ಏಳು ಸಲ ಗರ್ಭಪಾತ ಮಾಡಿಸಿದ್ದಾನೆ ಎಂದು ನಟಿ ವಿಜಯಲಕ್ಷ್ಮೀ ರಾಜಕಾರಣಿಯೊಬ್ಬರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡಿನಲ್ಲಿ ಖ್ಯಾತಿ ಪಡೆದಿರುವ ರಾಜಕಾರಣಿ ಸೀಮನ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ.
ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿದ್ದಾರೆ.ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿರುವ ವಿಜಯಲಕ್ಷ್ಮೀ ನಾಮ್ ತಮಿಳರ್ ಕಟ್ಟಿ (ಎನ್.ಟಿಕೆ) ನಾಯಕರೂ ಆಗಿರುವ ಸೀಮನ್ ಜೊತೆ ಮದುವೆಯಾಗಿದ್ದೇನೆ. ಆನಂತರ ಅವರು ನನಗೆ ಮೋಸ ಮಾಡುತ್ತ ಬಂದರು. ಚಿನ್ನಾಭರಣ ದೋಚಿದರು. ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಅವರಿಂದ ನನಗೆ ಲೈಂಗಿಕ ದೌರ್ಜನ್ಯ ಕೂಡ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಚೆನ್ನೈ ನ ಪೊಲೀಸ್ ಆಯುಕ್ತರ ಸಹಾಯ ಪಡೆದು ದೂರು ದಾಖಲಿಸಿದ್ದಾರೆ. ನಿನ್ನೆ ಕೂಡ ಫೇಸ್ ಬುಕ್ ಲೈವ್ ಗೆ ಬಂದು, ಈ ವಿಚಾರ ಮಾತನಾಡಿದ್ದಾರೆ. ಸದ್ಯ ಸೀಮನ್ ಅವರಿಗೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.