ಆಂಧ್ರದಲ್ಲಿ ಮೆಗಾ ಪಾಲಿಟಿಕ್ಸ್ ಹೈಡ್ರಾಮಾ: ಮುಂಜಾನೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್

ರಾಷ್ಟ್ರೀಯ

ದಕ್ಷಿಣ ಭಾರತದ ಆಂಧ್ರಪ್ರದೇಶ ಮೆಗಾ ಪಾಲಿಟಿಕ್ಸ್ ಹೈಡ್ರಾಮಾ ಕ್ಕೆ ಫೇಮಸ್. ಇಂದು ಮುಂಜಾನೆ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರವರನ್ನು ಅರೆಸ್ಟ್ ಮಾಡಲಾಗಿದ್ದು, ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಸ್ಕಿಲ್ ಡೆವೆಲಪ್‌ಮೆಂಟ್ ಯೋಜನೆ ಹಗರಣ ಸಂಬಂಧ ಮುಂಜಾನೆ ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

2014 ರಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಂಧ್ರದ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ 371 ಕೋಟಿ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿತ್ತು. ಟೆಂಡರ್​ ಕರೆಯದೆ 371 ಕೋಟಿ ಹಣ ಬಿಡುಗಡೆ ಮಾಡಿದ ಅರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ A1 ಅರೋಪಿಯಾಗಿದ್ದರು ಚಂದ್ರಬಾಬು ನಾಯ್ಡು. ಹಗರಣದ ತನಿಖೆಯನ್ನು ಸಿಐಡಿಗೆ ಸಿಎಂ ಜಗನ್​​ ಒಪ್ಪಿಸಿದ್ದರು. ಹಗರಣದ ಬಗ್ಗೆ ಉತ್ತರಿಸುವಂತೆ ಸೂಚಿಸಲಾಗಿತ್ತು. ಆದರೆ ಈವರೆಗೆ ಸೂಕ್ತ ಉತ್ತರ ನೀಡದ ಚಂದ್ರಬಾಬು ನಾಯ್ಡು.ಹೀಗಾಗಿ ಚಂದ್ರಬಾಬು ನಾಯ್ಡು ಬಂಧನಕ್ಕೆ ಸೂಚನೆ ನೀಡಿತ್ತು ಹೈಕೋರ್ಟ್​. ಹೈಕೋರ್ಟ್​ ಸೂಚನೆ ಮೇರೆಗೆ ಬೆಳಗಿನ ಜಾವ 6 ಗಂಟೆಗೆ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಟಿಡಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ:

ಸಿಐಡಿ ಪೊಲೀಸರು ಬಂಧಿಸಲು ತೆರಳಿದ್ದಾಗ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ ಎದುರಿಸಿದರು. ಈ ವೇಳೆ ಎಸ್‌ಪಿಜಿ ಪಡೆಗಳು ಸಹ ಪೊಲೀಸರಿಗೆ ವಶಕ್ಕೆ ಪಡೆಯಲು ಅನುಮತಿ ನೀಡಲಿಲ್ಲ. ನಿಯಮಗಳ ಪ್ರಕಾರ ಬೆಳಗ್ಗೆ 5.30 ರವರೆಗೆ ನಾಯ್ಡುರನ್ನು ಭೇಟಿಯಾಗಲು, ತಲುಪಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಎಸ್‌ಪಿಜಿ ಪಡೆಗಳು ತಿಳಿಸಿದರು. ಹೀಗಾಗಿ ಬೆಳಗ್ಗೆ 6 ಗಂಟೆಯವರೆಗೆ ಕಾದು ನಾಯ್ಡು ಹೊರಹೋಗುವ ಸಂದರ್ಭದಲ್ಲಿ ನಾಯ್ಡು ಅವರ ವಾಹನ ಬಾಗಿಲು ಬಡಿದು ಕೆಳಗಿಳಿಸಿ ಬಂಧಿಸಿದ್ದಾರೆ..

ವಾಹನದಿಂದ ಚಂದ್ರಬಾಬು ನಾಯ್ಡು ಅವರನ್ನು ಕೆಳಗಿಳಿಸಿದ ಬಳಿಕ ಸ್ಕಿಲ್ ಡೆವೆಲಪ್‌ಮೆಂಟ್ ಹಗರಣ ಸಂಬಂಧ ಬಂಧಿಸಲಾಗುತ್ತಿದೆ ಎಂದು ಡಿಐಜಿ ಅವರಿಗೆ ತಿಳಿಸಿದರು ಈ ವೇಳೆ ಕಾರ್ಯಕರ್ತರಿಂದ ಪ್ರತಿರೋಧದ ನಡುವೆಯೂ ವಶಕ್ಕೆ ಪಡೆದ ಪೊಲೀಸರು. ಸದ್ಯ ಚಂದ್ರಬಾಬು ನಾಯ್ಡುರನ್ನು ವಿಜಯವಾಡಕ್ಕೆ ಶಿಫ್ಟ್ ಮಾಡಿದ್ದಾರೆ.