ಸಿಂಗ್ ಈಸ್ ಕಿಂಗ್; ಕುಸಿದ ನಮೋ.!ಅಂತಾರಾಷ್ಟ್ರೀಯ PEW ಸರ್ವೇ

ರಾಷ್ಟ್ರೀಯ

ಯಾವಾಗ ಭಾರತವನ್ನು ಬಿಜೆಪಿ ತನ್ನ ಕೈ ವಶಪಡಿಸಿಕೊಂಡಿತೋ ಅಂದಿನಿಂದ ಭಾರತ ದೇಶಕ್ಕೆ ಸಂಕಟ ತಪ್ಪಿದ್ದಿಲ್ಲ! ಅದಕ್ಕೆ ಸಾಕ್ಷಿಯಾಗಿದೆ, PEW ರಿಸರ್ಚ್ ಸೆಂಟರ್ ನಡೆಸಿರುವ ಸರ್ವೆಯಿಂದ ಸಾಬೀತಾಗಿದೆ.

ಅಮೇರಿಕಾದ ಪ್ರಜೆಗಳಿಗೆ ಭಾರತ ದೇಶದೊಂದಿಗಿರುವ ಭಾತೃತ್ವ ಕುಂಠಿತಗೊಳ್ಳುತ್ತಿದೆ ಎಂದು ನ್ಯೂ ರಿಸರ್ಚ್ ಸೆಂಟರ್ ಸರ್ವೆಯಿಂದ ಸಾಬೀತಾಗಿದೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ನಮಗೆ ಗೊತ್ತೇ ಇಲ್ಲ ಅವರ ಬಗ್ಗೆ ನಾವುಗಳು ತಿಳಿದೇ ಇಲ್ಲ ಎಂದು ಅಮೇರಿಕದ ಶೇಕಡ 40% ನಾಗರಿಕರ ಹೇಳಿಕೆಯನ್ನು PEW ರಿಸರ್ಚ್ ಸೆಂಟರ್ ತನ್ನ ವರದಿಯಲ್ಲಿ ತಿಳಿಸಿದೆ. ಶೇ.51% ಅಮೆರಿಕದ ಪ್ರಜೆಗಳು ಭಾರತ ದೇಶದೊಂದಿಗೆ ಪ್ರೀತಿ, ಭಾತೃತ್ವ ಮತ್ತು ಭಾರತದೊಂದಿಗೆ ಅಭಿಮಾನವಿದೆ ಎಂದು ಈ ಸರ್ವೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 44% ಅಮೇರಿಕನ್ನರಿಗೆ ಭಾರತದೊಂದಿಗೆ ಸ್ನೇಹವಿಲ್ಲದ ಅಭಿಪ್ರಾಯವನ್ನು ಈ ಸರ್ವೇಯಲ್ಲಿ ಕಾಣಿಸಿದೆ. ಅಲ್ಲದೆ ಅಮೆರಿಕನ್ನರಿಗೆ ಭಾರತದೊಂದಿಗಿರುವ ಪ್ರೀತಿ, ವಿಶ್ವಾಸ, ಭಾತೃತ್ವ ಕಾಲಕಾಲಕ್ಕೆ ಕುಂಠಿತಗೊಳ್ಳುತ್ತಿದೆ ಎಂದು ಈ ಸರ್ವೆಯ ವರದಿಯಲ್ಲಿ ತಿಳಿದು ಬಂದಿದೆ.

2008ರಲ್ಲಿ ಮನ್ ಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿರುವ ಕಾಲದಲ್ಲಿ ಶೇಕಡಾ 68% ಅಮೇರಿಕನ್ನರು ಭಾರತದೊಂದಿಗೆ ವಿಶ್ವಾಸ,ಪ್ರೀತಿ, ವಾತ್ಸಲ್ಯ ಇಟ್ಟುಕೊಂಡಿದ್ದರು. ಆದರೆ ಅದು ಈಗ ಶೇಕಡ 51% ಕುಸಿದು ಇರುತ್ತದೆ ಎಂದು ಈ ಸರ್ವೇ ರಿಪೋರ್ಟ್ ನಿಂದ ತಿಳಿದು ಬಂದಿದೆ.

2008ರಲ್ಲಿ ಶೇಕಡ 14% ಅಮೇರಿಕನ್ನರಗೆ ಭಾರತದೊಂದಿಗೆ ಭಿನ್ನಬಿಪ್ರಾಯ, ಅಪ್ರಿಯತೆ ಇತ್ತು. ಅದು ನಂತರ 2023ರಲ್ಲಿ ಅಂದರೆ ಇದೀಗ ಶೇಕಡ 43% ಅಮೇರಿಕನ್ನರು ಭಾರತದೊಂದಿಗಿರುವ ಸ್ನೇಹ, ವಾತ್ಸಲ್ಯ ಭಾತೃತ್ವವನ್ನು ಕಡಿತಗೊಳಿಸಿದ್ದಾರೆ ಎಂದು ಈ ಸರ್ವೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಅದೇ ಸಮಯದಲ್ಲಿ ಚೈನಾ ಗಿಂತ ಭಾರತದೊಂದಿಗೆ ಅಮೇರಿಕನ್ನರು ಸ್ನೇಹ, ಸಂಬಂಧ ಇನ್ನೂ ಇದೆ ಎಂಬುದು ಸ್ವಲ್ಪ ಸಮಾಧಾನಕರವಾದ ಸಂಗತಿಯಾಗಿದೆ. ಶೇಕಡ 83% ಅಮೇರಿಕನ್ನರಿಗೆ ಚೈನಾದೊಂದಿಗೆ ದ್ವೇಷ,ಮನಸ್ತಾಪವಿದೆ ಎಂಬುದು ಸ್ವಲ್ಪ ಸಮಾಧಾನಕರವಾದ ವಿಷಯವಾಗಿದೆ ಎಂದು ಈ ಸರ್ವೆಯಿಂದ ತಿಳಿದು ಬರುತ್ತದೆ. ಚೈನಾಕ್ಕಿಂತ ಭಾರತ ದೇಶವನ್ನು ಅಮೇರಿಕನ್ನರು ಇಷ್ಟಪಡುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಯಾವುದೇ ವಿಶ್ವಾಸ ಅಮೇರಿಕನ್ನರಿಗೆ ಇಲ್ಲವಾಗಿದೆ ಎಂದು ಈ ಸರ್ವೇ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ.

