October 24ರ ವರೆಗೆ ಶಾಲೆಗಳಿಗೆ ದಸರಾ ರಜೆ

ರಾಜ್ಯ

ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯಂತೆ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪರೀಕ್ಷೆಗಳು ಮುಕ್ತಾಯವಾಗಿದ್ದು, ಮೊದಲನೇ ಅವಧಿಯ ಶಾಲಾ ದಿನಗಳು ಮುಕ್ತಾಯಗೊಳ್ಳಲಿದ್ದು, ಇಂದಿನಿಂದ October 24ರವರೆಗೆ ದಸರಾ ರಜೆ ಇರಲಿದೆ.

October 8ರಿಂದ ದಸರಾ ರಜೆ ಆರಂಭವಾಗಲಿದೆ. ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪರೀಕ್ಷೆಗಳು ಮುಕ್ತಾಯವಾಗಿವೆ. ಹೀಗಾಗಿ October 8ರಿಂದ October 24ರ ವರೆಗೆ ದಸರಾ ರಜೆ ಇರಲಿದ್ದು, October 25ರಿಂದ 2ನೇ ಅವಧಿಯ ಶಾಲಾ ಕರ್ತವ್ಯದ ದಿನಗಳು ಆರಂಭವಾಗಲಿವೆ.

ಆದರೆ, ಕೊಡಗು ಜಿಲ್ಲೆಯ ಶಾಲೆಗಳಿಗೆ October 10ರಿಂದ October 25ರವರೆಗೆ ದಸರಾ ರಜೆ ಘೋಷಿಸಲಾಗಿದ್ದು, ಮೊದಲಿನ ರಜೆಯನ್ನು ಮಾರ್ಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