿ ಜರುಗಿದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸೌಜನ್ಯ ಹತ್ಯೆ, ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ಎಡಪಂಥೀಯರು ನಿರಂತರ ಹೋರಾಟದಲ್ಲಿದ್ದಾರೆ ಸೌಜನ್ಯ ಹೋರಾಟ ರಾಜ್ಯಕ್ಕೆ ಹಬ್ಬುತ್ತಿರುವಾಗ ಬಿಜೆಪಿ ಹೋರಾಟದ ನಾಟಕ ಮಾಡುತ್ತಿದೆ ಜಿಲ್ಲೆಯ ವಿದ್ಯಾರ್ಥಿ ಯುವಜನರು 28ರ ಬೆಳ್ತಂಗಡಿ ಚಲೋ ಹೋರಾಟ ಬೆಂಬಲಿಸಬೇಕೆಂದು ಕರೆ ನೀಡಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಹಾನಗರ ಪಾಲಿಕೆ ಉಪಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಸಾಮರಸ್ಯ ಸಂಘಟನೆಯ ಸಂಚಾಲಕಿ ಮಂಜುಳಾ ನಾಯಕ್ ಮಾತನಾಡಿದರು.

ಡಿವೈಎಫ್ಐ ಜಿಲ್ಲಾ ಮುಖಂಡರಾದ ಯುವ ವಕೀಲರಾದ ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ರಫೀಕ್ ಹರೇಕಳ, ತಯ್ಯೂಬ್ ಬೆಂಗ್ರೆ, ಜಗದೀಶ್ ಬಜಾಲ್, ಭಾರತ ವಿದ್ಯಾರ್ಥಿ ಫೆಡರೇಶನ್ ನ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಪ್ರಥಮ್ ಬಜಾಲ್, ಮಾದುರಿ ಬೋಳಾರ, ಜನವಾದಿ ಮಹಿಳಾ ಸಂಘಟನೆಯ ಭಾರತೀ ಬೋಳಾರ, ಅಸುಂತ ಡಿಸೋಜ, ಪ್ರಮಿಳಾ ದೇವಾಡಿಗ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು ಮುಂತಾದವರು ಉಪಸ್ಥಿತರಿದ್ದರು.