ಅಂತರಾಷ್ಟ್ರೀಯ ವಿಷಯದ ಬಗ್ಗೆ ಮಧ್ಯ ಪ್ರವೇಶ ಮಾಡುವುದರ ಬಗ್ಗೆ ಒಂದೊಂದು ದೇಶದ ನಾಯಕರ ವಿಷಯದಲ್ಲಿ ನಿಮ್ಮ ಆಸಕ್ತಿ ಏನು? ಎಂದು ಅಮೇರಿಕಾದ ಪ್ರಜೆಗಳನ್ನು ಈ ಸರ್ವೆಯಲ್ಲಿ ಕೇಳಲಾಗಿತ್ತು ಒಂದೊಂದು ದೇಶದ ನಾಯಕರ ಬಗ್ಗೆ ಅಭಿಪ್ರಾಯವನ್ನು ನೀಡಲು ಅಮೇರಿಕನ್ನರಿಗೆ ಈ ಸರ್ವೇ ನಡೆಸುವ ಸಂಸ್ಥೆ ಕೇಳಿದಾಗ ಒಂದೊಂದು ರಾಷ್ಟ್ರದ ನಾಯಕರಿಗೆ ಒಂದೊಂದು ಅಭಿಪ್ರಾಯವನ್ನು ನೀಡಿದರು ಆದರೆ ಅಮೇರಿಕದ ಶೇಕಡ 40% ಜನರು ಮೋದಿ ಎಂಬ ನಾಯಕನ ಬಗ್ಗೆ ನಾವುಗಳು ಕೇಳಲೇ ಇಲ್ಲ ಎಂಬ ಉತ್ತರವನ್ನು ನೀಡಿರುತ್ತಾರೆ. ಶೇಕಡಾ 40% ಅಮೆರಿಕನ್ನರು ನರೇಂದ್ರ ಮೋದಿ ಅವರ ಬಗ್ಗೆ ನಮಗೆ ವಿಶ್ವಾಸವೇ ಇಲ್ಲ ಎಂದು ಹೇಳಿರುತ್ತಾರೆಂದು ಸರ್ವೇ ವರದಿ ಮಾಡಿರುತ್ತದೆ. 2018ರಲ್ಲಿ ಶೇಕಡಾ 5.6% ಅಮೆರಿಕನ್ನರು ಮೋದಿಯ ಬಗ್ಗೆ ಅಭಿಮಾನವಿದೆ ಎಂದು ಹೇಳಿದ್ದರು, ಅದೇ 2019ರಲ್ಲಿ ಅದು ಶೇಕಡಾ 6% ಆಗಿತ್ತು. ಆದರೆ 2023ರಲ್ಲಿ ಬಾರಿ ಕುಸಿತಗೊಂಡು 1.7% ಶತಮಾನಕ್ಕೆ ಬಂದು ತಲುಪಿತು ಶೇಕಡ 20.7% ಅಮೆರಿಕನ್ನರು ಮೋದಿಯವರು ತೀರ ವಿಶ್ವಾಸವಿಲ್ಲದ ನಾಯಕ ಎಂದು ಅಭಿಪ್ರಾಯ ಪಟ್ಟಿರುತ್ತಾರೆಂದು ಸರ್ವೇ ವರದಿ ಮಾಡಿದೆ. 2019ರಲ್ಲಿ ಅದು ಶೇಕಡ 17% ತಲುಪಿತ್ತು ಈ ಲೆಕ್ಕಾಚಾರ.

ಸದ್ಯದ ಮಟ್ಟಿಗೆ ನರೇಂದ್ರ ಮೋದಿ ಅವರ ಮುಖವಾಡ ದಿನದಿಂದ ದಿನಕ್ಕೆ ಒಂದೊಂದಾಗಿ ಕುಸಿಯುತ್ತಾ ಬಂದಿರುತ್ತದೆ. ವಿಶ್ವದ ಮುಂದೆ ಮಾತ್ರವಲ್ಲದೆ ಮೋದಿ ನೇತೃತ್ವದ ಭಾರತದ ಪರಿಸ್ಥಿತಿಯು ಅದೇ ಆಗಿರುತ್ತದೆ ಎಂದು ಈ ಸರ್ವೇ ತನ್ನ ವರದಿಯಲ್ಲಿ ಹೇಳಿರುತ್ತದೆ.